ಬೆಳ್ತಂಗಡಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಕರಾವಳಿಯಲ್ಲಿ ಚಂಡ ಮಾರುತದ ಭೀತಿ ಎದುರಾಗಿದೆ. ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು, ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಮಳೆ ವರ್ಷಧಾರೆಯ ಆರಂಭಕ್ಕೆ ಮುನ್ನಡಿ ದೊರೆತಂತೆ ಆಗಿದೆ. ಬೆಳ್ತಂಗಡಿ ತಾಲೂಕಿನದ್ಯಾಂತ ಭಾರೀ ಮಳೆಯಾಗುತ್ತಿದ್ದು ಮೇ 28 ವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದ್ದು ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ತಾಲೂಕಿನ ಮುಂಡಾಜೆ ಗ್ರಾಮದಲ್ಲಿ ಕಳೆದ 24 ಗಂಟೆಗಳಲ್ಲಿ 103 ಮಿ.ಮೀ. ಮಳೆ ಸುರಿದಿದೆ. ಗ್ರಾಮೀಣ ಭಾಗದಲ್ಲಿ ತೋಡು, ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ತಾಲೂಕಿನ ರಸ್ತೆಗಳು ಚರಂಡಿ ವ್ಯವಸ್ಥೆ ಇಲ್ಲದೆ ಹೊಳೆಯಂತಾಗಿದೆ. ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಸವಾರರು ಹರಸಾಹಸ ಪಡುವಂತಾಗಿದೆ.ಇಂದು ಕೂಡ ಭಾರೀ ಮಳೆಯಾಗುವ ಸಂಭವ ಇರುವುದರಿಂದ ಮುನ್ನೆಚ್ಚರಿಕೆ ವಹಿಸುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಬೆಳ್ತಂಗಡಿ ಮಳೆ ಪ್ರಮಾಣ:
ಬೆಳ್ತಂಗಡಿ: 87.4, ಧರ್ಮಸ್ಥಳ: 67.0, ಕೊಕ್ಕಡ :56.6, ನಾರಾವಿ: 82.6, ವೇಣೂರು: 48.6, ಸುಲ್ಕೇರಿ: 145.0, ಕುಕ್ಕಳ: 140.0,
ಒಟ್ಟು: 627.2, ಸರಾಸರಿ: 89.6 ಪ್ರಮಾಣ ಮಳೆಯಾಗಿದೆ.