ಕಾರ್ಕಳ: ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ನಡೆಸುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಜೆ ಇ ಇ ( ಮೈನ್ ) 2025 ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ 202 ವಿದ್ಯಾರ್ಥಿಗಳು ತೇರ್ಗಡೆ ಪಡೆಯುವ ಮೂಲಕ ಮುಂಬರುವ ಜೆ ಇ ಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳಾದ ಚೇತನ್ ಗೌಡ ಎನ್. ಎಸ್. ೯೯.೭೬೫೬೪೬೩ ಪರ್ಸೆಂಟೈಲ್ ಮೂಲಕ AIR ( ಆಲ್ ಇಂಡಿಯಾ ರ್‍ಯಾಂಕ್ ) 733ನೇ ಕೆಟಗರಿ ರ್‍ಯಾಂಕ್, ಸಾನಿಕ ಕೆ. ಎನ್ ೯೯.೫೩೮೫೫೯೪ ಪರ್ಸೆಂಟೈಲ್, ಮೋಹಿತ್. ಎಂ ೯೯.೪೯೮೨೦೯೯ ಪರ್ಸೆಂಟೈಲ್ ಮೂಲಕ 29ನೇ ಕೆಟಗರಿ ರ್‍ಯಾಂಕ್, ಸುಮಂತ ಗೌಡ ಎಸ್. ಡಿ ೯೯.೧೩೦೭೧೧೨ ಪರ್ಸೆಂಟೈಲ್, ಎಚ್. ಎ ರಾಜೇಶ್ ೯೯.೧೦೫೫೪೮೫ ಪರ್ಸೆಂಟೈಲ್, ಎಂ. ಮಂಜುನಾಥ್ ೯೯.೦೧೭೪೫೨೫ ಪರ್ಸೆಂಟೈಲ್, ಟಿ. ಪ್ರದೀಪ್ ೯೮.೭೯೧೧೫೮೦ ಪರ್ಸೆಂಟೈಲ್ ಮೂಲಕ 103ನೇ ಕೆಟಗರಿ ರ್‍ಯಾಂಕ್, ಮೋನಿಕ ಕೆ. ಪಿ ೯೮.೫೪೦೦೦೦೬ ಪರ್ಸೆಂಟೈಲ್ ಮೂಲಕ 126ನೇ ಕೆಟಗರಿ ರ್‍ಯಾಂಕ್, ಸಾಚಿ ಶಿವಕುಮಾರ್ ಕಡಿ ೯೮.೮೫೦೦೨೯೩ ಪರ್ಸೆಂಟೈಲ್, ತೇಜಸ್ ವಿ. ನಾಯಕ್ ೯೮.೭೧೧೬೨೧೫ ಪರ್ಸೆಂಟೈಲ್, ಹೇಮಂತ್ ಕುಮಾರ್ ೯೮.೫೮೧೬೧೮೭ ಪರ್ಸೆಂಟೈಲ್, ಯೋಗೇಶ್ ದೀಪಕ್ ನಾಯ್ಕ್ ೯೮.೫೨೧೦೨೩೨ ಪರ್ಸೆಂಟೈಲ್, ಆಯುಷ್ ಅರ್ಜುನ್. ಪಿ ೯೮.೪೩೪೨೫೨೧ ಪರ್ಸೆಂಟೈಲ್, ಗಣೇಶ್.ಜಿ ೯೮.೩೧೨೨೪೩ ಪರ್ಸೆಂಟೈಲ್, ಪ್ರಜ್ವಲ್ ಎಸ್. ಎನ್ ೯೮.೨೩೭೨೮೭೬ ಪರ್ಸೆಂಟೈಲ್, ಪ್ರಜ್ವಲ್ ಪಿ. ನಾಯ್ಕ್ ೯೮.೦೮೪೪೦೭ ಪರ್ಸೆಂಟೈಲ್ ಗಳಿಸಿದ್ದಾರೆ.
ಎಚ್. ಎ ರಾಜೇಶ್ ಭೌತಶಾಸ್ತ್ರದಲ್ಲಿ100 ಪರ್ಸೆಂಟೈಲ್ ಗಳಿಸುವ ಜೊತೆಗೆ ಸುಮಾರು 30 ವಿದ್ಯಾರ್ಥಿಗಳು ವಿಷಯವಾರು 99 ಪರ್ಸೆಂಟೈಲ್ ಗಿಂತ ಅಧಿಕ ಅಂಕ ಗಳಿಸಿರುತ್ತಾರೆ.
99 ಪರ್ಸೆಂಟೈಲಿಗಿಂತ ಅಧಿಕ 06 ವಿದ್ಯಾರ್ಥಿಗಳು, 98ಕ್ಕಿಂತ ಅಧಿಕ 16, 95ಕ್ಕಿಂತ ಅಧಿಕ 54, 90 ಪರ್ಸೆಂಟೈಲ್ ಗಿಂತ ಮೇಲ್ಪಟ್ಟು120 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ತಾಂತ್ರಿಕ ವಿದ್ಯಾಲಯಗಳಾದ ಎನ್ ಐ ಟಿ, ಐ ಐ ಐ ಟಿ ಮೊದಲಾದ ಸಂಸ್ಥೆಗಳಲ್ಲಿ ಬಿ. ಇ ಪದವಿಗೆ ಪ್ರವೇಶ ಪಡೆಯುವ ಅವಕಾಶದ ಜೊತೆಗೆ ಐ ಐ ಟಿ ಸಂಸ್ಥೆ ಸೇರಲು ಮಾನದಂಡವಾಗಿರುವ ಜೆಇಇ ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆ ಪಡೆದಿರುತ್ತಾರೆ.
ಸಂಸ್ಥೆಯು ಆರಂಭದ ವರ್ಷದಿಂದಲೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಫಲಿತಾಂಶ ಗಳಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಜೆ ಇ ಇ (ಮೈನ್) ಪರೀಕ್ಷೆಯ ಸಂಯೋಜಕರಾದ ನಂದೀಶ್ ಎಚ್. ಬಿ, ಆದಿತ್ಯ ವಟಿ ಕೆ ಮತ್ತು ವಿನಯಕುಮಾರ್ ರವರು ಅಭಿನಂದನೆ ಸಲ್ಲಿಸಿದ್ದಾರೆ.