March 7, 2026
ಗ್ರಾಮಾಂತರ ಸುದ್ದಿ

ಸ್ಟಾರ್ ಲೈನ್ ಶಾಲೆಯಲ್ಲಿ ಇಕೋ ಕ್ಲಬ್ ಉದ್ಘಾಟನೆ

ನಡ :ಸ್ಟಾರ್ ಲೈನ್ ಶಾಲೆಯಲ್ಲಿ ಇಕೋ ಕ್ಲಬ್ ಉದ್ಘಾಟನೆ :ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ಮಂಜೊಟ್ಟಿ ಇಲ್ಲಿ ಶೈಕ್ಷಣಿಕ ಇಲಾಖೆಯ ಮಾರ್ಗದರ್ಶನದಂತೆ ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಇಕೋ ಕ್ಲಬ್ ಉದ್ಘಾಟನೆ ಮಾಡಲಾಯಿತು.

ಸಂಘದ ಅಧ್ಯಕ್ಷರಾದ ವಿದ್ಯಾರ್ಥಿ ಮಹಮ್ಮದ್ ಝಿಶಾನ್ ಇವರಿಗೆ ಗಿಡವನ್ನು ನೀಡುವುದರ ಮೂಲಕ ಕ್ಲಬ್ ಉದ್ಘಾಟಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಹಾಗೂ ಕೃಷಿ ಅಭಿವೃದ್ಧಿಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಪ್ರಗತಿಪರ ಕೃಷಿಕರೂ ಆಗಿರುವ ಶ್ರೀ ಯುತ ಪ್ರಭಾಕರ ಮಯ್ಯ ಮಕ್ಕಳು ಬಾಲ್ಯದಲ್ಲಿ ಪರಿಸರದ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕು. ಜೊತೆಗೆ ಪರಿಸರವನ್ನು ಪ್ರೀತಿಸಬೇಕು ಎಂದರು. ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಆಡಳಿತ ಟ್ರಸ್ಟಿನ ಸಂಚಾಲಕರಾದ ಶ್ರೀಯುತ ಜನಾಬ್ ಸಯ್ಯದ್ ಹಬೀಬ್ ಸಾಹೇಬ್, ಕಾರ್ಯದರ್ಶಿಯಾದ ಶ್ರೀಯುತ ಸಯ್ಯದ್ ಮಹಮ್ಮದ್ ಅಯ್ಯುಬ್, ಕೋಶಾಧಿಕಾರಿಯಾದ ಶ್ರೀಯುತ ಸಯ್ಯದ್ ಮಹಮ್ಮದ್ ಇರ್ಫಾನ್, ಶಾಲಾ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಜಾಕಿನ್ ಬಿನ್ ಉಪಸ್ಥಿತರಿದ್ದರು. ಅತಿಥಿಗಳು ಸಂಘದ ಸದಸ್ಯರಿಗೆ ಟಿ ಶರ್ಟ್ ಮತ್ತು ಕ್ಯಾಪ್ ವಿತರಿಸಿದರು.

Related posts

ಆದಿವಾಸಿ ಸಮುದಾಯಗಳಿಗೆ ರಸ್ತೆ , ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ರಕ್ಷಿತ್ ಶಿವರಾಂ ರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಮನವಿ

Suddi Udaya

ಗುಂಡೂರಿ ಸ.ಕಿ.ಪ್ರಾ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಇಂದಬೆಟ್ಟು: ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೆ ಹರಿದ ಮಳೆ ನೀರು ಹಾಗೂ ರಸ್ತೆಯುದ್ದಕ್ಕೂ ಬಾಗಿ ನಿಂತ ಅಪಾಯಕಾರಿ ಮರಗಳು

Suddi Udaya

ಅಳದಂಗಡಿ: ಪ್ರಧಾನಿ ನರೇಂದ್ರ ಮೋದಿಯವರಿಂದ ಕಾರ್ಯಕರ್ತರ ಜೊತೆ ಸಂವಾದ

Suddi Udaya

ಗೋಕರ್ಣದ ಅಶೋಕೆಯಲ್ಲಿ ಚಾತುರ್ಮಾಸ್ಯ ವೃತಾಚರಣೆಯಲ್ಲಿರುವ ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಶಾಸಕ ಹರೀಶ್ ಪೂಂಜ

Suddi Udaya

ಸೂಳಬೆಟ್ಟು ಹಾಲು ಉತ್ಪಾದಕ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya
error: Content is protected !!