ನಾರಾವಿ : ಇಲ್ಲಿಯ ಮಂಜುನಗರ ಮಿತ್ತೊಟ್ಟು ಎಂಬಲ್ಲಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಎ.30ರಂದು ನಡೆದಿದೆ.
ಘಟನೆ ವಿವರ: ನಾರಾವಿ ಗ್ರಾಮದ ಮಂಜುನಗರ ಮಿತ್ತೊಟ್ಟು ತಿರುವು ಎಂಬಲ್ಲಿ ಗುರುವಾಯನಕೆರೆ-ಕಾರ್ಕಳ ಸಾರ್ವಜನಿಕ ರಸ್ತೆಯಲ್ಲಿ ಕಾರು ಚಾಲಕ ಗಣೇಶ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಕಾರು ಚಾಲನಾ ಹತೋಟಿ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಕಾರು ಜಖಂಗೊಂಡು ತಿರುಗಿ ನಿಂತಿದ್ದು, ಕಾರಿನಲ್ಲಿದ್ದ ಜೀವನ್ ಕೆ ಬಲ ಭುಜಕ್ಕೆ ಗುದ್ದಿದ ಗಾಯ ಹಾಗೂ ಶಶಾಂಕ ರವರಿಗೆ ಎದೆಗೆ ಗುದ್ದಿದ ಗಾಯವಾಗಿ, ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.