April 22, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಹೋಲಿ ರೆಡಿಮರ್ ಚರ್ಚ್ ನಲ್ಲಿ ಪವಿತ್ರ ಗುರುವಾರ, ಶುಭ ಶುಕ್ರವಾರ ಹಾಗೂ ಈಸ್ಟರ್ ಹಬ್ಬದ ಆಚರಣೆ

ಬೆಳ್ತಂಗಡಿ : ಹೋಲಿ ರೆಡಿಮರ್ ಚರ್ಚ್ ನಲ್ಲಿ ತಪಸ್ಸು ಕಾಲದ ಅಂತ್ಯ ದಲ್ಲಿ ಕ್ರೈಸ್ತರು ಆಚರಿಸುವ ಮೂರು ದಿನಗಳ ಪವಿತ್ರ ಆಚರಣೆಯನ್ನು ಅತ್ಯoತ ಶೃದ್ದಾ ಭಕ್ತಿಯಿಂದ ಆಚರಿಸಲಾಯಿತು.

ಪವಿತ್ರ ಗುರುವಾರ : ಈ ದಿನವನ್ನು ಯೇಸು ಕ್ರಿಸ್ತನ ಪವಿತ್ರ ಪೌರೋಹಿತ್ಯವನ್ನು ನೆನಪಿಸುವ ತನ್ನ ಶಿಷ್ಯರೊಂದಿಗೆ ಕಡೆಯ ಭೋಜನ ಹಾಗೂ ಯೇಸುವಿನ ಶಿಷ್ಯರನ್ನು ಪ್ರತಿನಿಧಿಸುವ 12 ಭಕ್ತರ ಪಾದಗಳನ್ನು ಗುರುಗಳು ತೊಳೆದು ಸಾಂಕೇತಿಕವಾಗಿ ಯೇಸುವಿನ ಕರೆಯಂತೆ ನಾನು ನಿನಗೆ ಮಾಡಿದಂತೆ ನೀನು ಕೂಡ ಇತರರ ಕಷ್ಟದಲ್ಲಿ ಭಾಗಿಯಾಗಲು ಈ ಆಚರಣೆ ಸೂಚಿಸುತ್ತದೆ.
ಈ ದಿನವನ್ನು ಧರ್ಮ ಸಭೆಯ ಎಲ್ಲಾ ಧರ್ಮ ಗುರುಗಳ ದಿನವನ್ನಾಗಿ ಕೂಡ ಆಚರಿಸಲಾಗುತದೆ. ನಮ್ಮ ಚರ್ಚಿನ ಪ್ರಧಾನ ಧರ್ಮ ಗುರು ಅತೀ ವಂದನೀಯ ಗುರು ಫಾ. ವಾಲ್ಟರ್ ಡಿ’ಮೆಲ್ಲೊ ಹಾಗೂ ವಂದನೀಯ ಫಾ. ಕ್ಲಿಫರ್ಡ್ ಪಿಂಟೊರವರನ್ನು ಸನ್ಮಾನಿಸಲಾಯಿತು.

ಶುಭ ಶುಕ್ರವಾರ:
ಈ ದಿನವು ಎಲ್ಲಾ ಕ್ರೈಸ್ತ ಭಾಂಧವರಿಗೆ ಪವಿತ್ರ ದಿನ. ದೇವಾಲಯದಲ್ಲಿ ಬೆಳಿಗ್ಗೆ 7:30 ಘಂಟೆಗೆ ಶಿಲುಬೆಯ ಹಾದಿಯನ್ನು ನಡೆಸಿ ಈ ದಿನವನ್ನು ಪ್ರಾರಂಭಿಸಲಾಯಿತು. ಭಕ್ತರು ಇಡಿ ದಿನ ಉಪವಾಸ ನಿಂತು ಸಂಜೆ ನಡೆದ ಯೇಸುವಿನ ಶಿಲುಬೆಯ ಮರಣದ ಪವಿತ್ರ ಆಚರಣೆಯಲ್ಲಿ ಅತ್ಯoತ ಶೃದ್ದಾ ಭಕ್ತಿಯಿಂದ ಭಾಗವಹಿಸಿದರು.


