23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಡ ಸರಕಾರಿ ಪ್ರೌಢಶಾಲೆ ಅಂತರರಾಷ್ಟ್ರೀಯ ಯೋಗ ದಿನ ಆಚರಣೆ

ನಡ : ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಯಾವುದೂ ಇಲ್ಲ. ಜೂ. 21 ರಂದು ವಿಶ್ವ ಯೋಗ ದಿನವನ್ನು ನಡ ಸರಕಾರಿ ಪ್ರೌಢ ಶಾಲೆಯಲ್ಲಿ ಆಚರಿಸಲಾಯಿತು.

ಸುಮಾರು 6000 ವರ್ಷಗಳ ಇತಿಹಾಸವಿರುವ ಯೋಗದ ಮಹತ್ವವನ್ನು ಜಗತ್ತಿಗೆ ಪರಿಚಯಿಸಿದವರು ಭಾರತೀಯರು. ದೇಹ ಮನಸ್ಸು ಮತ್ತು ಆಧ್ಯಾತ್ಮಿಕತೆಗಳನ್ನು ಕೂಡಿಸುವ ಏಕ ಮಾರ್ಗವೇ ಯೋಗ. ಯೋಗದ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯೋಗದ ಹಲವು ಆಸನಗಳನ್ನು ಮಾಡುವ ಮೂಲಕ ಮಕ್ಕಳಲ್ಲಿ ಯೋಗದ ಮಹತ್ವವನ್ನು ಪರಿಚಯಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕ ಮೋಹನ ಬಾಬು ಡಿ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಶಿಕ್ಷಕ ಸುರೇಶ್ ಶೆಟ್ಟಿ ನಿರೂಪಿಸಿ ಯೋಗದ ನಾನಾ ಆಸನಗಳನ್ನು ಪರಿಚಯಿಸುವ ಮೂಲಕ ಮಕ್ಕಳಿಗೆ ಸೂಕ್ತ ತರಬೇತಿ‌ ನೀಡಿದರು. ಶಿಕ್ಷಕರಾದ ಶಿವಪುತ್ರ ಸುಣಗಾರ, ಸೆಫಿಯಾ, ಜಯ ಜೆಸಿಂತಾ ಸ್ಟ್ರೆಲ್ಲಾ, ಸುಧಾ ಉಪಸ್ಥಿತರಿದ್ದರು.

Related posts

ಉಜಿರೆ ಖಲೀಫಾ ಜುಮಾ ಮಸೀದಿ ಹಾಗೂ ಅಲ್ ಬದ್ರಿಯಾ ಅರೇಬಿಕ್ ಮದರಸ ಕಮಿಟಿಯಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿ ದೇವರ ದರ್ಶನ ಪಡೆದ ದ.ಕ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ

Suddi Udaya

ತಾಲೂಕಿನ ವಿವಿಧ ರಸ್ತೆ ಅಭಿವೃದ್ಧಿಗೆ ರೂ.2.00 ಕೋಟಿ ಅನುದಾನ ಬಿಡುಗಡೆ: ಶಾಸಕ ಹರೀಶ್ ಪೂಂಜ

Suddi Udaya

ಹೊಸಂಗಡಿ ಪಂ. ಉಪಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುನೀಲ್ ಶೆಟ್ಟಿಯವರಿಂದ ನಾಮಪತ್ರ ಸಲ್ಲಿಕೆ

Suddi Udaya

ಗಂಡಿಬಾಗಿಲು: ಸಿಯೋನ್ ಆಶ್ರಮದಲ್ಲಿ ಓಣಂ ಹಬ್ಬ ಆಚರಣೆ

Suddi Udaya

ವಕೀಲರ ಸಂಘದ ಪದಾಧಿಕಾರಿಗಳಿಂದ ರಕ್ಷಿತ್ ಶಿವರಾಮ್ ಭೇಟಿ

Suddi Udaya
error: Content is protected !!