September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಡಬ ಐಐಸಿಟಿ ಮೊಂಟೆಸ್ಸರಿ ತರಬೇತಿ ಸಂಸ್ಥೆಗೆ ಶೇ.100 ಫಲಿತಾಂಶ: 11 ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ: ಪ್ರತಿಯೊಬ್ಬರು ಶಿಕ್ಷಕಿಯರಾಗಿ ನೇಮಕ

ಕಡಬ: ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ಯಾರಿಯರ್ ಟ್ರೈನಿಂಗ್ ಆಶ್ರಯದಲ್ಲಿ ಕಡಬದ ಸೈಂಟ್ ಜೋಕಿಮ್ಸ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಸ್‌ಒ 9001:2015 ಪ್ರಮಾಣೀಕೃತ ಐಐಸಿಟಿ ಶಿಕ್ಷಣ ಸಂಸ್ಥೆಯು ಶ್ಲಾಘನೀಯ ಸಾಧನೆ ಮಾಡಿದೆ.

ಈ ಸಂಸ್ಥೆಯಲ್ಲಿ ನಡೆದ ಮೊಂಟೆಸ್ಸರಿ (ನರ್ಸರಿ ಟೀಚರ್ ಟ್ರೈನಿಂಗ್) ಪರೀಕ್ಷೆಗೆ ಹಾಜರಾದ ಎಲ್ಲ 11 ವಿದ್ಯಾರ್ಥಿನಿಯರೂ ಶೇ.100 ಫಲಿತಾಂಶದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಆಶಾರೋಸ್ ಸುಂಕದಕಟ್ಟೆ(97%), ವೈಶಾಲಿ ಕೋಡಿಂಬಾಡಿ(96%), ಅಸಿಯಮ್ಮ ಮರ್ದಾಳ(94%), ಸೌಮ್ಯ ಕೆ ಕುಟ್ರುಪಾಡಿ(94%), ನಸೀಮಾ ಎಚ್ ನೆಲ್ಯಾಡಿ(94%), ಸುರೂರತ್ ಎಂ.ಎಸ್ ಕಡಬ(93%), ಸಂಧ್ಯಾ ಕುಮಾರಿ ಬಿ ಬೆಟ್ಟಂಪಾಡಿ(93%), ಸಂಧ್ಯಾ ಅರಸಿನಮಕ್ಕಿ(93%), ಪುಲಕಿತ ಕೆ.ಪಿ ಪೇರಾಬೆ(91%), ಫಾತಿಮಾ ಅನಿಸಾ ಮರ್ದಾಳ(90%) ಹಾಗೂ ಸ್ವಾತಿ ಎಸ್ ಶಿಶಿಲ(90%) ಅಂಕ ಪಡೆದು ಉತ್ತೀರ್ಣರಾಗಿ,ಈಗಾಗಲೇ ವಿವಿಧ ಶಾಲೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕಿಯರಾಗಿ ನೇಮಕಗೊಂಡಿದ್ದಾರೆ.

ಅತ್ಯುತ್ತಮ ಗುಣ ಮಟ್ಟದ ಶಿಕ್ಷಣವನ್ನೂ, ಅತಿ ಕಡಿಮೆ ಶುಲ್ಕದೊಂದಿಗೆ ನುರಿತ ಅಧ್ಯಾಪಕರಿಂದ ಶಿಸ್ತಿನ ಬೋಧನೆಯನ್ನೂ ಒದಗಿಸುವ ಈ ಸಂಸ್ಥೆಯು ಉಚಿತ ಕಂಪ್ಯೂಟರ್ ತರಬೇತಿ, ಸ್ಪೋಕನ್ ಇಂಗ್ಲಿಷ್, ಕರಕುಶಲ ತರಬೇತಿ, ಪ್ರತಿಷ್ಠಿತ ಶಾಲೆಗಳಲ್ಲಿ ಇಂಟರ್ನ್‌ಶಿಪ್, ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳ ಸಹಿತ ಉತ್ತಮ ಅವಕಾಶಗಳನ್ನು ಕಲ್ಪಿಸಿದೆ. ಇದೊಂದು ಜಾಬ್ ಓರಿಯೆಂಟೆಡ್ ಕೋರ್ಸ್ ಆಗಿದ್ದು, ತರಬೇತಿ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಗೆ ಉದ್ಯೋಗದ ಭರವಸೆ ನೀಡುತ್ತಿದೆ.

2025–26ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಆಸಕ್ತರು 9448409912 ಅಥವಾ 9743271502 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Related posts

ಉಜಿರೆ ಮೈಸೂರು ಗಾರ್ಮೆಂಟ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಪ್ರತಿ ರೂ 1 ಸಾವಿರ ಖರೀದಿಯೊಂದಿಗೆ ಆಕರ್ಷಕ ಗಿಪ್ಟ್

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅನ್ನಛತ್ರದಲ್ಲಿ ಹಾಲು ಉಕ್ಕಿಸುವ ಕಾರ್ಯ

Suddi Udaya

ಎಸ್. ಎಸ್. ಎಫ್ ಇಂಡಿಯಾ ರಾಷ್ಟ್ರಮಟ್ಟದ ಸಾಹಿತ್ಯೋತ್ಸವ : ಸ್ಟಾರ್ ಲೈನ್ ಆಂ.ಮಾ. ಶಾಲೆಯ ವಿದ್ಯಾರ್ಥಿ ಸೈಯದ್ ಮುಹಮ್ಮದ್ ಉವೈಸ್ ಉರ್ದು ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

Suddi Udaya

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿ ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷ ವಿನಯಚಂದ್ರ ಗೌಡ ಆಯ್ಕೆ

Suddi Udaya

ಕೆಲ್ಲಗುತ್ತು ಶ್ರೀ ಸತ್ಯಸಾರಮುಪ್ಪಣ್ಯ ಮತ್ತು ಸ್ವಾಮಿ ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ

Suddi Udaya

ಕನ್ಯಾಡಿ II ಸ.ಉ.ಹಿ.ಪ್ರಾ. ಶಾಲೆಯಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

Suddi Udaya
error: Content is protected !!