ಬೆಳ್ತಂಗಡಿ : ಗುರುವಾಯನಕೆರೆಯ ಬದ್ಯಾರು ಬರಾಯ ಸಮೀಪ ಕಾರು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು(ಮೇ 16) ಮಧ್ಯಾಹ್ನ ನಡೆದಿದೆ.

ಬೆಳ್ತಂಗಡಿ ಕಡೆಯಿಂದ ಬೈಕ್ ಸವಾರ ವೇಣೂರು ಕಡೆ ಪ್ರಯಾಣಿಸುತ್ತಿದ್ದು, ಆ ಕಡೆಯಿಂದ ಗುರುವಾಯನಕೆರೆ ಕಡೆ ಬರುತ್ತಿದ್ದ ಕಾರು ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಬೈಕ್ ಸವಾರನಿಗೆ ಗಂಭೀರ ಗಾಯಗೊಂಡಿದ್ದು,ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.