September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಿಕ್ಷಣ ಸಂಸ್ಥೆಶುಭ ವಿವಾಹ

ಉಜಿರೆ ಎಸ್‌ಡಿಎಂ ಆಂ.ಮಾ. (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ

ಉಜಿರೆ: . ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ (ಸಿ.ಬಿ.ಎಸ್.ಇ) ಬೇಸಿಗೆ ರಜೆಯನ್ನು ಮುಗಿಸಿದ ವಿದ್ಯಾರ್ಥಿಗಳಿಗೆ 2025-26ನೇ ಶೈಕ್ಷಣಿಕ ಸಾಲಿನ ಮೊದಲನೇ ದಿನದ ಸಂಭ್ರಮ.

ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆ ಶೈಕ್ಷಣಿಕ ಸಂಯೋಜಕರಾದ ಡಾ. ಎಸ್.ಎನ್ ಕಾಕತ್ಕರ್ ಹಾಗೂ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಶ್ರೀ ಧನ್ಯಕುಮಾರ್ ಇವರು ದೀಪ ಪ್ರಜ್ವಲಿಸಿ, “ಶಾಲಾ ದಿನಚರಿ 2025-26” ಪುಸ್ತಕ ಬಿಡುಗಡೆಗೊಳಿಸಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆಯ ಶುಭನುಡಿಗಳೊಂದಿಗೆ ಶೈಕ್ಷಣಿಕ ವರ್ಷವನ್ನು ಶುಭಾರಂಭಗೊಳಿಸಿದರು.

ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಾಲಾ ಶಿಕ್ಷಕ ವೃಂದವು ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಬಣ್ಣ ಕಾಗದಗಳಿಂದ ಅಲಂಕರಿಸಲಾಗಿತ್ತು. ವಿದ್ಯಾರ್ಥಿಗಳಿಗೆ ತರಗತಿ ಕೋಣೆಗಳಲ್ಲಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಯಿತು. ಒಂದನೇ ತರಗತಿಗೆ ತೇರ್ಗಡೆಯಾಗಿರುವ ವಿದ್ಯಾರ್ಥಿಗಳನ್ನು ವಿಶೇಷವಾಗಿ ಆರತಿ ಬೆಳಗಿ ಶುಭಾಶಯ ಪತ್ರದೊಂದಿಗೆ ತಮ್ಮ ಶಾಲಾ ಜೀವನದ ಮೊದಲನೇ ದಿನಕ್ಕೆ ಸ್ವಾಗತಿಸಲಾಯಿತು.

Related posts

ಪ್ರತಿಭಾ ಕಾರಂಜಿ ಸ್ಪರ್ಧೆ: ಶ್ರೀ ಭಾರತೀಯ ಆಂ.ಮಾ. ಪ್ರೌಢಶಾಲೆಯ ಹಿರಿಯ ಪ್ರಾಥಮಿಕ ವಿಭಾಗಕ್ಕೆ ಸಮಗ್ರ ಪ್ರಶಸ್ತಿ

Suddi Udaya

ತಣ್ಣೀರುಪಂತ ಪ್ರಾ.ಕೃ.ಪ.ಸ. ಸಂಘಕ್ಕೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಪ್ರಶಸ್ತಿ

Suddi Udaya

ತಾಲೂಕು ಮಟ್ಟದ ಫುಟ್ ಬಾಲ್ : ಬೆಳ್ತಂಗಡಿ ಎಸ್ ಡಿ ಎಂ ಆಂ.ಮಾ. ಶಾಲೆಯ ಪ್ರೌಢಶಾಲಾ ತಂಡ ದ್ವಿತೀಯ ಸ್ಥಾನ

Suddi Udaya

ನಾಲ್ಕೂರು: ನಿಟ್ಟಡ್ಕದಲ್ಲಿ ಪಂಚಶ್ರೀ ಮಕ್ಕಳ ಕುಣಿತಾ ಭಜನಾ ತಂಡ ರಚನೆ

Suddi Udaya

ಹೊಟೇಲ್ ಕೆಲಸಗಾರ ಶೌಚಾಲಯದಲ್ಲಿ ಶವವಾಗಿ ಪತ್ತೆ

Suddi Udaya

ಬೆಳ್ತಂಗಡಿ ಮಹಿಳಾ ಜೆಸಿ ವಿಭಾಗದಿಂದ ಧ್ವನಿವರ್ಧಕ ಕೊಡುಗೆ

Suddi Udaya
error: Content is protected !!