September 6, 2026
Uncategorized

ಓಡಿಲ್ನಾಳ ಶಾಲೆಯಲ್ಲಿ ಅದ್ದೂರಿಯ ಶಾಲಾ ಪ್ರಾರಂಭೋತ್ಸವ

ಓಡಿಲ್ನಾಳ: ಜೂ.2 ರಂದು ಸ. ಉ. ಪ್ರಾ. ಶಾಲೆ ಓಡಿಲ್ನಾಳದಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಬಹಳ ಸಂಭ್ರಮ ಸಡಗರದಿಂದ ನಡೆಸಲಾಯಿತು. ತಳಿರು ತೋರಣಗಳನ್ನು ಕಟ್ಟಿ ಅಲಂಕಾರಗೊಂಡ ನಮ್ಮಿ ಶಾಲೆ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ತಮ್ಮ ದಿವ್ಯ ಉಪಸ್ಥಿತಿಯಲ್ಲಿ, ಶಾಲೆಗೆ ದಾಖಲಾದ ವಿದ್ಯಾರ್ಥಿಗಳಿಗೆ ಗುಲಾಬಿ ಹೂಗಳನ್ನು ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.

ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಶೆಟ್ಟಿ ಬಲೂನುಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಮನರಂಜಿಸಿದರು , ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಉಷಾ.ಪಿ ಇವರು ಕಲಿಕಾ ಪ್ರೇರಣೆಯ ಸಂಕೇತವಾಗಿ ಪೆನ್ಸಿಲ್ ಅನ್ನು ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.

ಕುವೆಟ್ಟು ಗ್ರಾ ಪಂ ಸದಸ್ಯರಾದ ಶ್ರೀಮತಿ ಆನಂದಿ ಎಸ್‌ ಡಿ ಎಂ ಸಿ ಸರ್ವ ಸದಸ್ಯರು, ಪೋಷಕರು, ಹಳೇವಿದ್ಯಾರ್ಥಿಗಳ ಸಂಪೂರ್ಣ ಸಹಕಾರದೊಂದಿಗೆ, ವಿದ್ಯಾರ್ಥಿಗಳಿಗೆ ಆರತಿ ಬೆಳಗಿ,ಬ್ಯಾಂಡ್ ವಾದ್ಯಗಳ ಘೋಷಗಳೊಂದಿಗೆ ಶಾಲಾ ಆವರಣದೊಳಗೆ ಕರೆತರಲಾಯಿತು.

ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಶೆಟ್ಟಿ ದೀಪವನ್ನು ಪ್ರಜ್ವಲಿಸಿ ಶುಭ ಹಾರೈಸಿದರು. ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಅಧ್ಯಕ್ಷರ ಸಮ್ಮುಖದಲ್ಲಿ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ನೀಡಲಾಯಿತು ಶ್ರೀಮತಿ ಸುಜಾತ ಕಾರ್ಯಕ್ರಮ ನಿರೂಪಿಸಿದರು ಶ್ರೀಮತಿ ಅಕ್ಷತಾ ಧನ್ಯವಾದಗಳು ಕೋರಿದರು.

ಶಿಕ್ಷಕ ವೃಂದ ಹಾಗೂ ಅಡುಗೆ ಸಿಬ್ಬಂದಿಗಳ ಸಹಕಾರದೊಂದಿಗೆ ಕಾರ್ಯಕ್ರಮ ಅತ್ಯುತ್ತಮವಾಗಿ ಸಂಪನ್ನಗೊಂಡಿತು.

Related posts

ರೆಖ್ಯ ಅಂಗನವಾಡಿಯಲ್ಲಿ ಹಾಳಾದ ಮೊಟ್ಟೆ ವಿತರಣೆ: ಗ್ರಾಮಸ್ಥರ ಅಕ್ರೋಶ

Suddi Udaya

ನಿಡ್ಲೆ ಸಿಡಿಲು ಬಡಿದು ಹಾನಿಗೊಳಗಾದ ರಾಜೇಂದ್ರ ಗೌಡ ರವರ ಮನೆಗೆ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನಿಂದ ಭೇಟಿ

Suddi Udaya

ದಸ್ಕತ್ ತುಳು ಚಲನಚಿತ್ರದ ಪೋಸ್ಟರ್ ಬಿಡುಗಡೆ

Suddi Udaya

ಸುಲ್ಕೇರಿ: ಅ.ಖಾ.ಹಿ.ಪ್ರಾ. ಶಾಲೆ- ಶ್ರೀರಾಮ ಪ್ರೌಢಶಾಲೆಯಲ್ಲಿ ಸಹಪಠ್ಯ ಚಟುವಟಿಕೆ ಉದ್ಘಾಟನೆ

Suddi Udaya

ಅಂಡಿಂಜೆ ಗ್ರಾ.ಪಂ. ವತಿಯಿಂದ ಪ.ಜಾತಿ, ಪ. ಪಂಗಡದ ಕುಟುಂಬಗಳಿಗೆ ಹಾಗೂ ವಿಶೇಷ ಚೇತನರಿಗೆ ತಲಾ ಎರಡರಂತೆ ಚಯರ್ ವಿತರಣೆ

Suddi Udaya

ಕರಾಟೆ ಸ್ಪರ್ಧೆ: ಬೆಳ್ತಂಗಡಿ ಶ್ರೀ ಧ.ಮಂ. ಆಂ. ಮಾ. ಶಾಲೆಯ ವಿದ್ಯಾರ್ಥಿ ಯಶಸ್ವಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!