March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಟಿಪ್ಪರ್ ಬಾಡಿಗೆ ವಿಚಾರದಲ್ಲಿ ಕೊಲೆ ಯತ್ನ ಆರೋಪ : ಇಬ್ಬರ ವಿರುದ್ಧ ಪ್ರತಿದೂರು ದಾಖಲು

ಬೆಳ್ತಂಗಡಿ : ಟಿಪ್ಪರ್ ವಾಹನದ ಬಾಡಿಗೆ ಹಣ ಕೇಳಲು ಹೋದವನ ಮೇಲೆ ಸೋಡಾ ಬಾಟಲ್ ಎಸೆದು ಕೊಲೆಗೆ ಯತ್ನಸಿದ ಪ್ರಕರಣದ ಆರೋಪದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂ.27 ರಂದು ಹಲ್ಲೆಗೊಳಗಾದ ಮಹಮ್ಮದ್ ತೌಸಿಫ್ ಸ್ನೇಹಿತ ನೀಡಿದ ದೂರಿನ ಮೇರೆಗೆ ರಹೀಂ ಮತ್ತು ಮಹಮ್ಮದ್ ಫೈಯಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣ ಸಂಬಂಧ ಮುನೀರ್ ಮತ್ತು ತೌಸಿಫ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂ.28 ರಂದು ರಹೀಂ ನೀಡಿದ ದೂರಿನ ಮೇರೆಗೆ BNS 2023 (U/s-115(2),118(1),351(2), r/w 3(5)) ಅಡಿಯಲ್ಲಿ ಪ್ರಕರಣ ದಾಖಲಾಗಿದೆ‌.

Oplus_131072

*ಪ್ರಕರಣ: ರಹೀಂ ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ಜೂ. 27 ರಂದು ರಹೀಂ ಮತ್ತು ಮಹಮ್ಮದ್ ಫಯಾಜ್ ರವರು ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬೀಟಿಗೆ ಎಂಬಲ್ಲಿ ಮನ್ಸೂರ್ ಎಂಬವರ ಅಂಗಡಿ ಬಳಿ ನಿಂತುಕೊಂಡಿದ್ದಾಗ ಸಮಯ ಮಧ್ಯಾಹ್ನ 3 ಗಂಟೆಗೆ ರಿಡ್ಜ್ ಕಾರಿನಲ್ಲಿ ಮುನೀರ್ ಮತ್ತು ತೌಸಿಫ್ ರವರು ಬಂದು ಕಾರಿನಿಂದ ಇಳಿದು ಹಣದ ವ್ಯವಹಾರ ವಿಚಾರವಾಗಿ ಹಣವನ್ನು ಯಾವಾಗ ಕೊಡುತ್ತಿಯ ಎಂದು ಹೇಳಿ ತೌಸಿಫ್ ಎಂಬಾತನು ರಹೀಂಗೆ ಕೈಯಿಂದ ಬೆನ್ನಿಗೆ, ಮುಖಕ್ಕೆ ಹೊಡೆದಿರುತ್ತಾನೆ, ಆ ಸಮಯ ಮಹಮ್ಮದ್ ಫಯಾಜ್ ನು ತೌಸಿಫ್ ನನ್ನು ಹಿಡಿದುಕೊಂಡು ಹೊಡೆಯಬೇಡ ಎಂದು ಹೇಳುತ್ತಿರುವ ಸಮಯ ಮುನೀರ್ ಎಂಬಾತನು ರಾಡ್ ನಿಂದ ರಹೀಂ ತಲೆಯ ಹಣೆಗೆ ಹೊಡೆದು ರಕ್ತ ಗಾಯವಾಗಿರುತ್ತದೆ. ನಂತರ ಮುನೀರ್ ನು ಕೈಯಿಂದ ರಹೀಂ ಬೆನ್ನಿಗೆ ಗುದ್ದಿ ನೋವಾಗಿದ್ದು, ನಂತರ ಮಹಮ್ಮದ್ ಫಯಾಜ್ ನಿಗೆ ಮುನೀರ್ ಮತ್ತು ತೌಸಿಫ್ ಕೈಯಿಂದ ಬೆನ್ನಿಗೆ ಹೊಡೆದು ನೋವುಂಟು ಮಾಡಿರುತ್ತಾರೆ. ನಂತರ ಅಲ್ಲಿ ಜನರು ಸೇರಿದ್ದು ಅಲ್ಲಿಂದ ರಹೀಂ ಮತ್ತು ಫಯಾಜ್ ರವರು ಹೋಗುವಾಗ ಮುನೀರ್ ಮತ್ತು ತೌಸಿಫ್ ನು ರಹೀಂ ಉದ್ದೇಶಿಸಿ “ನಿನಗೆ ಒಂದು ಗತಿ ಕಾಣಿಸುತ್ತೇನೆ” ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Related posts

ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ನಿಂದ ಅತ್ಯುತ್ತಮ ಗ್ರಾಮ ಪಂಚಾಯತ್ ಆಗಿ ಆಯ್ಕೆಯಾದ ಉಜಿರೆ ಗ್ರಾಮ ಪಂಚಾಯತ್ ಗೆ ಡಾ|| ಚಿಕ್ಕ ಕೋಮರಿ ಗೌಡ ದತ್ತಿ ಪ್ರಶಸ್ತಿ ಪ್ರದಾನ

Suddi Udaya

ಯೂಟ್ಯೂಬರ್ ಸಮೀರ್ ಎಮ್.ಡಿ ಎರಡು ಮನೆಗೆ ಪೊಲೀಸ್ ಎಂಟ್ರಿ

Suddi Udaya

ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ

Suddi Udaya

ತುಮಕೂರಿನಲ್ಲಿ ಮೂವರಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ: ರೂ. 50 ಲಕ್ಷ ನಗದಿನೊಂದಿಗೆ ಕಾರಿನಲ್ಲಿ ಹೋಗಿದ್ದ ಮೂವರು: ನಕಲಿ ಚಿನ್ನದ ಆಸೆಗೆ ಮೂವರ ಬಲಿಯಾಯಿತೆ ಎಂಬ ಶಂಕೆ: ಸಮಗ್ರ ತನಿಖೆ ಬಳಿಕವಷ್ಟೇ ದೊರೆಯಲಿದೆ ಸ್ವಷ್ಟ ಮಾಹಿತಿ

Suddi Udaya

ಬಂದಾರು: ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಸೇವಾ ಟ್ರಸ್ಟ್ ಮತ್ತು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಪೆಲತ್ತಿಮಾರು ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ, ಭಜನೆ ಹಾಗೂ ವಿವಿಧ ಆಟೋಟ ಸ್ಪರ್ಧೆ

Suddi Udaya

ಬೆಳಾಲು ಶ್ರೀ ಧ.ಮಂ.ಅ. ಪ್ರೌಢ ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ

Suddi Udaya
error: Content is protected !!