March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪೈ ಅಕಾಡೆಮಿಯ ನೂತನ ಶಾಖೆ ಕಕ್ಕಿಂಜೆಯಲ್ಲಿ ಶುಭಾರಂಭ

ಕಕ್ಕಿಂಜೆ: ಇಲ್ಲಿನ ಸೀತಾ ಕಾಂಪ್ಲೆಕ್ಸ್ ನಲ್ಲಿ ‘ಪೈ ಅಕಾಡೆಮಿಯ’ ನೂತನ ಶಾಖೆಯು ಮೇ ೨೮ ರಂದು ಶುಭಾರಂಭಗೊAಡಿತು. ಶ್ರೀಮತಿ ಲಕ್ಷ್ಮೀ ದೇವಿ ಪೈ ಉದ್ಘಾಟಿಸಿ ಶುಭ ಹಾರೈಸಿದರು. ಸಂಸ್ಥೆಯ ಸಂಸ್ಥಾಪಕಿಯಾದ ಶ್ರೀಮತಿ ಚೈತ್ರಾ ಪೈ ಹಾಗೂ ಸ್ವಾತಿ ಪೈ ಯವರು ದೀಪ ಬೆಳಗಿಸಿದರು.


ಬೆಳ್ತಂಗಡಿ ಹಾಗೂ ಉಜಿರೆಯಲ್ಲಿ ಅತ್ಯಂತ ಯಶಸ್ವಿಯಾಗಿ ವಿದ್ಯಾರ್ಥಿಗಳಿಗೆ ತರಗತಿಯನ್ನು ನಡೆಸಿ ವಿದ್ಯಾರ್ಥಿ ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರವಾದ ಪೈ ಅಕಾಡೆಮಿಯು, ಸ್ಥಳೀಯ ಪೋಷಕರ ವಿನಂತಿ ಮತ್ತು ಸಹಕಾರದ ಮೇರೆಗೆ ನೂತನ ಶಾಖೆಯ ಕನಸನ್ನು ಕಟ್ಟಿತ್ತು. ನೂತನ ಶಾಖೆಯಲ್ಲಿ ಪ್ರಸ್ತುತ ಎಲ್.ಕೆ.ಜಿ ಯಿಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ತರಗತಿಯನ್ನು ನಡೆಸುವ ಉದ್ದೇಶವಿದೆ ಎಂದು ಸಂಸ್ಥೆಯ ಸಂಸ್ಥಾಪಕಿ ಶ್ರೀಮತಿ ಚೈತ್ರ ಎಸ್ ಪೈ ತಿಳಿಸಿದರು.


ಈ ಸಂದರ್ಭದಲ್ಲಿ ಶ್ರೀಮತಿ ಚೈತ್ರ ಎಸ್ ಪೈ ಅವರ ಪತಿ “ಪೈ ಸ್ವೀಟ್ಸ್” ಸಂತೆಕಟ್ಟೆಯ ಮಾಲಕರಾದ ಬಿ. ಸತೀಶ್ ಪೈ ಹಾಗೂ ಪೈ ಕುಟುಂಬದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

Related posts

ಮೇ 25: ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನಿಂದ “ಯಶೋ-ವಿಜಯ”, ಬದುಕು-ನೆನಪು-ಸ್ಮರಣೆ

Suddi Udaya

ನ.15 : ತ್ರೈಮಾಸಿಕ ಜಿಲ್ಲಾ ಕೆ. ಡಿ.ಪಿ. ಸಭೆ

Suddi Udaya

ಶ್ರೀ ರಾಮ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

Suddi Udaya

ಕಲ್ಮಂಜ: ನಿಡಿಗಲ್ ನಿವಾಸಿ ರಾಜು ಮಡಿವಾಳ ನಿಧನ

Suddi Udaya

ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಬಾಲಕ, ಬಾಲಕಿಯರ ಕಬಡ್ಡಿ ಪಂದ್ಯಾಟ: ಇಂದಿರಾ ಗಾಂಧಿ ವಸತಿ ಶಾಲೆ, ಹೊಸಂಗಡಿ ಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ

Suddi Udaya

ಬೆಳ್ತಂಗಡಿ: ಬುದ್ಧ ಬಸವ ಅಂಬೇಡ್ಕರ್ ವಚನ ಟ್ರಸ್ಟ್ ವತಿಯಿಂದ ಕೋರೆಗಾಂವ್ ವಿಜಯೋತ್ಸವ

Suddi Udaya
error: Content is protected !!