March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ: ಧೀಮತಿ ಜೈನ ಮಹಿಳಾ ಸಮಾಜದ ಮಾಸಿಕ ಸಭೆ

ಉಜಿರೆ: ಜೈನ ಧರ್ಮ ಕೇವಲ ಒಂದು ಮತ ಅಷ್ಟೇ ಅಲ್ಲ ಅದೊಂದು ಸರಳವಾದ ಜೀವನ ಶೈಲಿ. ಅದೊಂದು ವೈಚಾರಿಕತೆ, ನಾರಕ ತೀರ್ಯಂಚ ಗತಿಗಳಿಂದ ಮುಕ್ತಿ ಪಡೆದು ಮೋಕ್ಷ ಸಾಧನೆಗೆ ಜೈನ ಧರ್ಮ ದಾರಿ ತೋರುತ್ತದೆ ಎಂದು ಧೀಮತಿ ಜೈನ ಮಹಿಳಾ ಸಮಾಜದ ಮಾಸಿಕ ಸಭೆಯಲ್ಲಿ ,’ಆಧುನಿಕ ಜೀವನ ಶೈಲಿಯಲ್ಲಿ ಜೈನ ಧರ್ಮದ ಆಚರಣೆಯ ಪ್ರಸ್ತುತತೆ’ ಎಂಬ ವಿಷಯದ ಕುರಿತು ಕ್ಷೇಮವನ ಬೆಂಗಳೂರು ಇದರ ನಿರ್ದೇಶಕರಾದ ಶ್ರದ್ದಾ ಅಮಿತ್ ಅಭಿಪ್ರಾಯ ವ್ಯಕ್ತಪಡಿಸಿದರು.

ಯಾವುದೇ ಧರ್ಮದ ತತ್ವಗಳನ್ನು ವೈಜ್ಞಾನಿಕ ಚಿಂತನೆಗೆ ಒಳಪಡಿಸಿ ಸಮಾಜದ ಒಳಿತಿಗಾಗಿ ಸಕಾರಾತ್ಮಕವಾಗಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯತೆಗಳಲ್ಲಿ ಒಂದು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ರಜತ ಪಿ.ಶೆಟ್ಟಿ ಮಾತನಾಡಿ ಜೈನ ಧರ್ಮದ ನೈಜ ತಿರುಳನ್ನು ಅರ್ಥೈಸಿಕೊಂಡು ಪಾಲಿಸುವುದು ನೆಮ್ಮದಿಯ ಜೀವನಕ್ಕೆ ರಹದಾರಿ. ಜೈನ ಧರ್ಮದ ಮೂಲ ತತ್ವಗಳಾದ ಅಹಿಂಸೆ, ತ್ಯಾಗ ಅಸ್ಥೇಯ ಅಪರಿಗ್ರಹ ಹಾಗೂ ಅನೇಕಾಂತವಾದಗಳಲ್ಲಿ ಆಳವಾದ ಜೀವನದ ಸತ್ಯ ಅಡಗಿದೆ ಅದನ್ನು ಅರಿತಾಗ ಜೀವನ ಸಾರ್ಥಕವಾಗುವುದು ಎಂದರು. ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಜನೆಗಳಲ್ಲಿ ವಿಶೇಷವಾಗಿ ತೊಡಗಿಸಿಕೊಂಡು ಮಹಿಳಾ ಸಬಲೀಕರಣಕ್ಕೆ ಕೊಡುಗೆ ನೀಡುತ್ತಿರುವ ಶ್ರದ್ಧಾ ಅಮಿತ್ ಅವರನ್ನು ದೀಮತಿ ಜೈನ ಮಹಿಳಾ ಸಮಾಜದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.


ಕಾರ್ಯಕ್ರಮದ ಆರಂಭದಲ್ಲಿ ಪೇಹಲ್ಗಾಮ್ ದಾಳಿಯಲ್ಲಿ ಮಡಿದ ನಾಗರಿಕರು ಹಾಗೂ ಪ್ರತಿದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸ್ಮೃತಿ ಜೈನ್ ಪ್ರಾರ್ಥಿಸಿ, ಸ್ಮಿತಾ ಜೈನ್ ಸ್ವಾಗತಿಸಿದರು. ಅಕ್ಷತಾ ಜೈನ್ ಅತಿಥಿಗಳನ್ನು ಪರಿಚಯಿಸಿದರು. ಪುನೀತ ಜೈನ್ ವಂದಿಸಿ, ದಿವ್ಯಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.ಅಶ್ವಿನಿ ಪ್ರವೀಣ್ ಇಂದ್ರ ಹಾಗೂ ಉಲ್ಲಾಸಿನಿ ಕಂಬಳಿ ಸಹಕರಿಸಿದರು.

Related posts

ಎನ್.ಎಂ.ಎಂ.ಎಸ್ ವಿದ್ಯಾರ್ಥಿ ವೇತನ ಪರೀಕ್ಷೆ: ಹೊಕ್ಕಾಡಿಗೋಳಿ ಸ.ಉ.ಪ್ರಾ ಶಾಲೆಯ ವಿದ್ಯಾರ್ಥಿ ರೈಶಾ ಸುಹಾನ ರಿಗೆ ಉತ್ತಮ ಅಂಕ

Suddi Udaya

ಕನ್ಯಾಡಿ 1: ಪ್ರಗತಿಪರ ಕೃಷಿಕ ನಾರಾಯಣ ಗೌಡ ನಿಧನ

Suddi Udaya

ಕಾಡಾನೆ ದಾಳಿ ಪ್ರಕರಣ: ಮೃತರ ಕುಟುಂಬಕ್ಕೆ ಗರಿಷ್ಠ ಮೊತ್ತ ಪರಿಹಾರ ನೀಡಲು ಉದ್ಯಮಿ ಗಣೇಶ್ ಕಲಾಯಿ ಒತ್ತಾಯ

Suddi Udaya

ಬಿಜೆಪಿ ತೆಕ್ಕೆಗೆ ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: ಬಿರುಸಿನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ -9, ಕಾಂಗ್ರೇಸ್ -3 ಗೆಲುವು

Suddi Udaya

ಮೇಲಂತಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಗುರುವಾಯನಕೆರೆ: ಎಕ್ಸೆಲ್‌ ಪ.ಪೂ. ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಗುರು ನಮನ ಹಾಗೂ 272 ಶಿಕ್ಷಕರಿಗೆ ಗೌರವಾರ್ಪಣೆ

Suddi Udaya
error: Content is protected !!