32.1 C
ಪುತ್ತೂರು, ಬೆಳ್ತಂಗಡಿ
May 12, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ದಾಖಲಾತಿ ಆರಂಭ

ಉಜಿರೆ: ಕರ್ನಾಟಕ ಸರಕಾರದಿಂದ ಅಂಗೀಕೃತಗೊಂಡು, ರಾಷ್ಟ್ರೀಯ ಗುಣಮಟ್ಟ ನಿಯಂತ್ರಣ ಮಂಡಳಿಯಿಂದ ಶಿಫಾರಸ್ಸುಗೊಂಡು, ನವದೆಹಲಿಯ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ ನಿಂದ ಮೂರು ಬಾರಿ ಮಾನ್ಯತೆ ಪಡೆದ ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಅಧೀನ ಸಂಸ್ಥೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯು ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ2025-26ನೇ ಸಾಲಿಗೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ. ಉತ್ತೀರ್ಣ ಅಥವಾ ಪಿ.ಯು.ಸಿ. ಡಿಗ್ರಿ ಉತ್ತೀರ್ಣ/ಅನುತ್ತೀರ್ಣ ವಿದ್ಯಾರ್ಥಿನಿಯರಿಗಾಗಿ ದಾಖಲಾತಿಯನ್ನು ಪ್ರಾರಂಭಿಸಿದ್ದು ಆಸಕ್ತ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆಯಲ್ಲಿ ಒಂದು ವರ್ಷದ ‘ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್’ ಹಾಗೂ ‘ಫ್ಯಾಷನ್ ಡಿಸೈನ್ ಮತ್ತು ಟೆಕ್ನಾಲಜಿ’ ಎಂಬ ಎರಡು ವೃತ್ತಿಗಳಿಗೆ ತರಬೇತಿ ನೀಡುತ್ತಿದ್ದು, ಇಲ್ಲಿ ನುರಿತ ಅಧ್ಯಾಪಕ ವೃಂದದ ಜೊತೆಗೆ, ಆಯಾ ವೃತ್ತಿಯ ಪ್ರತಿಯೊಬ್ಬ ವಿದ್ಯಾರ್ಥಿನಿಗೆ ಕಂಪ್ಯೂಟರ್ ಹಾಗೂ ವಿದ್ಯುತ್ ಚಾಲಿತ ಸೀವೀಂಗ್ ಮೆಷಿನ್ ಮತ್ತು ಇತರ ಯಂತ್ರಗಳನ್ನು ಒಳಗೊಂಡ ಸುಸಜ್ಜಿತ ಪ್ರಯೋಗಾಲಯ, ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಒಳಗೊಂಡ ಗ್ರಂಥಾಲಯ, ವಿಶಾಲವಾದ ಆಟದ ಮೈದಾನ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವಿಶೇಷ ತರಗತಿಗಳು, ಯೋಗ, ಧ್ಯಾನ, ಪ್ರಾಣಾಯಾಮ ತರಬೇತಿ, ವಿದ್ಯಾರ್ಥಿನಿಯರು ಸ್ವಾವಲಂಬಿಯಾಗಿ ಬದುಕಲು ಪ್ರೋತ್ಸಾಹ, ಶಿಷ್ಯವೇತನಕ್ಕೆ ಪ್ರೋತ್ಸಾಹ ಇತ್ಯಾದಿ ವ್ಯವಸ್ಥೆಗಳಿವೆ. ಎಲ್ಲಕ್ಕಿಂತ ಮಿಗಿಲಾಗಿ ಅತೀ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಈ ಸಂಸ್ಥೆಯ ವಿಶಿಷ್ಟತೆ.
ಅಷ್ಟೇ ಅಲ್ಲದೆ, ಉತ್ತಮ ಮಹಿಳಾ ವಿದ್ಯಾರ್ಥಿನಿ ನಿಲಯಗಳು, ಸ್ವ ಉದ್ಯೋಗಕ್ಕೆ ಪೂರಕ ವಿದ್ಯಾಭ್ಯಾಸ, ರಾಷ್ಟ್ರೀಯ / ಅಂತರರಾಷ್ಟ್ರೀಯ ಕಂಪನಿಗಳಾದ ಬಾಷ್ (BOSCH) ಬೆಂಗಳೂರು, ಅದ್ವೆöÊತ್ ಹುಂಡೈ ಬೆಂಗಳೂರು, ಶಾಹಿ ಎಕ್ಸ್ಪೋರ್ಟ್ಸ್ ಹಾಸನ, ಮೈಸೂರು, ಬೆಂಗಳೂರು, ಹಿಮತ್‌ಸಿಗ್ಕಾ ಲೆನಿನ್ಸ್ (Himaathsigka Lenins) ಹಾಸನ, ಸೌಕರ್ ಟೆಕ್ಸ್ಟೈಲ್ಸ್ ಮತ್ತು ಯುನಿಯೋಫಾರ್ಮ್ಸ್ ಮಂಗಳೂರು, ಅಮೋಘ ಗಾರ್ಮೆಂಟ್ಸ್ ಗುರುಪುರ, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಬೆಳ್ತಂಗಡಿ, ಕೆಎಸ್‌ಆರ್‌ಟಿಸಿ ಮಂಗಳೂರು, ಬಿ.ಸಿ ರೋಡ್, ಪುತ್ತೂರು ಮುಂತಾದ ಕಡೆಗಳಲ್ಲಿ ಎ.ಟಿ.ಎಸ್. ತರಬೇತಿಯೊಂದಿಗೆ ಶಿಷ್ಯವೇತನ ಹಾಗೂ ಉದ್ಯೋಗಕ್ಕೆ ಅವಕಾಶ ಮಾಡಿಕೊಡಲಾಗುವುದು.


ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ, ಉಜಿರೆ-574240 ಇವರನ್ನು ದೂರವಾಣಿ ಸಂಖ್ಯೆ 08256-236800 ಅಥವಾ ಮೊಬೈಲ್ ಸಂಖ್ಯೆ: 9449200768 ಮೂಲಕ ಸಂಪರ್ಕಿಸಬಹುದಾಗಿದೆ.

Related posts

ಬೆಳ್ತಂಗಡಿಯಲ್ಲಿ ಶ್ರೀಗಂಧ ಕಳವು ಪ್ರಕರಣ: 27 ವರ್ಷಗಳಿಂದ ಮುಂಬಯಿ ನಗರ ಹಾಗೂ ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮಂಜೇಶ್ವರ ವರ್ಕಾಡಿಯ ಎಸ್.ಎ ಅಶ್ರಪ್ ಕೇರಳದಲ್ಲಿ ವಶ: ಬೆಳ್ತಂಗಡಿ ಪೊಲೀಸರ ಕಾರ್ಯಾಚರಣೆ

Suddi Udaya

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಚೇಂಬರ್ ನ ವತಿಯಿಂದ ಮಾನವ ಸಂಬಂಧ ತರಬೇತಿ ಕಾರ್ಯಕ್ರಮ

Suddi Udaya

ಉಜಿರೆಯ ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು ಪ್ರತಿಷ್ಠಿತ ಜೈ ಜವಾನ್ ಜೈ ಕಿಸಾನ್ “ಕೃಷಿಕ ರತ್ನ” ಗೌರವ ಪ್ರಶಸ್ತಿಗೆ ಆಯ್ಕೆ

Suddi Udaya

ಎಸ್. ಡಿ. ಎಂ. ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳ ಮತ್ತು ಸ್ವಚ್ಛತಾ ಸೇನಾನಿಗಳ ಪದ ಪ್ರದಾನ ಸಮಾರಂಭ

Suddi Udaya

ತಲೆ ಮರೆಸಿಕೊಂಡಿದ್ದ ಆರೋಪಿ ನೆಲ್ಯಾಡಿ ಯಲ್ಲಿ ಬಂಧನ

Suddi Udaya

ತುಮಕೂರಿನಲ್ಲಿ ಮೂವರಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ: ರೂ. 50 ಲಕ್ಷ ನಗದಿನೊಂದಿಗೆ ಕಾರಿನಲ್ಲಿ ಹೋಗಿದ್ದ ಮೂವರು: ನಕಲಿ ಚಿನ್ನದ ಆಸೆಗೆ ಮೂವರ ಬಲಿಯಾಯಿತೆ ಎಂಬ ಶಂಕೆ: ಸಮಗ್ರ ತನಿಖೆ ಬಳಿಕವಷ್ಟೇ ದೊರೆಯಲಿದೆ ಸ್ವಷ್ಟ ಮಾಹಿತಿ

Suddi Udaya
error: Content is protected !!