ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ವಾಣಿ ಕಾಲೇಜು: ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ‘ವಿದ್ಯಾ ಪ್ರವೇಶಂ’ ಓರಿಯೆಂಟೇಷನ್ ಕಾರ್ಯಕ್ರಮ

ಗುರುವಾಯನಕೆರೆ: ವಿದ್ಯಾಭ್ಯಾಸದೊಂದಿಗೆ ಶ್ರಮ, ಶಿಸ್ತಿಗೆ ಆದ್ಯತೆ ನೀಡಿ ಉನ್ನತ ವ್ಯಕ್ತಿತ್ವವನ್ನು ಹೊಂದುವುದು ವಿದ್ಯಾರ್ಥಿಗಳ ಗುರಿಯಾಗಬೇಕು ಎಂದು ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕುಶಾಲಪ್ಪ ಗೌಡ ಹೇಳಿದರು.

ಅವರು ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ನಡೆದ ‘ವಿದ್ಯಾಪ್ರವೇಶಂ’ ಓರಿಯೆಂಟೆಷನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಅನಗತ್ಯ ವ್ಯಾಮೋಹಗಳಿಗೆ, ದುಶ್ಚಟಗಳಿಗೆ ಒಳಗಾಗದೆ ಇತರರಿಗೆ ಮಾದರಿಯಾಗಿ ಉನ್ನತ ಸ್ಥಾನವನ್ನು ಗಳಿಸಿಕೊಳ್ಳಬೇಕು ಎಂದರು.

ವಾಣಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗಣೇಶ್ ಗೌಡ, ಆಡಳಿತ ಅಧಿಕಾರಿ ಪ್ರಸಾದ್ ಕುಮಾರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸುರೇಂದ್ರ ಉಪಸ್ಥಿತರಿದ್ದರು. ಪ್ರಾಂಶುಪಾಲ ವಿಷ್ಣುಪ್ರಕಾಶ್ ಎಂ. ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಮತಿ ಸೌಮ್ಯ ಬಿ. ಧನ್ಯವಾದ ಸಲ್ಲಿಸಿದರು. ಶ್ರೀಮತಿ ಅನುರಾಧ ಕೆ ರಾವ್ ಕಾರ್ಯಕ್ರಮ ನಿರೂಪಿಸಿದರು.

ವಿಜ್ಞಾನ ವಿಭಾಗದ ಉಪನ್ಯಾಸಕರಾದ ಶ್ರೀಮತಿ ರಾಧಿಕಾ, ಶ್ರೀಮತಿ ವಿನಯ ಭಿಡೆ, ಶ್ರೀಮತಿ ಸೌಮ್ಯ ಬಿ, ಶ್ರೀಮತಿ ಅನುಷಾ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ನಡೆಸಿಕೊಟ್ಟರು.ಉಪನ್ಯಾಸಕ ಹರ್ಷಿತ್ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು.ಉಪನ್ಯಾಸಕರಾದ ಸುಧೀರ್ ಕೆ ಎನ್ ಮತ್ತು ಶಂಕರ್ ರಾವ್ ವಿದ್ಯಾರ್ಥಿಗಳಿಗೆ ಕಾಲೇಜಿನ ನಿಯಮಾವಳಿಗಳನ್ನು ತಿಳಿಸಿಕೊಟ್ಟರು.

Related posts

ಗುರುವಾಯನಕೆರೆ: ನಿವೃತ್ತ ಕೆ.ಎಸ್.ಆರ್.ಟಿ.ಸಿ ಟ್ರಾಫಿಕ್ ಕಂಟ್ರೋಲರ್ ಕೃಷ್ಣ ಕಾಮತ್ ನಿಧನ

Suddi Udaya

ರಾಷ್ಟೋತ್ಥಾನ ಪರಿಷತ್ತಿನ ಮಾಸಪತ್ರಿಕೆ ಉತ್ಥಾನ ಬಿಡುಗಡೆ

Suddi Udaya

ಉಡುಪಿ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರಾಗಿ ಧರಣೇಂದ್ರ ಕೆ. ಜೈನ್ ಆಯ್ಕೆ

Suddi Udaya

ಶ್ರೀ.ಕ್ಷೇ.ಧ.ಗ್ರಾ. ಯೋಜನೆಯ ಕಳೆಂಜ ಬಿ ಕಾರ್ಯಕ್ಷೇತ್ರದ ಸ್ಪಂದನ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya

ಉಜಿರೆ ಅನುಗ್ರಹ ಪೂರ್ವ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಉಜಿರೆಯಲ್ಲಿ ನಾಟ್ಯ ತರಬೇತಿ ಪುನರಾರಂಭ

Suddi Udaya
error: Content is protected !!