March 7, 2026
ಅಪರಾಧ ಸುದ್ದಿವರದಿ

ನೊಂದವರಿಗೆ ಸಹಾಯ ಮಾಡುತ್ತಿರುವುದಾಗಿ ಹೇಳಿ ರೂ.3.20 ಲಕ್ಷ ವಂಚನೆ ಆರೋಪ ಬೆಂಗಳೂರಿನ ಮಹಿಳೆ ವಿರುದ್ಧ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ; ಬೆಂಗಳೂರಿನ ಸಂಧ್ಯಾ ಪವಿತ್ರ ನಾಗರಾಜ್ ಎಂಬುವರು ನೊಂದವರಿಗೆ ಸಹಾಯ ಮಾಡುತ್ತಿರುವುದಾಗಿ ಹೇಳಿ ಪ್ರಕರಣವೊಂದನ್ನು ಬಗೆ ಹರಿಸುವುದಾಗಿ ಹೇಳಿ ಹಣ ಪಡೆದು ವಂಚನೆ ಮಾಡಿದ ಆರೋಪದಲ್ಲಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಡಂತ್ಯಾರ್‌ನ ನಿವಾಸಿ ಕೆ.ರಾಜೇಶ್ ಎಂಬುವರು ನೀಡಿದ ದೂರಿನ ಅನ್ವಯ ಈ ಪ್ರಕರಣ ದಾಖಲಾಗಿದೆ. ದೂರುದಾರ ರಾಜೇಶ್ ಅವರಿಗೆ ಸಂಧ್ಯಾ 2024ರಲ್ಲಿ ಫೇಸ್ಟುಕ್ ಮೂಲಕ ಪರಿಚಯವಾಗಿದ್ದಾಳೆ. ತಾನು ನೊಂದವರ ಹಾಗೂ ವಂಚನೆಗೊಳಗಾದವರಿಗೆ ನೆರವಾಗುತ್ತಿದ್ದೇನೆ. ಎಂದು ರಾಜೇಶ್ ಅವರಿಗೆ ನಂಬಿಸಿದ್ದಾಳೆ.

ಆಗ, ರಾಜೇಶ್ ಅವರು ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಬಗ್ಗೆ ಸಂಧ್ಯಾ ಪವಿತ್ರ ನಾಗರಾಜ್‌ಗೆ ತಿಳಿಸಿದ್ದಾರೆ. ಆಗ, ಸಂಧ್ಯಾ ಇದನ್ನು ಬಗೆಹರಿಸುತ್ತೇನೆ, ಆದರೆ, ಸ್ವಲ್ಪ ಖರ್ಚು ಇದೆ ಎಂದಿದ್ದಾಳೆ. ನಂತರ, ರಾಜೇಶ್ ಅವರಿಂದ ಸಂಧ್ಯಾ ಹಂತ ಹಂತವಾಗಿ 3.20 ಲಕ್ಷ ರೂ. ಪಡೆದಿದ್ದಾಳೆ. ಹಣ ನೀಡಿದ ನಂತರವೂ ಸಮಸ್ಯೆ ಬಗೆಹರಿಯದ ಕಾರಣ ರಾಜೇಶ್ ಅವರು ಸಂಧ್ಯಾಗೆ ಪ್ರಶ್ನಿಸಿದ್ದಾರೆ.ಆಗ, ಸಂಧ್ಯಾ ಇನ್ನೂ ಹೆಚ್ಚಿನ ಹಣ ನೀಡುವಂತೆ ಹೇಳಿದ್ದಾರೆ .ಸಂಧ್ಯಾ ಮಾತು ಕೇಳಿ ಸಂಶಯಗೊಂಡ ರಾಜೇಶ್ ಅವರು ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಿಎನ್‌ಎಸ್‌ ಕಾಯ್ದೆ 318(4) ಮತ್ತು 351(2) ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ಪಟ್ರಮೆ ಪಟ್ಟೂರಿನ ನೆರೆಕರೆಯ ಇಬ್ಬರು ಯುವತಿಯರು ಒಂದೇ ದಿನ ಮೃತ್ಯು: ಹೊಟ್ಟೆನೋವಿನಿಂದ ಅಸ್ವಸ್ಥಗೊಂಡಿದ್ದ ರಕ್ಷಿತಾ ಹಾಗೂ ಲಾವಣ್ಯ

Suddi Udaya

ಉಜಿರೆ: ಎಸ್ ಡಿ ಯಂ ಪಾಲಿಟೆಕ್ನಿಕ್ – ರಾಷ್ಟೀಯ ಯುವ ದಿನದ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ

Suddi Udaya

ಸೌತಡ್ಕ: ಶ್ರೀ ಮಹಾಗಣಪತಿ ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿನ ಹಣ ಎಣಿಕೆ ರಾಷ್ಟ್ರೀಕೃತ ಬ್ಯಾಂಕ್‌ ಸಿಬ್ಬಂದಿಗಳಿಂದಲೇ ಗೋಲ್‌ಮಾಲ್

Suddi Udaya

ನ್ಯಾಯತರ್ಪು ಜಾರಿಗೆಬೈಲು ನಿವಾಸಿ ಕೆ.ಎಂ. ಅಬೂಬಕ್ಕರ್ ರವರ ಬ್ಯಾಂಕ್ ಖಾತೆಯಿಂದ ಅಪರಿಚಿತ ಇಬ್ಬರು ವ್ಯಕ್ತಿಗಳಿಂದ ಹಣ ಕಳವು

Suddi Udaya

ಮಚ್ಚಿನ: ಪಾಲಡ್ಕ- ಪಲ್ಲೆಕೋಡಿ ರಸ್ತೆ ಕೆಸರುಮಯ; ಓಡಾಟ ಶೋಚನೀಯ

Suddi Udaya

ಧರ್ಮಸ್ಥಳಕ್ಕೆ ಭೇಟಿ ನೀಡಿದ ರಶ್ಯಾದ ಪ್ರವಾಸಿಗರು

Suddi Udaya
error: Content is protected !!