37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರತಿಭಟನೆ

ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ ವಿರೋಧಿಸಿ ಕಡಿರುದ್ಯಾವರ ಗ್ರಾ.ಪಂ. ನಲ್ಲಿ ಪ್ರತಿಭಟನೆ

ಕಡಿರುದ್ಯಾವರ : ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ ಖಂಡಿಸಿ ಕಡಿರುದ್ಯಾವರ ಬಿಜೆಪಿ ಘಟಕದಿಂದ ಕಡಿರುದ್ಯಾವರ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಜೂ.23ರಂದು ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸಭೆಯಲ್ಲಿ ಸೂರಜ್ ವಳಂಬ್ರ ಪ್ರಾಸ್ತವಿಕವಾಗಿ ಮಾತನಾಡಿದರು. ಅಶೋಕ್ ಕುಮಾರ್ ರವರು ರಾಜ್ಯ ಸರಕಾರದ 9/11 ನಕ್ಷೆಗೆ ಮೂಡದಿಂದ ಅನುಮತಿ ಪಡೆಯ ಆದೇಶ ಮಾಡಿದ್ದು ಅದರಿಂದ ಜನರಿಗಾಗುವ ತೊಂದರೆ ಬಗ್ಗೆ, ಕಟ್ಟಡ ಸಂಖ್ಯೆ ಇದ್ದರು ವಿದ್ಯುತ್ ಸಂಪರ್ಕ ಪಡೆಯಲು ವಾಸಯೋಗ್ಯ ಪ್ರಮಾಣ ಪತ್ರದ ಆದೇಶದ ಬಗ್ಗೆ, ನೋಂದಾವಣೆ ಶುಲ್ಕವನ್ನು. 2% ದಿಂದ 10% ಮಾಡಿರುವ ಬಗ್ಗೆ ಹಾಗೂ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ಬಗ್ಗೆ ಮಾತಾಡಿ ಆಕ್ರೋಶವನ್ನು ವ್ಯಕ್ತಪಡಿಸಿ ತಕ್ಷಣ ಜನವಿರೋಧಿ ಆದೇಶಗಳನ್ನು ವಾಪಾಸ್ ಪಡೆಯುವಂತೆ ಹೇಳಿದರು. ತಪ್ಪಿದರೆ ಮುಂದೆ ದೊಡ್ಡ ಮಟ್ಟದಲ್ಲಿ ಹೋರಾಟವನ್ನು ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದರು.

ಪ್ರತಿಭಟನೆಯಲ್ಲಿ ಪಂಚಾಯತ್ ಅಧ್ಯಕ್ಷೆ ರತ್ನಾವತಿ, ಉಪಾಧ್ಯಕ್ಷೆ ಸಾವಿತ್ರಿ , ಪಂಚಾಯತ್ ಸದಸ್ಯರು ರಾಜೇಶ್, ಹಿರಿಯರಾದ ಪ್ರಭಾಕರ ಶೆಣೈ, ಪ್ರಶಾಂತ್ ಅಂತರ, ರೇಣುಕಾ ರಮೇಶ್, ಹೇಮಾವತಿ, ರಾಮಚಂದ್ರ ಜನಾರ್ದನ ಕಾನರ್ಪ, ಸಿ ಎ ಬ್ಯಾಂಕ್ ಉಪಾಧ್ಯಕ್ಷ ಆನಂದ ಗೌಡ ಬರಮೇಲು, ಪ್ರಮುಖ ಕಾರ್ಯಕರ್ತರು ಸಾರ್ವಜನಿಕರು ಭಾಗವಹಿಸಿದರು.

Related posts

ಚಾರ್ಮಾಡಿ ಘಾಟ್ ನಲ್ಲಿ ರಸ್ತೆಗೆ ಬಿದ್ದ ಮರ

Suddi Udaya

ಸಿಯೋನ್ ಆಶ್ರಮ ಟ್ರಸ್ಟ್ ವತಿಯಿಂದ ಮಹಾಶಿವರಾತ್ರಿ ಯಾತ್ರಿಕರಿಗೆ ಉಚಿತ ಮಜ್ಜಿಗೆ ವಿತರಣೆ

Suddi Udaya

ಮಂಗಳೂರು, ಜೆಡಿಎಸ್ ಮಹಿಳಾ ಘಟಕದ ಮಾಜಿ ಜಿಲ್ಲಾಧ್ಯಕ್ಷೆಯಾಗಿದ್ದ ಅಳದಂಗಡಿಯ ಸುಮತಿ ಹೆಗ್ಡೆ ಎಸ್.ಡಿ.ಪಿ.ಐ ಗೆ ಸೇರ್ಪಡೆ

Suddi Udaya

ಸೋಣಂದೂರು ಕಜೆ ನಿವಾಸಿ ಮುಂಡಪ್ಪ ಮೂಲ್ಯ ನಿಧನ

Suddi Udaya

ವಲಯ ಮಟ್ಟದ ಪ್ರತಿಭಾ ಕಾರಂಜಿ : ಬೆದ್ರಬೆಟ್ಟು ಮರಿಯಾಂಬಿಕಾ ಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Suddi Udaya

ಕನ್ಯಾಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕ ಸಭೆ: ವಾಣಿ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡದ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ವಿತರಣೆ

Suddi Udaya
error: Content is protected !!