24.7 C
ಪುತ್ತೂರು, ಬೆಳ್ತಂಗಡಿ
May 18, 2025
ಕರಾವಳಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶುಭಾರಂಭ

ವಿವಿಧ ವಿನ್ಯಾಸಗಳ ಚಿನ್ನ ಹಾಗೂ ವಜ್ರದ ಆಭರಣಗಳ ಶೋರೂಮ್ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ವಿಸ್ತೃತ ಶೋರೂಮ್; ಮುಳಿಯ ಬ್ರಾಂಡ್ ಅಂಬಾಸಿಡರ್ ರಮೇಶ್ ಅರವಿಂದ್‌ ದೀಪ ಪ್ರಜ್ವಲಿಸಿ ಲೋಕಾರ್ಪಣೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಮನೆಮಾತಾಗಿರುವ ತಾಲೂಕಿನ ಅತೀ ದೊಡ್ಡ ಚಿನ್ನದ ಮಳಿಗೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಈಗ ಮತ್ತಷ್ಟು ಹೊಸತನದೊಂದಿಗೆ ಮುನ್ನಡೆಯುತ್ತಿದ್ದು, ಇದರ ವಿಸ್ತೃತ ಅತೀ ದೊಡ್ಡ ಹೊಸ ಶೋರೂಂ “ಮುಳಿಯ ಗೋಲ್ಡನ್ ಡೈಮಂಡ್”ನ ಉದ್ಘಾಟನಾ ಕಾರ್ಯಕ್ರಮ ಮೇ 17ರಂದು ಬೆಳ್ತಂಗಡಿ ಮುಖ್ಯ ರಸ್ತೆಯ ರಕ್ಷಾ ಆರ್ಕೇಡ್‌ನಲ್ಲಿ ಜರುಗಿತು.

ವಿಶಾಲ ಶೋ ರೂಂನ್ನು ಖ್ಯಾತ ಸಿನಿಮಾ ನಟ ಹಾಗೂ ಸ್ಫೂರ್ತಿಯ ಮಾತುಗಾರ ರಮೇಶ್ ಅರವಿಂದ್ ತಾಲೂಕಿನ 81 ಗ್ರಾಮಗಳ ದೇಗುಳಗಳಿಂದ ತಂದ ತಂದ ದೀಪದ ಬೆಳಕಿನಿಂದ ದೀಪ ಪ್ರಜ್ವಲಿಸಿ ಲೋಕಾರ್ಪಣೆ ಮಾಡಿದರು. ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ,ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ, ನಿದೇ೯ಶಕಿಯರಾದ ಶ್ರೀಮತಿ ಅಶ್ವಿನಿ ಕೃಷ್ಣ ಮುಳಿಯ, ಕೃಷ್ಣವೇಣಿ ಪ್ರಸಾದ್ , ಡಾ.ಶ್ಯಾಮ್ ಸುಂದರ್, ಡಾ.ವಿದ್ಯಾ ಸರಸ್ವತಿ ಮುಳಿಯ, ಸಹಾಯಕ ಕಾರ್ಯನಿರ್ವಹಕ ಶಿವಕೃಷ್ಣ ಮೂರ್ತಿ, ಮಾರ್ಕೆಟಿಂಗ್ ಸಲಹೆಗಾರ ವೇಣು ಶರ್ಮ, ಬೆಳ್ತಂಗಡಿ ಸಂಸ್ಥೆಯ ಮೆನೇಜರ್ ಲೋಹಿತ್,ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್, ಮೊದಲಾದವರು ಹಾಗೂ ಸಿಬ್ಬಂದಿ ವರ್ಗ, ಊರಿನ ಗಣ್ಯರು, ನಾಗರಿಕರು, ಗ್ರಾಹಕರು ಉಪಸ್ಥಿತರಿದ್ದರು.

