Uncategorizedಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಪೊಲೀಸ್ಪ್ರಮುಖ ಸುದ್ದಿವರದಿ

ಶಿಲಾ೯ಲು : ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಶಿಲಾ೯ಲು: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಆಕೆ ಗಭ೯ವತಿಯಾಗಿದ್ದು,ಆರೋಪಿ ಯುವಕನ ವಿರುದ್ಧ ವೇಣೂರು ಪೊಲೀಸರಿಗೆ ನೊಂದ ಬಾಲಕಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಶಿಲಾ೯ಲು ಗ್ರಾಮದ ಸನತ್ (28ವ) ಎಂಬ ಯುವಕನ ಮೇಲೆ ಈ ದೂರನ್ನು ನೀಡಲಾಗಿದೆ.

ಆರೋಪಿ ಸನತ್ ಬಾಲಕಿಯ ತಂದೆಯ ಕಾರಿನಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಅಗಾಗ ಮನೆಗೆ ಬಂದವನು ಅಪ್ರಾಪ್ತ ವಯಸ್ಸಿನ ಬಾಲಕಿ ಜೊತೆ ಸಲುಗೆಯಿಂದ ಇದ್ದನೆನ್ನಲಾಗಿದೆ. 2024 ಮೇ 22ರಂದು ಬಾಲಕಿಯ ಜನ್ಮ ದಿನದ ಕಾರ್ಯಕ್ರಮಕ್ಕೆ ಬಂದು ಆರೋಪಿ ರಾತ್ರಿ ಉಳಕೊಂಡಿದ್ದು, ರಾತ್ರಿ ಮಲಗಿದ ಕೋಣೆಗೆ ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ ನೆಂದು ದೂರಿನಲ್ಲಿ ಆರೋಪಿಸಲಾಗಿದೆ.

ತದನಂತರದ ದಿನಗಳಲ್ಲಿ ಕೂಡಾ ಅಗಾಗ ರಾತ್ರಿ ಕಾಲದಲ್ಲಿ ಬಂದು ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಆಕೆ ಗರ್ಭಿಣಿಯಾಗಿದ್ದು, ಇದೀಗ ಆರೋಪಿ ಸನತ್ ‌ವಿರುದ್ದ ಬಾಲಕಿ ವೇಣೂರು ಪೊಲೀಸರಿಗೆ ದೂರು ನೀಡಲಾಗಿದ್ದು ,ವೇಣೂರು ಪೊಲೀಸ್ ಠಾಣಾ ಅ.ಕ್ರ: 41/2025 ಕಲಂ: 64 BNS-2023 ಮತ್ತು : 4,6 ಪೋಕ್ಸೋ ಕಾಯಿದೆ- 2012ರಂತೆಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ಶ್ರೀ ಕ್ಷೇತ್ರ ತೆಕ್ಕಾರು ಬ್ರಹ್ಮಕಲಶ 4ನೇ‌ ದಿನದ ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya

ಬಾರ್ಯ: ಆದಿಶಕ್ತಿ ಗೆಳೆಯರ ಬಳಗ ಕುಂಟಾಲಕಟ್ಟೆ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ ವೃತ್ತಿ ಕೌಶಲ್ಯ ತರಬೇತಿ ‘ಕಾರ್ಯಕ್ರಮ

Suddi Udaya

ಕುಂದಾಪುರ ಲೋಕೋಪಯೋಗಿ ಇಲಾಖೆ: ಎ.ಇ.ಇ.ಯಾಗಿ ರಾಮಣ್ಣಗೌಡ ಮುಂಭಡ್ತಿ – ಅಧಿಕಾರ ಸ್ವೀಕಾರ

Suddi Udaya

ಬೆಳ್ತಂಗಡಿ: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ದೇಶಭಕ್ತಿ ಗೀತೆಗಳ ಗೀತ ಗಾಯನ ಸ್ಪರ್ಧೆ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya
error: Content is protected !!