ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಿರಂತರ ಮಳೆ: ಮದ್ದಡ್ಕ ಆಲಂದಿಲ ಮದರಸ ಬಳಿ ಚರಂಡಿ ಇಲ್ಲದೆ‌ ರಸ್ತೆಯಲ್ಲೇ ಹರಿದ ನೀರು

ಕುವೆಟ್ಟು : ಮದ್ದಡ್ಕ ಆಲಂದಿಲ ಸಬರಬೈಲು ಸಂಪರ್ಕ ರಸ್ತೆಯ ಆಲಂದಿಲ ಮದರಸ ಬಳಿ ಚರಂಡಿ ಇಲ್ಲದೆ‌ ನೀರು ರಸ್ತೆಯಲ್ಲೆ ಹರಿಯುತ್ತಿದ್ದು ಸಂಚಾರಕ್ಕೆ ತೊಡಕಾಗಿದೆ.

ಈ ಪರಿಸರದಲ್ಲಿ ಚಿಕ್ಕದಾದ ಕಾಲು ಸಂಕ ಇದ್ದು ರಸ್ತೆಯ ಎರಡು ಬದಿಯಲ್ಲಿ ಚರಂಡಿಯಲ್ಲಿ ಮಣ್ಣು ತುಂಬಿದ್ದು ಸರಾಗವಾಗಿ ಹರಿದು ಹೋಗಬೇಕಾಗಿದ್ದ ನೀರು ಚರಂಡಿಯಲ್ಲಿ ಮಣ್ಣು ತುಂಬಿ ಈಗ ರಸ್ತೆಯಲ್ಲಿ ಹರಿದು ಹೋಗುತ್ತಿದೆ. ಸಮೀಪದಲ್ಲಿ ಮದರಸ ಇದ್ದು ಚಿಕ್ಕ ಚಿಕ್ಕ ಮಕ್ಕಳು ಸ್ಥಳೀಯ ಶಾಲೆಗೆ ಹೋಗುವ ಮಕ್ಕಳು ಈ ರಸ್ತೆಯಲ್ಲಿ ಸಾಗಬೇಕಾಗಿದೆ ರಸ್ತೆಯು ಮೂಡಬಿದ್ರೆ ಕಡೆ ಸಾಗುವ ಪ್ರಯಾಣಿಕರು ಪಡಂಗಡಿ ಪೊಯ್ಯೆ ಗುಡ್ಡೆ ಸಂಪರ್ಕವಾಗಿ ಹೆಚ್ಚಿನ ವಾಹನಗಳು ಈ ರಸ್ತೆಯನ್ನು ಅವಲಂಬಿಸಿದ್ದು ಕಿರಿದಾದ ಈ ರಸ್ತೆಯಲ್ಲಿ ಎದುರು ಕಡೆಯಿಂದ ಬರುವ ವಾಹನಗಳಿಗೆ ಸೈಡ್ ಕೊಡಲು ನಿಲ್ಲಿಸಿಯೇ ಹೋಗುವ ಅನಿವಾರ್ಯಕ್ಕೆ ವಾಹನ ಚಾಲಕರು ಸಿಲುಕಿದ್ದಾರೆ.

ಸಂಬಂಧಿತ ಇಲಾಖೆ ಜನಪ್ರತಿನಿಧಿಗಳು ಗಮನಿಸಿ ಶೀಘ್ರವಾಗಿ ಇದಕ್ಕೆ ಸ್ಪಂದನೆ ನೀಡಬೇಕಾಗಿ ಸಾರ್ವಜನಿಕರ ಅಗ್ರಹ ವ್ಯಕ್ತ ಪಡಿಸಿದ್ದಾರೆ.

Related posts

ಕೊಕ್ಕಡದಲ್ಲಿ ಸತ್ಯ ಸುದ್ದಿ ನ್ಯೂಸ್ ಕಛೇರಿ ಮತ್ತು ವೆಬ್ ಸೈಟ್ ಲೋಕಾರ್ಪಣೆ

Suddi Udaya

ತಾಲೂಕು ಮಟ್ಟದ ಕರಾಟೆ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಉಜಿರೆ ನ್ಯಾಚುರೋಪತಿ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

Suddi Udaya

ಮಾಜಿ ಸಚಿವ ಗಂಗಾಧರ ಗೌಡರವರ ಕಚೇರಿಯಲ್ಲಿ ಇಂದಿರಾ ಗಾಂಧಿ ಯವರ ಪುಣ್ಯಸ್ಮರಣೆ ಆಚರಣೆ

Suddi Udaya

ಮಡಂತ್ಯಾರು ಮಂಜಲ್ ಪಲ್ಕೆಯಲ್ಲಿ ತೆರೆದ ಕೊಳವೆ ಬಾವಿಯನ್ನು ಮುಚ್ಚಿಸಿದ ಮಡಂತ್ಯಾರು ಗ್ರಾ.ಪಂ.

Suddi Udaya

ವಾಣಿ ಪ.ಪೂ. ಕಾಲೇಜಿನ ರೋವರ್ಸ್ ತಂಡ ಜಿಲ್ಲಾ ಮಟ್ಟದ ಗೀತ ಗಾಯನ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!