ಎಂಟು ದಶಕಗಳ ಹಿಂದೆ ದಿವಂಗತ ಕೇಶವ ಭಟ್ಟರಿಂದ ಈ ಸಂಸ್ಥೆ ಆರಂಭಗೊಂಡಿದ್ದು, ಗ್ರಾಹಕರಿಗೆ ಯಾವಾಗಲೂ ಹೊಸತನ ನೀಡುವುದು ಮುಳಿಯ ವಿಶೇಷ. ಕಳೆದ ಮೂರು ತಲೆಮಾರುಗಳಿಂದ ಗ್ರಾಹಕರ ಮತ್ತು ಜನತೆಯ ವಿಶ್ವಾಸ ಗಳಿಸಿ ಬೆಳೆಯುತ್ತಿರುವ ಮುಳಿಯ ಜನರಿಗೆ ಚಿನ್ನದೊಂದಿಗೆ ಸಂತೃಪ್ತಿ, ಸಂತೋಷ ನೀಡಿದೆ.

ಎರಡು ಅಂತಸ್ತಿನ ವಿಶಾಲ ಶೋರೂಮ್:
ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಎರಡಯ ಅಂತಸ್ತಿನ ವಿಶಾಲ 5 ಸಾವಿರ ಚದರ ಅಡಿಯ ವಿಶೇಷ ಸೌಲಭ್ಯಗಳ ಶೋರೂಮ್ ಅತ್ಯಾಧುನಿಕ ಶೈಲಿಯಲ್ಲಿ ರೂಪಗೊಂಡಿದೆ. ಇಲ್ಲಿ ಚಿನ್ನ, ಬೆಳ್ಳಿ, ವಜ್ರ, ವಾಚುಗಳು, ಗಿಫ್ಟ್ ಐಟಂ ಹಾಗೂ ವಿವಿಧ ಬಗೆಯ ಚಿನ್ನಾಭರಣಗಳ ಕೌಂಟರ್‌ಗಳು, ವಜ್ರಾಭರಣ ಅಮೂಲ್ಯ ಕೌಂಟರ್‌ಗಳನ್ನು ತೆರೆಯಲಾಗಿದೆ. ಬೆಳ್ಳಿಯ ಆಭರಣಗಳು ವಿಶೇಷ ಕೌಂಟರ್‌ಗಳಿವೆ., ವಾಚ್ ಕೌಂಟರ್ ಇದೆ. ಇದಲ್ಲದೆ ಬಳೆ, ಆಂಟಿಕ್, ನೆಕ್ಲೆಸ್, ಪಾರಂಪರಿಕ ಆಭರಣಗಳು ಹಾಗೂ ಇನ್ನಿತರ ಕೌಂಟರ್‌ಗಳು, ವಿಶಾಲ ಪಾರ್ಕಿಂಗ್, ಗ್ರಾಹಕರಿಗೆ ತಿಂಡಿ ಊಟದ ವ್ಯವಸ್ಥೆ, ಮಕ್ಕಳ ಆಟಕ್ಕೆ ಮತ್ತು ಆರೈಕೆಗೆ ವಿಶೇಷ ಕೊಠಡಿ, ವ್ಯಾಲೆಟ್ ಪಾರ್ಕಿಂಗ್ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಗ್ರಾಹಕರ ಸಂತೃಪ್ತಿ ಮತ್ತು ಸಂತೋಷ ನೀಡುತ್ತಾ ಮುಳಿಯ ಈಗ ಹಿಂದಿಗಿಂತ ದುಪ್ಪಟ ರೀತಿಯಲ್ಲಿ ಸದಾ ಸಂತೋಷ ನೀಡುವಲ್ಲಿ ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲಿದೆ. ಇದು ಮುಂದಿನ ಐದು ವರ್ಷಗಳ ವರ್ಷಗಳ ವ್ಯವಹಾರ ವಿಸ್ತಾರಣೆಗೆ ನಾಂದಿಯಾಗಲಿದೆ.

