March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವರ ಮತ್ತು ಪರಿವಾರ ದೈವಗಳ ಆಡಳಿತ ಸೇವಾ ಟ್ರಸ್ಟ್ ನ ದ್ವಿತೀಯ ಸಾಮಾನ್ಯ ಸಭೆ

ಬಾರ್ಯ: ಶ್ರೀ ಮಹಾವಿಷ್ಣುಮೂರ್ತಿ ದೇವರ ಮತ್ತು ಪರಿವಾರ ದೈವಗಳ ಆಡಳಿತ ಸೇವಾ ಟ್ರಸ್ಟ್ ನ ದ್ವಿತೀಯ ಸಾಮಾನ್ಯ ಸಭೆ ಸೇವಾ ಟ್ರಸ್ಟಿನ ಅಧ್ಯಕ್ಷ ಭಾಸ್ಕರ ಬಾರ್ಯ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಬಾರ್ಯದಲ್ಲಿ ಜರಗಿತು.

ಇತ್ತೀಚೆಗೆ ಶ್ರೀ ಕ್ಷೇತ್ರದಲ್ಲಿ ಪ್ರಥಮ ಬಾರಿ ಜರಗಿದ ಶ್ರೀ ಮಹಾವಿಷ್ಣುಯಾಗದ ಫಲ ಶ್ರುತಿಯ ಬಗ್ಗೆ, ದೇವಾಲಯ ಪರಿಸರದ ಸ್ವಚ್ಛತೆ ಮತ್ತು ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚಿಸಲಾಯಿತು. ಟ್ರಸ್ಟಿನ ಕಾರ್ಯದರ್ಶಿ ಪ್ರಶಾಂತ ಪೈ ವರದಿ ಮತ್ತು ಲೆಕ್ಕಪತ್ರ ಮಂಡನೆ ಮಾಡಿದರು. ಸಭೆಯಲ್ಲಿ ಉಪಾಧ್ಯಕ್ಷ ನಾರಾಯಣಗೌಡ, ಕೋಶಾಧಿಕಾರಿ ಸೇಸಪ್ಪ ಸಾಲಿಯನ್, ಅರ್ಚಕ ಗುರುಪ್ರಸಾದ್ ನೂರಿತ್ತಾಯ ಮತ್ತು ಸದಸ್ಯರಾದ ರಾಜೇಶ್ ರಾವ್ ಗುರುಪ್ರಸಾದ್, ವಿದ್ಯಾ ಪ್ರಭಾಕರ, ವಿಜಯಲಕ್ಷ್ಮಿ ರೈ, ನವೀನ, ಪ್ರಶಾಂತಕುಮಾ‌ರ್, ಶಿವರಾಮ ನಾಯ್ಕ, ಉಮೇಶ್. ಜಿ, ವಿಶ್ವನಾಥ ಗೌಡ, ಚೇತನ್ ಅದಮ್ಮ, ಪ್ರವೀಣ ಬೇಂಗಿಲ, ಬಾಲಕೃಷ್ಣ ಶೆಟ್ಟಿ, ಸುದರ್ಶನ, ಸುದೇಶ್, ಮನೋಹರ ಶೆಟ್ಟಿ, ಮೋನಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು. ಶಿವರಾಮ್ ನಾಯ್ಕ ಪ್ರಾರ್ಥಿಸಿ, ಶೇಷಪ್ಪ ಸಾಲಿಯಾನ್ ವಂದಿಸಿದರು.

Related posts

ಕೆಸಿಎಫ್ ಶಾರ್ಜಾ ಝೋನ್ 2024-2026 ನವ ಸಾರಥ್ಯ ಅಧ್ಯಕ್ಷರಾಗಿ ರಫೀಕ್ ತೆಕ್ಕಾರು

Suddi Udaya

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನ: ಶಾಸ್ತಾರ ದೇವರ ಗರ್ಭ ಗುಡಿಯ ಬ್ರಹ್ಮಕಲಶೋತ್ಸವ ಸಮಿತಿ ರಚನೆ

Suddi Udaya

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ, ಪ್ರಸಿದ್ದ ಉದ್ಯಮಿ ಮೋಹನ್ ಕುಮಾರ್ ಅವರನ್ನು ಭೇಟಿಯಾದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಮೋಹಿತ್

Suddi Udaya

ಧರ್ಮಸ್ಥಳದಿಂದ ನಾರಾವಿಗೆ ಕೆಎಸ್ಸಾರ್ಟಿಸಿ ಬಸ್ ಮಂಜೂರು – ಶಾಸಕರ ಶಿಫಾರಸ್ಸಿನಂತೆ ಬಸ್ಸು ಮಂಜೂರಾಗಿದ್ದರೆ, ಅವರು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ- ಬಸ್ಸು ಮಂಜೂರು ಮಾಡಿಸಿದ್ದು, ನಾನೇ ಎಂದು ನಾನು ಪ್ರಮಾಣ ಮಾಡುತ್ತೇನೆ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ ಸವಾಲು

Suddi Udaya

ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನ ಸಮಾಜಮುಖಿ ಕಾರ್ಯಕ್ಕೆ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್-2023

Suddi Udaya

ಬಿಗ್‌ಬಾಸ್ ಕನ್ನಡ ಸೀಸನ್ 11 ರ ಟ್ರೋಫಿ ಮುಡಿಗೇರಿಸಿಕೊಂಡ ಹಾವೇರಿಯ ಹಳ್ಳಿ ಹೈದ ಹನುಮಂತು

Suddi Udaya
error: Content is protected !!