23.6 C
ಪುತ್ತೂರು, ಬೆಳ್ತಂಗಡಿ
May 4, 2025
Uncategorizedಕರಾವಳಿಜಿಲ್ಲಾ ಸುದ್ದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿರಾಜ್ಯ ಸುದ್ದಿಶುಭ ವಿವಾಹ

ಧರ್ಮಸ್ಥದಲ್ಲಿ 53ನೇ ವರ್ಷದ ಸಾಮೂಹಿಕ ವಿವಾಹ75 ಜೋಡಿ ಸತಿ-ಪತಿಗಳಾಗಿ ಗೃಹಸ್ಥಾಶ್ರಮಕ್ಕೆ


ಧರ್ಮಸ್ಥಳ : ನಾಡಿನ ಪುಣ್ಯ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ ೩ ರಂದು ಸಂಜೆ 6.48ರ ಗೋಧೂಳಿ ಲಗ್ನ ಸುಮೂರ್ಹದಲ್ಲಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ವೇದ ಘೋಷ ಮಂತ್ರ ಪಠಣದೊಂದಿಗೆ ನಡೆದ 53ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 75 ಜೋಡಿ ಸತಿ-ಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡಿನಲ್ಲಿ ಬೆಳಿಗ್ಗೆ ಡಾ. ಹೆಗ್ಗಡೆಯವರು ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಕಣ ವಿತರಿಸಿದರು. ಸಂಜೆ ವಧು-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾ

ಭವನಕ್ಕೆ ಮೆರವಣಿಗೆಯಲ್ಲಿ ಆಗಮಿಸಿದರು. ಅಲ್ಲಿ ಡಾ. ಹೆಗ್ಗಡೆ ದಂಪತಿಗಳು, ಕರ್ನಾಟಕ ಸರಕಾರದ ದೆಹಲಿ ಪ್ರತಿನಿಧಿ ಟಿ.ಬಿ ಜಯಚಂದ್ರ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಹಾಗೂ ಅತಿಥಿಗಣ್ಯರು ವಧುವಿಗೆ ಮಂಗಳ ಸೂತ್ರ ವಿತರಿಸಿ, ಆಯಾ ಜಾತಿ-ಸಂಪ್ರದಾಯದ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಧು-ವರರು ಗೃಹಸ್ಥಾಶ್ರಮಕ್ಕೆ ಪ್ರವೇಶಿಸಿದರು.
12,975 ನೇ ವಿಶೇಷ ಜೋಡಿ :

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ವಿನಾಯಕ ರಾಮಚಂದ್ರ ಮತ್ತು ನಾಗಾಲ್ಯಾಂಡ್ ರಾಜ್ಯ ದಿಮಾಪುರ್ ಜಿಲ್ಲೆಯ ರಿಚಿಕ ದೆಬ್
ಅವರು ಸಾಮೂಹಿಕ ವಿವಾಹದಲ್ಲಿ ಮದುವೆಯಾದ 12,975ನೇ ಜೋಡಿಯಾಗಿ ಗಮನಸೆಳೆದರು.ಈ ವಧು-ವರರಿಗೆ ವಿಶೇಷ ವೇದಿಕೆಯನ್ನು ಕಲ್ಪಿಸಲಾಗಿತ್ತು.

ವೇದಿಕೆಯಲ್ಲಿ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರಕುಮಾರ್, , ಅಮಿತ್‌ಕುಮಾರ್, ಶ್ರದ್ಧಾ ಅಮಿತ್, ಯೋಜನೆಯ ಕಾಯ೯ನಿವಾ೯ಹಕ ನಿದೇ೯ಶಕ ಅನಿಲ್ ಕುಮಾರ್ ಉಪಸ್ಥಿತರಿದ್ದರು.

ಕು.ಚಿನ್ಮಯ ಮತ್ತು ಕು.ಅನಘ೯ ಇವರ ಪ್ರಾರ್ಥನೆ ಬಳಿಕ ಡಿ.ಹಷೇ೯ಂದ್ರ ಕುಮಾರ್ ಸ್ವಾಗತಿಸಿದರು. ಉಜಿರೆ ಎಸ್ ಡಿ ಎಂ ಸನಿವಾಸ ಕಾಲೇಜಿನ ಪ್ರಾಂಶುಪಾಲ ಡಾ.ಸುನೀಲ್ ಪಂಡಿತ್ ದಾಂಪತ್ಯ ದೀಕ್ಷೆ ಬೋಧಿಸಿದರು.

ವಸಂತ ಮಂಜಿತ್ತಾಯ ಮತ್ತು ಬಳಗ ವೇದ ಘೋಷ ಮಾಡಿದರು.ಉಜಿರೆ ಎಸ್ ಡಿ ಎಂ ಸನಿವಾಸ ಕಾಲೇಜಿನ ಪ್ರಾಂಶುಪಾಲ ಡಾ.ಸುನೀಲ್ ಪಂಡಿತ್ ಕಾಯ೯ಕ್ರಮ ನಿರೂಪಿಸಿದರು. ಅಖಿಲೇಶ್ ಶೆಟ್ಟಿ ಪಾರಿಜಾತ ನೇತ್ರಾವತಿ ಧನ್ಯವಾದವಿತ್ತರು.

