ವೇಣೂರು: ಹೊಸಂಗಡಿ ಪಂಚಾಯತ್ ೩ನೇ ವಾರ್ಡ್ ಸದಸ್ಯ ಹರಿಪ್ರಸಾದ್ ರವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು ಮೇ 14 ರಂದು ಸದ್ರಿ ವಾರ್ಡ್ ನಿವಾಸಿ, ಪೆರಿಂಜೆ ಸರಕಾರಿ ಶಾಲಾ ಮಾಜಿ ಮೇಲುಸ್ತುವಾರಿ ಅಧ್ಯಕ್ಷ ಹಾಗೂ ಪೆರಿಂಜೆ ಹಾಲು ಉತ್ಪಾದಕ ಸಂಘದ ನಿರ್ದೇಶಕ ಆನಂದ ಕೊಡಂಗೇರಿ ಚುನಾವಣಾಧಿಕಾರಿ ಗಣೇಶ್ ರಾಮಚಂದ್ರ ಭಟ್ ರವರಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರ.ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬ್ಲಾಕ್ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ಹೊಸಂಗಡಿ ಪಂಚಾಯತ್ ವ್ಯಾಪ್ತಿ ಪಕ್ಷದ ಅಧ್ಯಕ್ಷ ಶ್ರೀಪತಿ ಉಪಾಧ್ಯಾಯ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಸುಂದರ ಕೆ, ಶ್ರೀಮತಿ ಅಕ್ಕು, ಪೆರಿಂಜೆ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಎನ್ ಸೀತಾರಾಮ ರೈ, ತಾಲೂಕು ಭೂನ್ಯಾಯ ಮಂಡಳಿ ಸದಸ್ಯ ಇಸ್ಮಾಯಿಲ್ ಕೆ ಪೆರಿಂಜೆ, ಪ್ರಮುಖರಾದ ಹಿರಿಯರಾದ ಶಿವಪ್ಪ ಪೂಜಾರಿ ಕೊಡಂಗೇರಿ, ಪದ್ಮರಾಜ ಪೇರಿ, ಧರ್ಣಪ್ಪ ಪಡ್ಯಾರಬೆಟ್ಟ, ನಾಗೇಶ್ ಕೋಟ್ಯಾನ್ ಹೊಸಂಗಡಿ, ಚಂದ್ರಕಾAತ್, ಅರವಿಂದ ಶೆಟ್ಟಿ ಖಂಡಿಗ, ಸೂರಜ್ ಪೇರಿ, ಪಂಚಾಯತ್ ಸದಸ್ಯೆ ಶ್ರೀಮತಿ ಜೆ ಶಾಂತ, ಮಾಜಿ ಸದಸ್ಯೆ ಶ್ರೀಮತಿ ಸುಮತಿ, ವಿಜಯ ಶೆಟ್ಟಿ, ಪ್ರಶಾಂತ್ ನಾಯಕ್, ವಾಸುದೇವ ನಾಯ್ಕ್, ಕೆಪಿ ಬಶೀರ್ ಪಡ್ಡಂದಡ್ಕ, ಶೀನಪ್ಪ ಕೊಡಂಗೇರಿ, ರಾಗಿಣಿ ಪೇರಿ, ವಿಜಯ ದೆರಾರ್, ಗೋಪಾಲ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಸಹಕರಿಸಿದರು.