March 7, 2026
ಶಾಲಾ ಕಾಲೇಜು

ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜು :ಕಾಲೇಜು ಪ್ರಾರಂಭೋತ್ಸವ

ಕೊಯ್ಯೂರು :ಅಂಕಗಳ ಜೊತೆಗೆ ಜೀವನ ಮೌಲ್ಯಗಳನ್ನು ಕಲಿತುಕೊಳ್ಳಬೇಕು. ಜೀವನದಲ್ಲಿ ಯಾವುದೇ ಸಾಧನೆ ಸಾಧ್ಯವಿದೆ. ಆದರೆ ಸಾಧಿಸುವ ಛಲ ಇರಬೇಕು ” ಎಂದು ಉಜಿರೆಯ ಶ್ರೀ ಧ. ಮ. ಪದವಿ ಕಾಲೇಜ್ ನ ಪ್ರಾಧ್ಯಾಪಕ, ಡಾ.ಹಾ ಮಾ ನ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ.ದಿವ ಕೊಕ್ಕಡ ಅಭಿಪ್ರಾಯ ಪಟ್ಟರು. ಅವರು ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜ್ ನ ‘ಕಾಲೇಜು ಪ್ರಾರಂಭೋತ್ಸವ ‘ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು

.ಕಾರ್ಯಕ್ರಮ ದ ಉದ್ಘಾಟನೆಯನ್ನು ನಿರ್ವಹಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದಯಾಮಣಿ ಯವರು “ಕೊಯ್ಯೂರು ಗ್ರಾಮದ ಶಿಕ್ಷಣ ಸಂಸ್ಥೆಗಳು ಹಲವಾರು ಪ್ರತಿಭೆಗಳನ್ನು ಸೃಷ್ಟಿಸಿವೆ. ನಮ್ಮ ಕಾಲೇಜು ನಮ್ಮ ಹೆಮ್ಮೆ ” ಎಂದು ಕಾಲೇಜ್ ನ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮ ದಲ್ಲಿ ಕೊಯ್ಯೂರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ರವೀಂದ್ರ ನಾಥ ಗೌಡ ರವರು ಭಾಗವಹಿಸಿದ್ದರು.ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಶ್ರೀ ದಾಮೋದರ ಗೌಡ ಬೆರ್ಕೆ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿನಿಯರಾದ ವಿನಯ, ಚಿರಸ್ವಿ, ವಿದ್ಯಾ, ಐಶ್ವರ್ಯ,ಫಾತಿಮತ್ ಸಹಲ ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಶ್ರೀ ಮೋಹನ ಗೌಡ ಪ್ರಸ್ತಾವನೆಯೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಲೋಕೇಶ್ ಗೌಡ ಪಾಂಬೇಲು ವಂದನಾರ್ಪಣೆ ಗೈದರು. ಉಪನ್ಯಾಸಕ ಶ್ರೀ ಲಕ್ಷ್ಮಣ ಗೌಡ ಕಾರ್ಯಕ್ರಮ ನಿರ್ವಹಿಸಿದರು.ಉಪನ್ಯಾಸಕರಾದ ಶ್ರೀಮತಿ ಭವ್ಯ, ಶ್ರೀಮತಿ ತೃಪ್ತಿ, ಶ್ರೀ ಸಂತೋಷ್ ಕುಮಾರ್ ಕಾರ್ಯಕ್ರಮ ದ ಯಶಸ್ಸಿಗೆ ಸಹಕರಿಸಿದರು.

Related posts

ಎಕ್ಸೆಲ್ ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ

Suddi Udaya

ವಿದ್ಯಾರ್ಥಿಗೆ ಬೆತ್ತದಿಂದ ಥಳಿಸಿದ ಶಿಕ್ಷಕನ ವಿರುದ್ದ ದೂರು ದಾಖಲು

Suddi Udaya

ಲಾಯಿಲ: ಕುಂಟಿನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಜೂ. 3: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನಿಂದ ‘ದಿ ಕೇರಳ ಸ್ಟೋರಿ’ ಚಲನಚಿತ್ರದ ಉಚಿತ ಪ್ರದರ್ಶನ

Suddi Udaya

ರಾಜ್ಯಮಟ್ಟದ ಭಾಷಣ ಸ್ಪರ್ಧೆ: ಧನುಶ್ರೀ ಎಸ್ ಕುಲಾಲ್ ತೃತೀಯ

Suddi Udaya

ಬೆಳ್ತಂಗಡಿ: ಸ.ಪ.ಪೂ. ಕಾಲೇಜಿನ ಪ್ರಾಚಾರ್ಯ ಸುಕುಮಾರ್ ರವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ

Suddi Udaya
error: Content is protected !!