March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪೆರೋಡಿತ್ತಾಯಕಟ್ಟೆ ಶಾಲೆಯಲ್ಲಿ ಉಚಿತ ನೋಟ್ ಪುಸ್ತಕ ವಿತರಣೆ

ಪೆರೋಡಿತ್ತಾಯಕಟ್ಟೆ; ಸ.ಉ.ಪ್ರಾ ಶಾಲೆ ಪೆರೋಡಿತ್ತಾಯಕಟ್ಟೆ, ಇಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಹಳೆವಿದ್ಯಾರ್ಥಿ ಸಂಘ, ಶಾಲಾ ವಿದ್ಯಾಭಿಮಾನಿಗಳ, ಹಾಗೂ ದಾನಿಗಳ ಸಹಕಾರದಿಂದ ಎಸ್‌.ಡಿ.ಎಂ.ಸಿ ಅಧ್ಯಕ್ಷ ಮುಸ್ತಫಾ ರವರ ನೇತೃತ್ವದಲ್ಲಿ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಯ ಅಧ್ಯಕ್ಷ ಮುಸ್ತಫ ರವರು ವಹಿಸಿದ್ದು, ಬಳಂಜ ಗ್ರಾಮ ಪಂಚಾಯತ್ ನ ಸದಸ್ಯರಾದ ನಿಜಾಮುದ್ದೀನ್ ಹಾಗೂ ಶ್ರೀಮತಿ ಲೀಲಾವತಿಯವರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಕೃಷ್ಣ ನೇಸರ, ಪೆರೋಡಿತ್ತಾಯಕಟ್ಟೆ, ಅಂಗನವಾಡಿ ಶಿಕ್ಷಕಿ ಶ್ರೀಮತಿ ಸ್ಫೂರ್ತಿ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಬೆನೆಡಿಕ್ಟಾ ಪಾಯಿಸ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು, ಸ್ಲೇಟ್ ಹಾಗೂ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.

ನಂತರ ಶಾಲಾ ಅಭಿವೃದ್ಧಿಗೆ ಶ್ರಮಿಸಿದ ಬಳಂಜ ಗ್ರಾಮ ಪಂಚಾಯತ್‌ ಸದಸ್ಯರಾದ ನಿಜಾಮುದ್ದೀನ್, ಶ್ರೀಮತಿ ಪ್ರಸನ್ನ ಹಾಗೂ ಶ್ರೀಮತಿ ಲೀಲಾವತಿ ಯವರನ್ನು ಶಾಲಾ ಅಭಿವೃದ್ಧಿ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು.

ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ ಸಮಸ್ತ ವಿದ್ಯಾಭಿಮಾನಿಗಳಿಗೆ ಕೃತಜ್ಞತೆಗಳನ್ನು ಸಮರ್ಪಿಸಲಾಯಿತು. ಕಾರ್ಯಕ್ರಮವನ್ನು ಶಾಲಾ ಸಹ ಶಿಕ್ಷಕರಾದ ರಾಜೇಶ್ ರವರು ನಿರೂಪಿಸಿ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಬೆನೆಡಿಕ್ಟಾ ಪಾಯಿಸ್ ಸ್ವಾಗತಿಸಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ದೇವಿಕಾ ವಂದಿಸಿದರು.

Related posts

ಪಟ್ರಮೆ : ಪುರುಷೋತ್ತಮ ದಾಸ್ ಹೃದಯಾಘಾತದಿಂದ ನಿಧನ

Suddi Udaya

ಉಜಿರೆ ಟೆಕ್ಸ್ ಟೈಲ್ಸ್ ಉದ್ಯಮಿಯಿಂದ ಲೈಂಗಿಕ ದೌರ್ಜನ್ಯ ಆರೋಪ: ಕೆಲಸಕ್ಕೆ ಬಂದ ಮಹಿಳೆಯಿಂದ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು

Suddi Udaya

ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ನಿಧನಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸಂತಾಪ

Suddi Udaya

ಉರುವಾಲು ಶ್ರೀ ಭಾರತೀ ಆ.ಮಾ. ಪ್ರೌಢ ಶಾಲೆ ಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ

Suddi Udaya

ಉಜಿರೆ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ಪುದುವೆಟ್ಟು ಶ್ರೀ.ಧ.ಮಂ ಅ.ಹಿ.ಪ್ರಾ. ಶಾಲೆಯಲ್ಲಿ ಯಕ್ಷಗಾನ  ಮತ್ತು ನೃತ್ಯ ತರಗತಿಗಳ ಉದ್ಘಾಟನೆ

Suddi Udaya
error: Content is protected !!