ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳಾಲು: ಶ್ರೀ ಅನಂತೇಶ್ವರ ಭಜನಾ ಮಂಡಳಿಯ ವಾರ್ಷಿಕ ಮಹಾಸಭೆ ಹಾಗೂ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ

ಬೆಳಾಲು: ಶ್ರೀ ಅನಂತೇಶ್ವರ ಭಜನಾ ಮಂಡಳಿಯ ವಾರ್ಷಿಕ ಮಹಾಸಭೆ ಹಾಗೂ ಲೆಕ್ಕಪತ್ರ ಮಂಡನೆ ಮತ್ತು ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.

ಭಜನಾ ಮಂಡಳಿಯ 2025-26 ನೇ ಸಾಲಿನ ಅಧ್ಯಕ್ಷರಾಗಿ ಹರೀಶ್ ಪೂಜಾರಿ ಪೋಸೊಟ್ಟು, ಕಾರ್ಯದರ್ಶಿಯಾಗಿ ತೇಜಸ್ ಗೌಡ ಶಾಂತಿನಗರ ಹಾಗೂ ಕೋಶಾಧಿಕಾರಿಯಾಗಿ ಹರೀಶ್ ಗೌಡ ಮುಂಡೆತ್ಯಾರು, ಉಪಾಧ್ಯಕ್ಷರಾಗಿ ಹರೀಶ್ ನಾಯ್ಕ ಕುದ್ದಂಟೆ, ಜತೆ ಕಾರ್ಯದರ್ಶಿಯಾಗಿ ಗಣೇಶ್ ಗೌಡ ಅನಂತೋಡಿ ಮತ್ತು ಕಾರ್ಯಕಾರಣಿ ಸಮಿತಿಯ ಸದಸ್ಯರಾಗಿ ಹರಿಪ್ರಸಾದ್ ಗೌಡ ಅರಣೆಮಾರು, ಸುಮಿತ್ ಆಚಾರ್ಯ ಅನಂತೋಡಿ, ವಿಘ್ನೇಶ್ ಗೌಡ ಅನಂತೋಡಿ , ಶಶಿಧರ ಪೂಜಾರಿ ಓಡಿಪ್ರೊಟ್ಟು, ಪ್ರವೀಣ್ ಗೌಡ ಆನಂತೋಡಿ ಹಾಗೂ ಸದಸ್ಯರನ್ನು ನೇಮಕ ಮಾಡಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಶ್ರೀ ಅನಂತೇಶ್ವರ ಮಕ್ಕಳ ಕುಣಿತಾ ಭಜನಾ ತಂಡಕ್ಕೆ ತರಬೇತಿ ನೀಡುತ್ತಿರುವ ಗುರುಗಳಾದ ಶ್ರೀಮತಿ ಸೌಮ್ಯ ರಾವ್ ಇವರಿಗೆ ಗೌರವಿಸಲಾಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ ನವೀನ್ ಗೌಡ ಕಂಬಳದಡ್ಡ ವಹಿಸಿದ್ದರು. ಭಜನಾ ಮಂಡಳಿಯ ಕಾರ್ಯದರ್ಶಿ ವಿಘ್ನೇಶ್ ಗೌಡ ಅನಂತೋಡಿ ವಾರ್ಷಿಕ ಲೆಕ್ಕಾಚಾರ ಮಂಡನೆಯನ್ನು ಮಾಡಿದರು.

ವೇದಿಕೆಯಲ್ಲಿ ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಇದರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಗೌಡ ಶ್ರೀ ಸೌಧ ಬೆಳಾಲು, ವ್ಯವಸ್ಥಾಪನ ಸಮಿತಿಯ ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೇರ್ಮುನ್ನಾಯ, ಉಪಾಧ್ಯಕ್ಷರಾದ ಶ್ರೀಮತಿ ಮಮತಾ ದಿನೇಶ್ ಪೂಜಾರಿ ಉಪ್ಪಾರು, ಮಹಿಳಾ ಸಮಿತಿಯ ಅಧ್ಯಕ್ಷ ಶ್ರೀಮತಿ ಹೇಮಲತಾ ಶ್ರೀನಿವಾಸ ಗೌಡ ಗಣಪನಗುತ್ತು, ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ಶ್ರೀಮತಿ ವಿದ್ಯಾ ಶ್ರೀನಿವಾಸ ಗೌಡ ಬೆಳಾಲು ಮತ್ತು ವ್ಯವಸ್ಥಾಪನ ಸಮಿತಿಯ ಜತೆ ಕಾರ್ಯದರ್ಶಿ ಸತೀಶ್ ಗೌಡ ಎಳ್ಳುಗದ್ದೆ ಹಾಗೂ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ದೇವಸ್ಥಾನದ ಕಛೇರಿ ಮೇಲ್ವಿಚಾರಕರಾದ ಶಿವಪ್ರಸಾದ್ ಗೊಲ್ಲ ಕಾರ್ಯಕ್ರಮ ನಿರೂಪಿಸಿದರು. ಭಜನಾ ಮಂಡಳಿಯ ಸದಸ್ಯರಾದ ಹರೀಶ್ ನಾಯ್ಕ ಕುದ್ದಂಟೆ ಸ್ವಾಗತಿಸಿ, ಭಜನಾ ಮಂಡಳಿಯ ಗೌರವ ಸಲಹೆಗಾರರಾದ ಜಾರಪ್ಪ ಗೌಡ ಅರಣೆಮಾರು ವಂದಿಸಿದರು.

Related posts

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ತಾಲೂಕು ಮಟ್ಟದ ಸ್ವಾಸ್ತ್ಯ ಸಂಕಲ್ಪ ಸಪ್ತಾಹ

Suddi Udaya

ಆ. 7 -16: ಮಡಂತ್ಯಾರು ನೂತನ್ ಕ್ಲೋತ್ ಸೆಂಟರ್ ನಲ್ಲಿ ಆಷಾಡ ಡಿಸ್ಕೌಂಟ್ ಸೇಲ್

Suddi Udaya

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ದ.ಕ ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್ ಬೆಳ್ತಂಗಡಿ ತಾಲೂಕಿನ ವಿವಿಧ ಬಸದಿಗಳಿಗೆ ಭೇಟಿ

Suddi Udaya

ಸೌತಡ್ಕ ದೇವಸ್ಥಾನಕ್ಕೆ ಸ್ಥಿರಾಸ್ತಿ ಖರೀದಿಯಲ್ಲಿ ಅವ್ಯವಹಾರ: ತನಿಖೆಗೆ ಸಹಾಯಕ ಆಯುಕ್ತರಿಂದ ಆದೇಶ

Suddi Udaya

ಹೊಕ್ಕಾಡಿಗೋಳಿ ಕುಲಾಲ ಯಾನೆ ಕುಂಬಾರರ ಸಮಾಜ ಸೇವಾ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಬಡ ಕುಟುಂಬದ ಮನೆಯ ಮೇಲ್ಚಾವಣಿ ದುರಸ್ತಿ

Suddi Udaya

ನೈತಿಕ ಪೊಲೀಸ್ ಗಿರಿ – ಐವರು ಪೊಲೀಸ್ ವಶಕ್ಕೆ : ಪ್ರತಿದೂರು ದಾಖಲು

Suddi Udaya
error: Content is protected !!