ನಡ: ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ನರಸಿಂಹಗಡ ನಡ ಗ್ರಾಮ ಇದರ ವತಿಯಿಂದ ನಡ ಗ್ರಾಮದ ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದ ವಠಾರದಲ್ಲಿ ಮೇ 3-4ರಂದು ನಡೆಯುವ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭಾ ಉದ್ಘಾಟನಾ ಸಮಾರಂಭವು ಮೇ 3ರಂದು ರಾತ್ರಿ 7:30 ರಂದು ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಕೆ. ಮೋಹನ್ ಕುಮಾರ್ ಉದ್ಘಾಟಿಸಿ ಮಾತನಾಡಿದರು.ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಡಾ. ಪ್ರದೀಪ್ ಎ. ಅಧ್ಯಕ್ಷ ತೆಯನ್ನು ವಹಿಸಿದ್ದರು. ಬಂಗಾಡಿ ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ ಇರ್ತಿಲಾಲ್, ಪಡ್ಪು ಹಾ.ಉ.ಸಂಘದ ಅಧ್ಯಕ್ಷ ಪ್ರವೀಣ್ ವಿ.ಜಿ. ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ತುಳು ಭಕ್ತಿಗೀತೆ ಬಿಡುಗಡೆ ಹಾಗೂ ನೃತ್ಯ ಭಜನಾ ಮಾರ್ಗದರ್ಶಕರಿಗೆ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ್ ತಂತ್ರಿ, ತಿಮ್ಮಪ್ಪ ಗೌಡ ಕಡ್ತ್ಯರು, ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ, ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪೂರ್ವಾಧ್ಯಕ್ಷ ಉಮೇಶ್ ಹತ್ಯಡ್ಕ, ಸಮಿತಿ ಕೋಶಾಧಿಕಾರಿಗಳಾದ ಪುರುಷೋತ್ತಮ್ ಶೆಣೈ, ಚೆನ್ನಕೇಶವ ಗೌಡ ಬೋಜಾರ, ಉದ್ಯಮಿ ಜಯಂತ್ ಗೌಡ, ಸುಭಾಶ್ಚಂದ್ರ ಎನ್.ಬಿ., ಅಧ್ಯಕ್ಷರು, ವಿ.ಹಿಂ.ಪ. ನಡ, ಕುಶಾಲಪ್ಪ ಗೌಡ ಅಧ್ಯಕ್ಷರು, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ, ನರಸಿಂಹಗಡ, ನಡ, ತುಕರಾಮ ಗೌಡ, ಬೋಜಾರ ಪ್ರಗತಿಪರ ಕೃಷಿಕರು, ಶಾಮ್ ಸುಂದರ್, ಗಣೇಶ್ ಗೌಡ ಉಪಸ್ಥಿತರಿದ್ದರು.
ಸುಚಿತ್ರಾ ಮತ್ತು ಬಳಗ ಪ್ರಾರ್ಥಿಸಿದರು. ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಉಪಾಧ್ಯಕ್ಷ ಅಜಿತ್ ಕುಮಾರ್ ಆರಿಗಾ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಕರುಣಾಕರ ಗೌಡ ಬೋಜಾರ ವಂದಿಸಿದರು.