25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಜೂ.8:ಬಳಂಜ ಬಿಲ್ಲವ ಸಂಘದಲ್ಲಿ ದತ್ತಿನಿಧಿಯಿಂದ ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

ಬಳಂಜ: ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕ, ಕಲೆ,ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಗೊಂಡ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ-ನಾಲ್ಕೂರು-ತೆಂಕಕಾರಂದೂರು ಇವುಗಳ ಜಂಟಿ ಆಶ್ರಯದಲ್ಲಿ ಧತ್ತಿ ನಿಧಿಯಿಂದ ಉಚಿತ ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮವು ಜೂ.೮ರಂದು ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದ ಭಾಗಿ ಮುಂಡಪ್ಪ ಪೂಜಾರಿ ಸಭಾ ವೇದಿಕೆಯಲ್ಲಿ ನಡೆಯಲಿದೆ.

ಸ್ವಾವಲಂಬಿ ಬದುಕು ಹಾಗೂ ಶೈಕ್ಷಣಿಕವಾಗಿ ಗಟ್ಟಿಕೊಂಡಾಗ ಬದುಕು ಸುಂದರವಾಗುತ್ತದೆ ಎಂಬ ಸದುದ್ದೇಶವನ್ನು ಇಟ್ಟುಕೊಂಡು, ಬ್ರಹ್ಮಶ್ರೀ ನಾರಾಯಾಣ ಗುರುಗಳ ತತ್ವ ಸಿದ್ದಾಂತ ವಿದ್ಯೆಯಿಂದ ಸ್ವತಂತ್ರರಾಗಿರಿ,ಸಂಘಟನೆಯಿಂದ ಬಲಯುತರಾಗಿರಿ ಎಂಬ ಮಾತಿನಂತೆ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯು ಸುಮಾರು ನಾಲ್ಕೂವರೆ ದಶಕಗಳಿಂದ ಸಂಘದ ಧತ್ತಿನಿಧಿಯಿಂದ ಉಚಿತ ಪುಸ್ತಕ ವಿತರಣೆಯನ್ನು ಮಾಡುತ್ತ ಬರುತ್ತಿರುವುದು ಸಮಾಜಕ್ಕೆ ಪ್ರೇರಣೆಯಾಗಿದೆ ಎಂದು ಸಂಘದ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಬಳಂಜ ತಿಳಿಸಿದ್ದಾರೆ.

Related posts

ಚಿನ್ನಯ್ಯನಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡುವಂತೆ ಸಿ.ಎಂ ಮತ್ತು ಡಿಜಿಪಿಗೆ ಮನವಿ ನೀಡಿದ ಜಯಂತ್ ಟಿ

Suddi Udaya

ಬೆಂಗಳೂರು -ಮಂಗಳೂರು ಪೆಟ್ರೋನೆಟ್ ಪೈಪ್ ಲೈನ್ ಕೊರೆದು ಡಿಸೇಲ್ ಕಳ್ಳತನ ; ಐವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

Suddi Udaya

ಕುತ್ಲೂರು ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ನಿಂದ ನಾರಾವಿ ವಾಲ್ಮೀಕಿ ಆಶ್ರಮ ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಣೆ

Suddi Udaya

ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ನಿನಾದ 90.4 ಎಫ್.ಎಂ. ವತಿಯಿಂದ ‘ನಮ್ಮ ಹಿರಿಯರು ನಮ್ಮ ಗೌರವ’ ಮಾಹಿತಿ ಕಾರ್ಯಕ್ರಮ

Suddi Udaya

ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಗಣಪತಿ ಗುಡಿಯ ಹಾಗೂ ಪಿಲಿಚಂಡಿ ದೈವದ ದಾರಂದ ಮುಹೂರ್ತ

Suddi Udaya

ಭಾರೀ ಮಳೆಯಿಂದಾಗಿ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ತಕ್ಷಣದ ಸಹಾಯಕ್ಕಾಗಿ ಸಂಪರ್ಕಿಸುವಂತೆ ಶ್ರಮಿಕ‌ ಶಾಸಕರ ಕಾರ್ಯಾಲಯ ಮನವಿ

Suddi Udaya
error: Content is protected !!