ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಳದಂಗಡಿಯಲ್ಲಿ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 17 ಶಾಖೆ ಉದ್ಘಾಟನೆ ಸಜೀಪಮುನ್ನೂರು ಸಹಕಾರಿ ಸಂಘದಲ್ಲಿ ವಿವಿಧ ಸಾಲ ಸೌಲಭ್ಯ,ಠೇವಣಿ ಮೇಲಿನ ಆಕರ್ಷಕ ಬಡ್ಡಿ ದರಗಳು

ಅಳದಂಗಡಿ: ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ೧೭ನೇ ಶಾಖೆ ಅಳದಂಗಡಿಯ ಗುರುದೇವ ಸಂಕೀರ್ಣದಲ್ಲಿ ಜೂ.೧೫ ರಂದು ಉದ್ಘಾಟನೆಗೊಂಡಿದೆ.

17ನೇ ಶಾಖೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿ ಶುಭ ಕೋರಿದರು. ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು .ಭದ್ರತಾ ಕೋಶವನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಉದ್ಘಾಟಿಸಿ ಶುಭ ಕೋರಿದರು.

ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಅಳದಂಗಡಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ,ಅಳದಂಗಡಿ ಶ್ರೀ ಕ್ಲಿನಿಕ್‌ನ ವೈದ್ಯರಾದ ಡಾ. ಎನ್.ಎಂ. ತುಳಪುಳೆ, ಕಟ್ಟಡ ಮಾಲಕ ಸಂಜೀವ ಪೂಜಾರಿ ಗುರುದೇವ ಕೊಡಂಗೆ,ಪ್ರಗತಿಪರ ಕೃಷಿಕರಾದ ಗಂಗಾಧರ ಮಿತ್ತಮಾ‌ರ್, ಅಳದಂಗಡಿ ಕೃಷಿಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಸುಭಾಷ್ ಚಂದ್ರ ರೈ, ಅಳದಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು,ಸುರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧೀ‌ರ್ ಆ‌ರ್ ಸುವರ್ಣ, ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ಉಪಸ್ಥಿತರಿದ್ದರು.

ಆಡಳಿತ ಮಂಡಳಿಯ ಉಪಾಧ್ಯಕ್ಷ ವಿಠಲ ಬೆಳ್ಳಾಡ ಚೇಳೂರು, ಮುಖ್ಯಕಾರ್ಯನಿರ್ವಹಣಾಧಿಕಾರಿ ಮಮತಾ ಜಿ, ನಿರ್ದೇಶಕರಾದ ಸುಂದರ ಪೂಜಾರಿ ಬೀಡಿನಪಾಲು,ರಮೇಶ್ ಅನ್ನಪ್ಪಾಡಿ,ಗಿರೀಶ್ ಕುಮಾರ್ ಪೆರ್ವ,ಜಯಶಂಕರ್ ಕಾನ್ಸಾಲೆ,ಕೆ.ಸುಜಾತ ಎಮ್,ವಾಣಿ ವಸಂತ, ಅರುಣ್ ಕುಮಾರ್ ಎಮ್, ಆಶಿತ್ ಪೂಜಾರಿ,ಚಿದಾನಂದ ಎಂ ಕಡೇಶ್ವಾಲ್ಯ, ಅಳದಂಗಡಿ ಶಾಖಾ ವ್ಯವಸ್ಥಾಪಕಿ ಕು.ಅರ್ಪಿತಾ ಹಾಗೂ ವಿವಿಧ ಶಾಖೆಯ ವ್ಯವಸ್ಥಾಪಕರು, ಸಿಬ್ಬಂದಿಗಳು ಉಪಸ್ಥಿತರಿದ್ದು ಸಹಕರಿಸಿದರು.

Related posts

ಕಾಂಗ್ರೆಸ್ ಪಕ್ಷದಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮರ್ಪಕ ಜ್ಯಾರಿಗಾಗಿ ಬ್ಲಾಕ್, ಗ್ರಾಮ ಮಟ್ಟದಲ್ಲಿ ತರಬೇತಿ: ಇಂದಿರಾ ಸೇವಾ ಸೆಂಟರ್ ಗಳನ್ನು ತೆರೆದು ಫಲಾನುಭವಿಗಳಿಗೆ ಅರ್ಜಿ ನೊಂದಣಿ

Suddi Udaya

ಕೆ.ಎಸ್.ಆರ್.ಟಿ.ಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ : ಬಸ್ ಪ್ರಯಾಣ ದರ ಕಡಿತ

Suddi Udaya

ಸೋಮಂತಡ್ಕ – ದಿಡುಪೆ ರಸ್ತೆಯ ಉದ್ದಕ್ಕೂ ಬೃಹತ್ ಗಾತ್ರದ ಅಪಾಯಕಾರಿ ಮರಗಳನ್ನು ತೆರವುಗೊಳಿಸಿದ ಅರಣ್ಯಾಧಿಕಾರಿಗಳು: “ಸುದ್ದಿ ಉದಯ ಜನಧ್ವನಿ Effect”

Suddi Udaya

ಗೇರುಕಟ್ಟೆ ಬಾಲಕನ ಅಸಹಜ ಸಾವು: ವಿ.ಹಿಂ.ಪ ದಿಂದ ನಾಳ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ

Suddi Udaya

ಮಾ.10: ವೇಣೂರು 33ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್ ಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ಪ್ರಕಾಶ್ ಪ್ರಭು, ಕಾರ್ಯದರ್ಶಿಯಾಗಿ ಡಾ.ಎಂ.ಎಂ ದಯಾಕರ್ ಆಯ್ಕೆ

Suddi Udaya
error: Content is protected !!