ದ.ಕ ಜಿಲ್ಲೆಯಿಂದ 11:
ಮಂಗಳೂರು 3, ಬೆಳ್ತಂಗಡಿ 2, ಪುತ್ತೂರು 2, ಕಡಬ 2, ಬಂಟ್ವಾಳ 2
ಸೇರಿ ಒಟ್ಟು 11 ಜೋಡಿ ವಿವಾಹವಾಗಿದ್ದಾರೆ.
ವಿವಾಹವಾದರಲ್ಲಿ 13 ಮಂದಿ ಕೂಲಿ, 9 ಮಂದಿ ಬೇಸಾಯ, 2 ಮಂದಿ ವ್ಯಾಪಾರ, 8 ಮಂದಿ ಚಾಲಕರು, 40 ಮಂದಿ ಖಾಸಗಿ ಉದ್ಯೋಗಿಗಳು, 3 ಮಂದಿ ಮರದ ಕೆಲಸದವರು ಒಳಗೊಂಡಿದೆ ದ್ದಾರೆ.
ಕಳೆದ ವರ್ಷದವರೆಗೆ ಕ್ಷೇತ್ರದಲ್ಲಿ 12,900 ಜೊತೆ ವಿವಾಹ ನಡೆದಿದ್ದು, ಎಲ್ಲರೂ ಸುಖ ಶಾಂತಿಯಿಂದ ಜೀವನ ನಡೆಸುತ್ತಿದ್ದಾರೆ. 1972ರಲ್ಲಿ ಧರ್ಮಸ್ಥಳದಲ್ಲಿ ವಿವಾಹ ಸಮಾರಂಭ ಆರಂಭಿಸಿದ್ದು, ಪ್ರಥಮ ವಷ೯ದಲ್ಲಿ 88 ವಧೂ,ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಕಳೆದ ವರ್ಷ 123 ಜೋಡಿ ವಿವಾಹವಾಗಿದ್ದರು. ಈ ವಷ೯ ಅತೀ ಕಡಿಮೆ 75 ಮಂದಿಯ ವಿವಾಹ ನಡೆದಿದೆ.

ಜಿಲ್ಲಾವಾರು ಉಡುಪಿ 2 ಚಿಕ್ಕಮಗಳೂರು 5, ಶಿವಮೊಗ್ಗ 18, ಬೆಂಗಳೂರು 3,ಮೈಸೂರು 3 ಹಾವೇರಿ 3, ದಾವಣಗೆರೆ 5,ಧಾರವಾಡ 1,ಉತ್ತರ ಕನ್ನಡ 2 ಚಿತ್ರದುರ್ಗ 2, ಮಂಡ್ಯ 2, ರಾಮನಗರ 1,ಚಾಮರಾಜನಗರ 1 ಬಳ್ಳಾರಿ 1, ಬಾಗಲಕೋಟೆ 1 ತುಮಕೂರು 3, ಬೆಳಗಾವಿ 3 ಕಲ್ಬುರ್ಗಿ 1, ವಿಜಯಪುರ 1‌ವಿಜಯನಗರ 2, ಕೊಡಗು 2
ಹೊರ ರಾಜ್ಯಗಳಾದ ಕೇರಳ 1 ನಾಗಲ್ಯಾಂಡ್ 1,
ಒಟ್ಟು ವಿವಾಹಗಳು 75

Related posts

ಮೇಲಂತಬೆಟ್ಟು ಗ್ರಾ.ಪಂ.ನಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಉಜಿರೆ ಎಸ್. ಡಿ.ಎಂ ಆಂ.ಮಾ. ಶಾಲೆ ಕಿಂಡರ್ಗಾರ್ಟನ್ ಗೆ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ಹಾಗೂ ನಿಶ್ಚಲ್ ಕುಮಾರ್ ಭೇಟಿ

Suddi Udaya

ರೈತ ವಿರೋಧಿ ಕಾಂಗ್ರೆಸ್ ಸರಕಾರದ ನಿಲುವು ವಿರೋಧಿಸಿ ರೈತ ಮೋರ್ಚಾರವರಿಂದ ತಹಶೀಲ್ದಾರರ ಮುಖಾಂತರ ಸಿ.ಎಂ ಸಿದ್ದರಾಮಯ್ಯರಿಗೆ ಮನವಿ

Suddi Udaya

ಗೇರುಕಟ್ಟೆ: ಪರಪ್ಪು ಉರೂಸ್ ಸಮಾರೋಪ ಸಮಾರಂಭ

Suddi Udaya

ಮುಂಬೈ, ಗೋವಾ, ಮಹಾರಾಷ್ಟ ನಬಾರ್ಡ್ ಬ್ಯಾಂಕ್ ಅಧಿಕಾರಿಯವರಿಂದ ಸಿಡ್ಬಿ ಸಾಲ ಪಡೆದು ಸ್ವ ಉದ್ಯೋಗ ನಡೆಸುತ್ತಿರುವ ಘಟಕಕ್ಕೆ ಭೇಟಿ

Suddi Udaya

ಎಸ್ ವಿ ಟಿ ಟೀಮ್ ಪಟ್ರಮೆ ವತಿಯಿಂದ ದೀಪಾವಳಿ ಪ್ರಯುಕ್ತ ವಾಲಿಬಾಲ್ ಪಂದ್ಯಾಟ

Suddi Udaya
error: Content is protected !!