March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಕಾಯರ್ತಡ್ಕ: ಕುಂಬಾರ ಸೇವಾ ಸಂಘದ ವಾರ್ಷಿಕ ಮಹಾಸಭೆ ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭ

ಕೊಕ್ಕಡ: ಕುಂಬಾರ ಸೇವಾ ಸಂಘ ಕಾಯರ್ತಡ್ಕ ಇದರ ವಾರ್ಷಿಕ ಮಹಾಸಭೆ ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭವು ಜೂ.8ರಂದು ಕುಂಬಾರ ಸೇವಾ ಘಟಕದಲ್ಲಿ ಜರಗಿತು.

ಪೂವಪ್ಪ ಕುಂಬಾರ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು ಉತ್ತಮ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ ಇದಕ್ಕೆ ಕುಂಭಶ್ರೀ ಗೆಳೆಯರ ಬಳಗವು ಸಹಕರಿಸುತ್ತಿದೆ ಇನ್ನು ಮುಂದೆ ಇಂತಹ ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿ ಕುಂಬಾರ ಸೇವಾ ಸಂಘದ ಗೌರವಾಧ್ಯಕ್ಷ ಸಂಜೀವ ಕುಂಬಾರ ಮಾತನಾಡಿ ಕುಂಬಾರ ಸೇವಾ ಸಂಘ ಪ್ರಾರಂಭವಾಗಿದ್ದು ಮೊದಲು ಕಾಯರ್ತಡ್ಕದಿಂದಲೇ ಎಂದು ಹೆಮ್ಮೆಯಿಂದ ತಿಳಿಸಿದರು ಹಾಗೂ ದೈವದೇವರ ಆಚರಣೆ ಹಿಂದೆ ಹೇಗೆ ಮಾಡುತ್ತಿದ್ದರು ಮತ್ತು ಈಗ ಹೇಗೆ ಮಾಡುತ್ತಿದ್ದಾರೆ ಅದನ್ನು ತಿದ್ದಿಕೊಳ್ಳುವುದು ಹೇಗೆ ಎಂದು ತಿಳಿಸಿಕೊಟ್ಟರು.

ಕುಂಬಾರ ಸೇವಾ ಸಂಘದ ಅಧ್ಯಕ್ಷ ಗಣೇಶ್ ಕುಂಬಾರ ಮಾತನಾಡಿ ಕುಂಬಾರ ಸೇವಾ ಸಂಘದ ಏಳಿಗೆಗೆ ಕುಂಭಶ್ರೀ ಗೆಳೆಯರ ಬಳಗ ಸಹಕಾರದಿಂದ ಸಾಧ್ಯವಾಗುತ್ತದೆ. ಎಲ್ಲರ ಸಹಕಾರ ಎಂದೆಂದೂ ಇರಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಒಂದರಿಂದ ಹತ್ತನೇ ತರಗತಿಯ ವರೆಗಿನ ಸ್ವಜಾತಿ ಬಾಂಧವರ ಸುಮಾರು 34 ಮಂದಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಒಂದು ವರ್ಷಗಳಲ್ಲಿ ಊರ ಮತ್ತು ಪರವೂರರಿಗೆ ಅನಾರೋಗ್ಯದ ನಿಮಿತ್ತ, ವಿದ್ಯಾಭ್ಯಾಸಕ್ಕಾಗಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಸುಮಾರು 60 ಸಾವಿರ ಮೊತ್ತವನ್ನು ಸಹಾಯಧನವನ್ನು ನೀಡಲಾಯಿತು. ಖಾದಿ ಗ್ರಾಮೋದ್ಯೋಗ ಸಂಸ್ಥೆಯಿಂದ 20 ಜನರಿಗೆ ತರಬೇತಿಯನ್ನು ನೀಡಿದ್ದು ಇದರ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಪುದುವೆಟ್ಟು ಶಾಲಾ ಶಿಕ್ಷಕಿ ಶ್ರೀಮತಿ ವೇದಾವತಿ ವಿದ್ಯೆಯ ಮಹತ್ವ ಮತ್ತು ಹೆಚ್ಚು ಅಂಕಗಳನ್ನು ಪಡೆಯಲು ಯಾವ ರೀತಿ ಪ್ರಯತ್ನ ಪಡಬೇಕು ಎಂಬುದನ್ನು ತಿಳಿಸಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಲಲಿತಾಕ್ಷಿ, ಶಾಲಾ ಶಿಕ್ಷಕಿ ಶ್ರೀಮತಿ ವೇದಾವತಿ, ಕುಂಭಶ್ರೀ ಗೆಳೆಯರ ಬಳಗದ ಕಾರ್ಯದರ್ಶಿ ಹರೀಶ್ ಎಂ, ಕಾಯರ್ತಡ್ಕ ಕುಂಬಾರ ಸಮಾಜದ ಪ್ರಮುಖರಾದ ರಾಘವ ಎಂ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂತೋಷ್ ಕುಂಬಾರ ವರದಿ ಮಂಡಿಸಿದರು. ಯಶೋಧರ ಕುಂಬಾರ ಸ್ವಾಗತಿಸಿ, ಸಂತೋಷ್ ವಂದಿಸಿ, ವಿಜಯ್ ಕೆ. ಕಾರ್ಯಕ್ರಮ ನಿರೂಪಿಸಿದರು.

Related posts

ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ನಿಡ್ಲೆ ಶಾಖೆಯ ಉದ್ಘಾಟನೆ

Suddi Udaya

ಬೆಳ್ತಂಗಡಿ: ಹೆದ್ದಾರಿಯ ಅಗಲೀಕರಣ ಪರಿಹಾರಧನ ಪಡೆದಮನೆ, ಕಟ್ಟಡಗಳ ತೆರಿಗೆ ರದ್ದು ಪಡಿಸಲು ಸೂಚನೆ

Suddi Udaya

ವೇಣೂರು ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ: ನೂತನ ಪ್ರವೇಶ ದ್ವಾರದ ಉದ್ಘಾಟನೆ ಹಾಗೂ ದ್ವಜಸ್ತಂಭದ ಲೋಕಾರ್ಪಣೆ

Suddi Udaya

ಮಾ.9: ಲಾಯಿಲ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಅಷ್ಠಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

Suddi Udaya

ಬೆಳಾಲು ಶ್ರೀಧ.ಮಂ. ಪ್ರೌಢಶಾಲೆಯಲ್ಲಿ ವಿಶ್ವ ಮಾನವ ದಿನಾಚರಣೆ

Suddi Udaya

ಕತಾರ್ ನಿಂದ‌‌ ಊರಿಗೆ ಬಂದಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

Suddi Udaya
error: Content is protected !!