March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂತ್ರಿಮಂಡಲದ ಉದ್ಘಾಟನಾ ಸಮಾರಂಭ

ಬೆಳ್ತಂಗಡಿ: ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನ ವಿದ್ಯಾರ್ಥಿ ಮಂತ್ರಿಮಂಡಲದ ಉದ್ಘಾಟನಾ ಸಮಾರಂಭ ಇಂದು (ಜೂನ್ 25) ನಡೆಯಿತು.

ಕಾರ್ಯಕ್ರಮವನ್ನು ಎಸ್ ಡಿ ಎಂ ಪಿಯು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ದಿವ್ಯ ಕುಮಾರಿ ಕೆ ಉದ್ಘಾಟಿಸಿ, ಆಯ್ಕೆಯಾದ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿ ನಾಯಕತ್ವದ ಮಹತ್ವ ಹಾಗೂ ಜವಾಬ್ದಾರಿಗಳ ಬಗ್ಗೆ ನುಡಿಗಳನ್ನಾಡಿದರು ಮತ್ತು ನೂತನ ಮಂತ್ರಿಗಳಿಗೆ ಶುಭ ಹಾರೈಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹೇಮಲತಾ ಎಂ.ಆರ್. ಅವರು ಮಂತ್ರಿಗಳಿಗೆ ಬ್ಯಾಡ್ಜ್ ಧರಿಸಿ ಗೌರವಿಸಿದರು.

ಶಾಲಾ ನಾಯಕಿ ಪೂರ್ವಿ ಮತ್ತು ಉಪನಾಯಕ ಶ್ರೀ ವಿನೀತ್ ತಮ್ಮ ಧನ್ಯವಾದಗಳನ್ನು ವ್ಯಕ್ತಪಡಿಸಿ, ನಡವಳಿಕೆಯ ಮೂಲಕ ನೇತೃತ್ವದ ನೈಜ ಅರ್ಥವನ್ನು ತೋರಿಸುವ ಭರವಸೆ ನೀಡಿದರು.

ಅನಘ ಸ್ವಾಗತಿಸಿದರು, ರಕ್ಷಣ್ ಅತಿಥಿ ಪರಿಚಯ ನೀಡಿದರು, ಸಂಜನಾ ವಂದನಾರ್ಪಣೆ ಸಲ್ಲಿಸಿದರು ಹಾಗೂ ನಿಧಿಶಾ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿದರು.

Related posts

ಕಾಂಗ್ರೆಸ್ ಅಭ್ಯರ್ಥಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರಿಂದ ರಕ್ತದಾನ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವದ ಸಂಭ್ರಮ

Suddi Udaya

ಚಾಂದ್ರಮಾನ ಯುಗಾದಿಯಂದು ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವದ ವರ್ಷಾವಧಿ ನೇಮೋತ್ಸವ

Suddi Udaya

ಮಡಂತ್ಯಾರು ಬಸವನಗುಡಿ ಒಕ್ಕೂಟದ ವತಿಯಿಂದ ಬಸವೇಶ್ವರ ದೇವರಿಗೆ ಸಿಯಾಳಭಿಷೇಕ

Suddi Udaya

ಗುರುವಾಯನಕೆರೆಯಲ್ಲಿ ಸಂಭ್ರಮದ ಬಂಟೋತ್ಸವ

Suddi Udaya

ಕಳೆಂಜ ಗ್ರಾ.ಪಂ. ಅರಣ್ಯಾಧಿಕಾರಿಗಳ ಸೂಚನೆ ಮೇರೆಗೆ ಸೇತುವೆಗೆ ಅಡ್ಡಾವಾಗಿ ಸಿಕ್ಕಾಕಿಗೊಂಡಿದ್ದ ಮರ ತೆರವು

Suddi Udaya
error: Content is protected !!