ಬೆಳ್ತಂಗಡಿ: ಲಾಯಿಲ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಮೇ 23ರಂದು ಸಾಯಂಕಾಲ ಶ್ರೀಮತಿ ಚಂದ್ರಿಕಾ ಹೊಳ್ಳರವರ ನೇತೃತ್ವದ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.
ಕ್ಷೇತ್ರದ ಪರವಾಗಿ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೇರಾಜೆ, ಉಪಾಧ್ಯಕ್ಷ ವಿಶ್ವನಾಥ್ ಆರ್ ನಾಯಕ್, ಟ್ರಸ್ಟಿಗಳಾದ ಕೃಷ್ಣಪ್ಪ ಪೂಜಾರಿ, ಮೋಹನ್ ರಾವ್ , ಜಯರಾಮ ಬಂಗೇರ ಉಪಸ್ಥಿತರಿದ್ದರು.