ಈಸ್ಟರ್ ಹಬ್ಬ:
ಯೇಸುವಿನ ಮರಣದ ಮೂರನೆ ದಿನವನ್ನು ಪುನಾರುತ್ಥಾನ ದಿನ ಈಸ್ಟರ್ ಹಬ್ಬವಾಗಿ ಆಚರಿಸಲಾಗುತ್ತದೆ. ದೇವಾಲಯಲ್ಲಿ ಸಂಜೆ 7 ಘಂಟೆಗೆ ಹೊಸ ಬೆಂಕಿಯನ್ನು ಆಶೀರ್ವಾದಿಸಿ ಅದರಿಂದ ಪಾಸ್ಕಾ ಹಬ್ಬದ ಮೇಣದ ಬತ್ತಿಯನ್ನು ಉರಿಸಿ ದೇವಾಲಯ ಪ್ರವೀಸಿಸಲಾಯಿತು. ನಂತರ ಸಂಭ್ರಮದ ಪವಿತ್ರ ಬಲಿಪೂಜೆ ನಡೆಯಿತು. ಬಲಿಪೂಜೆಯ ಸಮಯದಲ್ಲಿ ನೀರನ್ನು ಆಶಿರ್ವಾದಿಸಿ ಭಕ್ತರಿಗೆ ಸಿಂಪಡಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು.


ಬಲಿಪೂಜೆಯ ನಂತರ ಚರ್ಚಿನ ಪ್ರಧಾನ ಗುರುಗಳಾದ ವಂದನೀಯ ಫಾ. ವಾಲ್ಟರ್ ಡಿ’ಮೆಲ್ಲೊ ರವರ ಗುರು ದೀಕ್ಷೆಯ 42 ನೇ ವರ್ಷದ ವಾರ್ಷಿಕ ದಿನವನ್ನು ಶಾಲು, ಫಲ ಪುಷ್ಪ ಹಾಗೂ ಹೂ ಗುಚ್ಛ ನೀಡಿ ಗೌರವಿಸಲಾಯಿತು.
ಸಂಭ್ರಮದ ಬಲಿಪೂಜೆಗೆ ಪ್ರಧಾನ ಗುರುಗಳಾಗಿ ವಂದನೀಯ ಫಾ. ವಾಲ್ಟರ್ ಡಿ’ ಮೆಲ್ಲೊ ಹಾಗೂ ಸಹ ಗುರುಗಳಾಗಿ ಫಾ. ಕ್ಲಿಫರ್ಡ್ ಪಿಂಟೊ, ಫಾ. ಜೋನ್ ಪಿಂಟೊ, ಫಾ. ಅಜೇಯ್ ಹಾಗು ಫಾ. ಆಶಿತ್ ರವರು ಭಾಗವಹಿಸಿದ್ದರು.
ಈ ಎಲ್ಲಾ ಮೂರು ದಿನಗಳ ಕಾರ್ಯಕ್ರಮಗಳ ನಿರ್ವಹಣೆಯನ್ನು ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೊ, ಸಂಯೋಜಕಿ ಪೌಲಿನ್ ರೇಗೊ, 18 ವಾಳೆಯ ಗುರಿಕಾರರು ಹಾಗು ಚರ್ಚಿನ ಭಕ್ತ ವೃಂದ ಸಹಕರಿಸಿದರು.

Related posts

ಕಲ್ಮಂಜ ಪ್ರೌಢಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ

Suddi Udaya

ಸೌಜನ್ಯ ಹೋರಾಟದ ನೆಪದಲ್ಲಿ ತೇಜೋವಧೆ ಸರಿಯಲ್ಲ : ಭಾಸ್ಕರ್ ಧರ್ಮಸ್ಥಳ

Suddi Udaya

ಬಂದಾರು: ಕುಂಟಾಲಪಲ್ಕೆ ಸ.ಹಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ ಪುನರ್ ರಚನೆ

Suddi Udaya

ಬೆಳ್ತಂಗಡಿ ಶ್ರೀ ಧ. ಮಂ.ಆಂ.ಮಾ. ಶಾಲೆಯಲ್ಲಿ ಆಟಿದ ಕೂಟ

Suddi Udaya

ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘ ನೂತನ ಸಮಿತಿಗೆ ತಾಲೂಕಿನ ಐದು ಸದಸ್ಯರ ಆಯ್ಕೆ

Suddi Udaya

ವಿಶ್ವ ಹಿಂದೂ ಪರಿಷತ್ ಇಂದಬೆಟ್ಟು -ನಾವೂರು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ:ನಾವೂರು ಪೇಟೆಯಿಂದ ಇಂದಬೆಟ್ಟು ದೇವಸ್ಥಾನಕ್ಕೆ ಭಜನೆ ಮೂಲಕ ಶ್ರೀ ಮಹಾಗಣಪತಿ ದೇವರ ಮೂರ್ತಿಯ ವೈಭವದ ಮೆರವಣಿಗೆ

Suddi Udaya
error: Content is protected !!