32.5 C
ಪುತ್ತೂರು, ಬೆಳ್ತಂಗಡಿ
May 6, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮೊಗ್ರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

ಮೊಗ್ರು : ಪ್ರತಿ ಮಗುವಿನಲ್ಲಿ ಒಂದೊಂದು ಪ್ರತಿಭೆಗಳು ಇದೆ. ಅದನ್ನು ಸರಿಯಾದ ಗುರುತಿಸುವಿಕೆಯಿಂದ ಹೊರತುಬೇಕು ಹಾಗೂ ಮಕ್ಕಳಲ್ಲಿ ಒಳ್ಳೆಯ ಹವ್ಯಾಸಗಳನ್ನು ಬೆಳೆಸಬೇಕು ಎಂದು ವಕೀಲರಾದ ಉದಯ ಬಿ.ಕೆ ಅಭಿಪ್ರಾಯಪಟ್ಟರು. ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ವತಿಯಿಂದ ಎ. 28 ರಿಂದ ಮೇ 3 ರ ವರೆಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗ್ರು ಇಲ್ಲಿ ನಡೆದ ರಜಾಮಜಾ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತ ಶಾಲೆಯನ್ನು ದತ್ತು ಸ್ವೀಕಾರ ಮಾಡಿದ ಟ್ರಸ್ಟ್ ಸಮಾಜಮುಖಿ ಕಾರ್ಯದ ಭಾಗವಾಗಿ ಯೋಗ, ಆಂಗ್ಲಭಾಷೆಯ ತರಬೇತಿ, ಕ್ರೀಡೆಯೊಂದಿಗೆ ಇನ್ನಿತರ ಸಾಂಪ್ರದಾಯಿಕ ತರಬೇತಿ ನೀಡುತ್ತಿರುವುದು ಮಕ್ಕಳಿಗೆ ಮೊಬೈಲು ಚಟದಿಂದ ಹೊರಬರಲು ಪೂರಕ ಎಂದರು.


ಶಿಬಿರವನ್ನು ಶ್ರೀ ಕ್ಷೇತ್ರ ಮುಗೇರಡ್ಕದ ಆಡಳಿತ ಮೊಕ್ತೇಸರ ರಾಮಣ್ಣ ಗೌಡ ದೇವಸ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಯೋಗ ಗುರು ಕುಶಾಲಪ್ಪ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಅತೀ ಕಡಿಮೆ ವೆಚ್ಚದಲ್ಲಿ ಉನ್ನತ ಗುಣಮಟ್ಟದ ಶಿಕ್ಷಣವನ್ನು ಸರಕಾರಿ ಶಾಲೆಯಲ್ಲಿ ಪಡೆಯಬಹುದು. ಅದಕ್ಕಾಗಿ ಟ್ರಸ್ಟ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೊಗ್ರು ಇದನ್ನು ದತ್ತು ಸ್ವೀಕರಿಸಿದೆ. ಟ್ರಸ್ಟ್ ನ ಸಹಕಾರದೊಂದಿಗೆ ಮಕ್ಕಳ ಉನ್ನತ ಗುಣಮಟ್ಟದ ಶಿಕ್ಷಣಕ್ಕೆ ಬೇಕಾದ ಶಿಕ್ಷಕಿಯರ ಹಾಗೂ ಇನ್ನಿತರ ಸೌಲಭ್ಯ ಒದಗಿಸಲಿದೆ ಎಂದರು.

ವೇದಿಕೆಯಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಮನೋಹರ ಗೌಡ ಅಂತರ, ಉಪಾಧ್ಯಕ್ಷ ಚಂದ್ರಹಾಸ ಗೌಡ ದೇವಸ್ಯ, ಕೋಶಾಧಿಕಾರಿ ಪುರಂದರ , ಜೊತೆ ಕಾರ್ಯದರ್ಶಿ ಉಮೇಶ್ ಗೌಡ ಪರೆಕ್ಕಜೆ, ಟ್ರಸ್ಟ್ಗಳಾದ ಬಾಬುಗೌಡ ಸಂಪತ್ತು ನಿಲಯ, ಸುಧಾಕರ ಗೌಡ , ದೀಕ್ಷಿತ್ , ಚಂದಪ್ಪ ಡಿ.ಎಸ್ ದಂಬೆತ್ತಿಮಾರು, ಪ್ರದೀಪ್ ಮನ್ಕುಡೆ, ಬಾಲಕೃಷ್ಣ ಗೌಡ ಮುಗೇರಡ್ಕ, ಸೇಸಪ್ಪ ಗೌಡ ಜಾಲ್ನಡೆ, ಮುಖ್ಯೋಪಾಧ್ಯಾಯರಾದ ಮಾಧವ ಗೌಡ, ಅಧ್ಯಕ್ಷ ಶೀನಪ್ಪಗೌಡ ನೆಕ್ಕರಜೆ, ಟ್ರಸ್ಟ್ ದೇವಪ್ರಸಾದ್ ಬರಮೇಲು ಶಿಕ್ಷಕಿಯರಾದ ಶ್ರೀಮತಿ ದಿವ್ಯ, ಕು| ಕೃತಿ ಉಪಸ್ಥಿತರಿದ್ದರು.

Related posts

ನೆರಿಯ ವಾಲ್ಮೀಕಿ ಆಶ್ರಮ ಶಾಲೆಯ ಶಿಕ್ಷಕ ಕೃಷ್ಣಪ್ಪರಿಗೆ ಬೀಳ್ಕೊಡುಗೆ

Suddi Udaya

ಎಸ್.ಎಸ್.ಎಲ್.ಸಿ -ಪಿಯುಸಿ ನಂತರ ಭವಿಷ್ಯದ ಸರಿ ದಾರಿ – ಎ.26: ಅನುಗ್ರಹ ಟ್ರೈನಿಂಗ್ ಕಾಲೇಜ್ ನಲ್ಲಿ ಉಚಿತ ಮಾರ್ಗದರ್ಶನ ಕಾರ್ಯಾಗಾರ

Suddi Udaya

ಗರ್ಡಾಡಿ ಶಕ್ತಿ ಕೇಂದ್ರದಲ್ಲಿ ಮೂರನೇ ಸುತ್ತಿನ ಬಿರುಸಿನ ಮತಯಾಚನೆ

Suddi Udaya

ಸೆ.22ರಂದು ನಡೆಯಲಿದ್ದ ಉಚಿತ ಬೃಹತ್ ಹೃದಯ ರೋಗ, ಕ್ಯಾನ್ಸರ್ ರೋಗ ತಪಾಸಣೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮ ಮುಂದೂಡಿಕೆ

Suddi Udaya

ಬೆಳ್ತಂಗಡಿ: ನಕ್ಸಲ್ ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಕಸ್ಟಡಿ ಅಂತ್ಯ ವಾಪಸ್ ಕೇರಳ ಜೈಲಿಗೆ ಕಳುಹಿಸಿದ ನ್ಯಾಯಾಲಯ

Suddi Udaya

ಕಳೆಂಜ ಗ್ರಾ.ಪಂ. ನ ದ್ವಿತೀಯ ಹಂತದ ಗ್ರಾಮಸಭೆ

Suddi Udaya
error: Content is protected !!