ಡೈಮಂಡ್‌ನ ವಿವಿಧ ವಿನ್ಯಾಸದ ಆಭರಣ:
ಮುಳಿಯದಲ್ಲಿ ನ್ಯಾಚುರಲ್ ಡೈಮಂಡ್ ವಿವಿಧ ವಿನ್ಯಾಸದ ಆಭರಣಗಳಿವೆ. ಟೆಸ್ಟ್ಂಗ್ ಮೆಶಿನ್ ಅಳವಡಿಸಲಾಗಿದೆ. ಗ್ರಾಹಕರು ಈಗಾಗಲೇ ಡೈಮಂಡ್ ಆಭರಣ ಇದ್ದರೆ ಅದನ್ನು ಇಲ್ಲಿ ಬಂದು ಟೆಸ್ಟ್ ಮಾಡಿ ಯಾವ ಡೈಮಂಡ್ ಎಂದು ನೋಡಬಹುದು.

81 ಗ್ರಾಮಗಳ ದೇಗುಲಗಳಿಂದ ದೀಪ:
ತಾಲೂಕಿನ 81 ಗ್ರಾಮ ದೇಗುಲಗಳಿಂದ ಬೆಳಕನ್ನು ತಂದು ಬೆಳ್ತಂಗಡಿಯ ನೂತನ ಶೋರೂಮ್‌ನ್ನು ಉದ್ಘಾಟನೆ ಮಾಡಲಾಯಿತು. ನಾಳೆ ಮೇ 18ರಂದು ಸಂಜೆ 7ಕ್ಕೆ ಖ್ಯಾತ ತುಳು ಚಿತ್ರ ನಟ ಅರವಿಂದ ಬೋಳಾರ್ ಅವರ ನಾಟಕ ತಂಡದಿಂದ ತುಳು ಹಾಸ್ಯಮರ ನಾಟಕ ‘ಒರಿಯಾಂಡಳ ಸರಿಬೋಡು’ ಪ್ರದರ್ಶನಗೊಳ್ಳಲಿದೆ.
ಅನನ್ಯ ಭಟ್ ಉಜಿರೆ ಇವರು ಪ್ರಾಥ೯ನೆ ಬಳಿಕ ಮುಕುಂದ ಶ್ಯಾಮ್ ಸ್ವಾಗತಿಸಿದರು. ಪ್ರಜ್ಞಾ ಓಡಿಲ್ನಾಳ ಕಾಯ೯ಕ್ರಮ ನಿರೂಪಿಸಿದರು. ಬೆಳ್ತಂಗಡಿ ಸಂಸ್ಥೆಯ ಮೆನೇಜರ್ ಲೋಹಿತ್ ಧನ್ಯವಾದ ವಿತ್ತರು.

Related posts

ಉಳ್ತೂರಿನಲ್ಲಿ ಸಂಭ್ರಮದ ಈದ್ ಆಚರಣೆ

Suddi Udaya

ಗುರುವಾಯನಕೆರೆ -ಬೆಳ್ತಂಗಡಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್

Suddi Udaya

ಬೆಳ್ತಂಗಡಿ ಕಥೋಲಿಕ್ ಕ್ರೆಡಿಟ್ ಸಹಕಾರ ಸಂಘ ಇದರ ಸ್ವಂತ ಕಟ್ಟಡ “ಆಶಾಕಿರಣ” ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ ಹಾಗೂ ಸಂಘದ ಪ್ರಧಾನ ಕಚೇರಿ ಉದ್ಘಾಟನೆ

Suddi Udaya

ಕೊಕ್ಕಡ ಮಾಸ್ತಿಕಲ್ಲುಮಜಲುನಲ್ಲಿ ಶ್ರೀ ಪಿಲಿಚಾಮುಂಡಿ ಮತ್ತು ಸಹ ಪರಿವಾರ ದೈವಗಳ ನೇಮೋತ್ಸವ

Suddi Udaya

ಭಾರತೀಯ ಜೈನ್‌ ಮಿಲನ್ ಬೆಳ್ತಂಗಡಿ ಮತ್ತು ಧೀಮತಿ ಮಹಿಳಾ ಸಮಾಜ ಉಜಿರೆ ಸಹಯೋಗದಲ್ಲಿ “ಆಹಾರೋತ್ಸವ ಮತ್ತು ಪ್ರತಿಭಾ ಪುರಸ್ಕಾರ”

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಯವರ 106ನೇ ಜಯಂತಿ ಆಚರಣೆ

Suddi Udaya
error: Content is protected !!