March 7, 2026
Uncategorized

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ವತಿಯಿಂದ ‘ಯೋಗ ರತ್ನ ಪ್ರಶಸ್ತಿ’ಗೆ ಚಿನ್ಮಯಿ ಎ. ಬೆಂಗಳೂರು ಆಯ್ಕೆ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ (ರಿ), ಧರ್ಮಸ್ಥಳ ವತಿಯಿಂದ ಈ ವರ್ಷದ ಯೋಗ ರತ್ನ ಪ್ರಶಸ್ತಿಗೆ ಕುಮಾರಿ. ಚಿನ್ಮಯಿ. ಎ, ಬೆಂಗಳೂರು ಇವರನ್ನು ಆಯ್ಕೆ ಮಾಡಲಾಗಿದೆ.

Oplus_131072

ಇವರು ಅಂತರಾಷ್ಟ್ರೀಯ ಯೋಗಾಸನ ವಿಜೇತೆಯಾಗಿದ್ದು ದೇಶ ವಿದೇಶಗಳಲ್ಲಿ ಯೋಗ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುತ್ತಾರೆ. ಜೂನ್-21 ರಂದು 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ, “ಪಯಣ” ಕಾರ್ ಮ್ಯೂಸಿಯಮ್ ಬೆಂಗಳೂರು-ಮೈಸೂರು ಎಕ್ಸ್‌ ಪ್ರೆಸ್ ಹೈವೆ, ಬ್ರಹ್ಮಪುರ, ಶ್ರೀರಂಗಪಟ್ಟಣ. ಇಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಅಧ್ಯಕ್ಷರು ಶಾಂತಿವನ ಟ್ರಸ್ಟ್ (ರಿ.) ಇವರ ಮಾರ್ಗದರ್ಶನದಲ್ಲಿ ನಡೆಯಲಿದ್ದು. ಗಣ್ಯರ ಉಪಸ್ಥಿತಿಯಲ್ಲಿ ಇವರಿಗೆ ಗೌರವ ಪುರಸ್ಕಾರ ನಡೆಯಲಿದೆ.

ಪುರಸ್ಕಾರದ ಪ್ರಮಾಣ ಪತ್ರದ ಜೊತೆಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು. ಪ್ರತಿ ವರ್ಷ ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸುವ ಕಾರ್ಯವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ನಿಂದ ನಡೆಸುತ್ತಾ ಬಂದಿದೆ ಎಂದು ಶ್ರೀ ಧ. ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕರಾದ ಡಾ. ಐ. ಶಶಿಕಾಂತ್ ಜೈನ್ ಅವರು ಪಕ್ರಟಣೆಯಲ್ಲಿ ತಿಳಿಸಿರುತ್ತಾರೆ.

Related posts

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ, ಸದಸ್ಯರಿಗೆ 15 ಶೇ. ಡಿವಿಡೆಂಟ್

Suddi Udaya

ಗುರುವಾಯನಕೆರೆ ಶ್ರೀ ಕೊಡಮಣಿತ್ತಾಯ ದೈವಸ್ಥಾನಅರಮನೆ ಬೆಟ್ಟ:ಸಿಂಹ ಸಂಕ್ರಮಣ ಹಾಗೂ ಶ್ರೀ ಕೊಡಮಣಿತ್ತಾಯ ದೈವದ ಸೋಣದ ಕೋಲ

Suddi Udaya

ದ್ವಿತೀಯ ಪಿಯುಸಿ ಫಲಿತಾಂಶ: ನಡ ಸರಕಾರೀ ಪದವಿಪೂರ್ವ ಕಾಲೇಜಿಗೆ88.41ಶೇಕಡಾ ಫಲಿತಾಂಶ

Suddi Udaya

ಮಡಂತ್ಯಾರು ರೋಟರಿ ಕ್ಲಬ್ ಅಧ್ಯಕ್ಷರಾಗಿ ನಿತ್ಯಾನಂದ ಬಿ. ಮಾಲಾಡಿ

Suddi Udaya

13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಆಲ್ವಿನ್ ರೊಡ್ರಿಗಸ್ ಪಾರೆಂಕಿ ಬಂಧನ

Suddi Udaya

ಮುಂಡಾಜೆ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

Suddi Udaya
error: Content is protected !!