March 7, 2026
Uncategorized

ದೇಯಿ ಬೈದ್ಯೆತಿ ಕೋಟಿ-ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿಯ ಸಭಾಂಗಣದಲ್ಲಿ ಜರಗಿದ ಸಭೆಯಲ್ಲಿ ಸರ್ವಾನುಮತದಿಂದ ಆರಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್ ನ ನಿಕಟ ಪೂರ್ವ ಅಧ್ಯಕ್ಷ ರಾದ ರಾಜಶೇಖರ ಕೋಟ್ಯಾನ್ ವಹಿಸಿದ್ದರು. ಸಭೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಭಿವೃದ್ಧಿಗಾಗಿ ಖರೀದಿಸಿದ ಜಾಗದಲ್ಲಿ ಬಿಲ್ಲವ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಂಡು ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ನಿರ್ಣಯಿಸಲಾಯಿತು.

ಸಭೆಯಲ್ಲಿ ಟ್ರಸ್ಟಿಗಳಾದ ಚಿತ್ತರಂಜನ್ ಕಂಕನಾಡಿ, ಪೀತಾಂಬರ ಹೆರಾಜೆ, ಜಯಂತ್ ನಡುಬೈಲ್,ರವಿಪೂಜಾರಿ ಚಿಲಿಂಬಿ, ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್, ಶೈಲೇಂದ್ರ ವೈ ಸುವರ್ಣ, ಕ್ಷೇತ್ರಾಡಳಿತ ಸಮಿತಿಯ ಪ್ರಮುಖರಾದ ಡಾ. ರಾಜಾರಾಮ್,ಪ್ರಮಲ್ ಕುಮಾರ್, ಜಯವಿಕ್ರಂ, ರಾಜೇಂದ್ರ ಚಿಲಿಂಬಿ, ಹರೀಶ್ ಕೆ ಪೂಜಾರಿ, ಸಂತೋಷ್ ಕುಮಾರ್, ಜಯರಾಮ ಬಂಗೇರ, ಉಮೇಶ್ ಬಂಗೇರ, ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.

Related posts

ಅ. 20 ತುಳು ಕೂಟ ಗೋವಾದಲ್ಲಿ ಉದ್ಘಾಟನಾ ಸಮಾರಂಭ

Suddi Udaya

ಬೆಳ್ತಂಗಡಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಗಣರಾಜ್ಯೋತ್ಸವ

Suddi Udaya

ಧರ್ಮಸ್ಥಳ ಬೊಳಿಯಾರ್‌ನ 15ನೇ ಸ್ಥಳದಲ್ಲಿ ಪತ್ತೆಯಾಗದ ಶವದ ಅವಶೇಷಗಳು

Suddi Udaya

ಹತ್ಯಡ್ಕ ನಿವಾಸಿ ಯಮುನಾ ನಿಧನ

Suddi Udaya

ಕೊಕ್ಕಡ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆ ಹಿನ್ನೆಲೆ ಕಾರ್ಯಕರ್ತರ ಸಭೆ

Suddi Udaya

ಬಾರ್ಯ : ಸರಳೀಕಟ್ಟೆಯಲ್ಲಿ ಹಾರಿ ಹೋದ ಹಲವು ಮನೆಯ ಮೇಲ್ಛಾವಣಿ

Suddi Udaya
error: Content is protected !!