26.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಸಮಾಜ ಮಂದಿರದಲ್ಲಿ ಭಗವದ್ಗೀತ ಪ್ರವಚನ ಸಪ್ತಾಹಕ್ಕೆ ಚಾಲನೆ:

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದಿಗೆ ಮೇ 17ರಿಂದ 23 ವರೆಗೆ ಸಂಜೆ 6 ರಿಂದ 8 ರವರೆಗೆ ಬೆಳ್ತಂಗಡಿ ಸಮಾಜ ಮಂದಿರದಲ್ಲಿ ನಡೆಯಲಿದ್ದು ಮೇ. 17 ಇಂದು ಸಂಜೆ ಚಾಲನೆ ನೀಡಲಾಯಿತು. ‌

ಉಜಿರೆ ನಿನಾದ ಸೋನಿಯಾ ಯಶೋವರ್ಮ ದೀಪ ಪ್ರಜ್ವಲಿಸಿ ಭಗವದ್ಗೀತೆ ದೇಶದ ದೊಡ್ಡ ಸಂಪತ್ತು ಎಂದರು.ಪ್ರಸಿದ್ದ ಪ್ರವಚನಕಾರರಾದ ವೀಣಾ ಬನ್ನಂಜೆ,ನಾವೂರು ಆರೋಗ್ಯ ಕ್ಲಿನಿಕ್‌ನ ವೈದ್ಯ ಪ್ರದೀಪ್ ಆಟಿಕುಕ್ಕೆ, ಕೃಷಿಕ ಹಿರಿಯ ಸಹಕಾರಿ ಎಂ.ಜನಾರ್ದನ ಪೂಜಾರಿ ಗೇರುಕಟ್ಟೆ,ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿ ಉಪಾಧ್ಯಕ್ಷ ಗಂಗಾಧರ ಮಿತ್ತಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮ ಸಂಯೋಜಕ ಚರಣ್ ಕುಮಾರ್ ಕುರ್ತೋಡಿ ಸೇರಿದಂತೆ ವಿವಿಧ ಕ್ಷೇತ್ರದ ಪ್ರಮುಖರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಗವದ್ಗೀತ ಪ್ರವಚನ ಸಪ್ತಾಹದಲ್ಲಿ ಭಾಗವಹಿಸಿದರು.

ಸುರೇಶ್ ಇವರಿಂದ ಪ್ರಾರ್ಥನೆ ಹಾಡಿದರು‌.ನಿವೃತ ಸಂಸ್ಕೃತ ಉಪನ್ಯಾಸಕರಾದ ಶ್ರೀಶ ಕುಮಾರ್ ಪ್ರಸ್ತಾವಿಕ ಮಾತನಾಡಿದರು.ಮೋಹನ್ ಶೆಟ್ಟಿಗಾರ್ ಸ್ವಾಗತಿಸಿ,ಸುಧಾಮಣಿ ಕಾರ್ಯಕ್ರಮ ನಿರೂಪಿಸಿದರು.

Related posts

ಲಾಯಿಲ: ಶ್ರೀ ಉಳ್ಳಾಲ್ತಿ, ಮೈಸಂದಾಯ ಹಾಗೂ ಗುಳಿಗ ದೈವಗಳ ಸಾನಿಧ್ಯ ಪಿಲಿಪಂಜರ ಕ್ಷೇತ್ರ ಇದರ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾರ್ಥಿಗಳ ರ‍್ಯಾಂಕ್ ಸಾಧನೆ

Suddi Udaya

ಶಿಶಿಲದ ಜಿನ ಮಂದಿರದಲ್ಲಿ ಪಂಚಕಲ್ಯಾಣ : ಬಿಂಬವನ್ನು ತರುವಲ್ಲಿ ಸಹಕರಿಸಿದವರಿಗೆ ಅಭಿನಂದನೆ

Suddi Udaya

ಗೌಸಿಯಾ ಜಾಮಿಯಾ ಮಸೀದಿಯಲ್ಲಿ ಏಪ್ರಿಲ್ 11 ಮತ್ತು 12 ರಂದು ನಡೆಯಲಿರುವ ಬೃಹತ್ ವಾರ್ಷಿಕ ಜಲಾಲಿಯ್ಯಾ ರಾತೀಬ್ ಮಜ್ಲಿಸ್ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಕೆಸರ್ ಕoಡೊಡು ಗೌಡೆರೆ ಗೌಜಿ -ಗಮ್ಮತ್ ಕ್ರೀಡಾಕೂಟದಲ್ಲಿ ಮೈರೋಳ್ತಡ್ಕ ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿಗೆ ಹಲವು ಪ್ರಶಸ್ತಿ

Suddi Udaya

ಹುಣ್ಸೆಕಟ್ಟೆ ಸ.ಕಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಕರಿಯಪ್ಪ ಎ.ಕೆ ರವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Suddi Udaya
error: Content is protected !!