September 6, 2026
Uncategorized

ಮಾದಕ ವ್ಯಸನದ ಬಗ್ಗೆ ಜನಜಾಗೃತಿ ಮೂಡಿಸುವ ಮಹತ್ವದ ಉದ್ದೇಶ- ಉಜಿರೆಯಲ್ಲಿ ಮೊದಲ ಬಾರಿಗೆಯಶಸ್ವಿಯಾಗಿ ನಡೆದ ರೈನಥಾನ್

ಉಜಿರೆ: ಮಾದಕ ವ್ಯಸನದ ಬಗ್ಗೆ ಜನಜಾಗೃತಿ ಮೂಡಿಸುವ ಮಹತ್ವದ ಸದುದ್ದೇಶದಿಂದ ಉಜಿರೆಯಲ್ಲಿ ಮೊದಲ ಬಾರಿಗೆ ಜೂ.29ರಂದು
ಹಮ್ಮಿಕೊಂಡಿದ್ದ ರೈನಥಾನ್ ಯಶಸ್ವಿಯಾಗಿ ಜರುಗಿತು .
ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಸ್ಪರ್ಧಾಳುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಸುಮಾರು 5 ಕಿ.ಮೀ ರೈನಥಾನ್ ನಡೆಸಿ ಜನಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು.
ರೈನಥಾನ್ ಸ್ಪರ್ಧೆಯು ವ್ಯಾಯಾಮ್ ಫಿಟೈಸ್ & ಕ್ರಾಸ್ ಫಿಟ್, ಉಜಿರೆ ಇದರ ನೇತೃತ್ವದಲ್ಲಿ ಕಾಶಿ ಪ್ಯಾಲೇಸ್, ದಿ ಓಶಿಯನ್ ಪರ್ಲ್, ಉಜಿರೆ ರೋಟರಿ ಕ್ಲಬ್ ಬೆಳ್ತಂಗಡಿ ರೋಟರಿ ಇಂದಿರಾನಗರ ಬೆಂಗಳೂರು ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ (ರಿ.) ರಾಜಾರಾಂ ಏಜೆನ್ಸಿಸ್, ಬೆಳ್ತಂಗಡಿ ಎಸ್.ಡಿ.ಎಂ.ಇ ಸೊಸೈಟಿ, ಉಜಿರೆ ಎಸ್.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್, ಉಜಿರೆ
ಸಂಧ್ಯಾ ಪ್ರೆಶ್, ಉಜಿರೆ, ಎಂ.ಡಬ್ಲ್ಯು.ಬಿ. ಗ್ರೂಪ್ ಇಂಡಿಯನ್ ಡೆಂಟಲ್ ಅಸೋಸಿಯೇಷನ್, ಪುತ್ತೂರು ಬೆಳ್ತಂಗಡಿ ತಾಲೂಕು ಪ್ರೆಸ್ ಕ್ಲಬ್ (ರಿ.) ಸಿಇಎನ್ ಪೊಲೀಸ್ ಠಾಣೆ, ಮಂಗಳೂರು, ದ.ಕ. ಇವರ ಸಹಯೋಗದಲ್ಲಿ ನಡೆಯಿತು.

ರೈನಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿಎಲ್ ಧರ್ಮ ಅವರು,
ಮಾದಕ ವಸ್ತು ಬಳಸುವ, ಬಳಸಲು ಪ್ರೇರೇಪಿಸುವ,ಸಹಕರಿಸುವ ಕೆಲಸ ಮನುಕುಲಕ್ಕೆ ವಿರುದ್ಧ ವಾದುದು,ಯುವಜನತೆ ದೇಶದ ಆಸ್ತಿಯಾಗಿದ್ದು ಮಾದಕ ಚಟಕ್ಕೆ ಬಲಿಯಾಗಬಾರದು ಎಂದು ಕರೆ ನೀಡಿದರು.
ಡಿಎಸ್ಪಿ ಮಂಜುನಾಥ್ ಆರ್.ಜೆ ಅವರು ಪ್ರಮಾಣ ವಚನ ಬೋಧಿಸಿ ಕಾಯ೯ಕ್ರಮಕ್ಕೆ ಶುಭ ಹಾರೈಸಿದರು.

ಎಂ ಎಲ್ ಸಿ ಪ್ರತಾಪ ಸಿಂಹ ನಾಯಕ್,ಎಸ್ ಡಿ ಎಂ ಕಾಲೇಜ್ ಪ್ರಿನ್ಸಿಪಾಲ್ ಡಾ.ಪಿ.ವಿಶ್ವನಾಥ್, ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸುಬ್ಬಾಪುರ ಮಠ,ಉಜಿರೆ ಗ್ರಾಪಂ ಅಧ್ಯಕ್ಷೆ ಉಷಾ ಕಿರಣ ಕಾರಂತ್, ಬದುಕು ಕಟ್ಟೋಣ ಬನ್ನಿ ತಂಡದ ಸಂಸ್ಥಾಪಕ ಮೋಹನ್ ಕುಮಾರ್,ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ,ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ,ಕಾರ್ಯದರ್ಶಿ ಸಂದೇಶ ರಾವ್,ಎಸ್ ಡಿಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಎಚ್.,ವ್ಯಾಯಮ ಜಿಮ್ ನ ಶಿಶಿರ ರಘುಚಂದ್ರ ಸಿರಿ ವ್ಯವಸ್ಥಾಪಕ ಕೆ.ಎನ್ ಜನಾರ್ಧನ್, ಎಸ್‌ಡಿಎಂ ಆಸ್ಪತ್ರೆಯ ಎಂಡಿ ಜನಾರ್ಧನ್ ಎಂ. ಡಾ. ದಯಾಕರ್ ಎಂ.ಎಂ. ಪ್ರಕಾಶ್ ಶೆಟ್ಟಿ ನೊಚ್ಚ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ವಕೀಲ ಧನಂಜಯ ರಾವ್ ಕಾರ್ಯಕ್ರಮ ನಿರೂಪಿಸಿದರು.
ಉಜಿರೆಯ ರತ್ನವರ್ಮ ಕ್ರೀಡಾಂಗಣದಿಂದ ನಿನ್ನಿಕಲ್ಲು,ಬೆಳಾಲು ಕ್ರಾಸ್, ಉದರೆ ಪೇಟೆ ಒಟ್ಟು ಐದು ಕಿಲೋಮೀಟರ್ ಓಟ ನಡೆಯಿತು. 200 ಸ್ವಯಂ ಸೇವಕರ ತಂಡ ಆಂಬ್ಯುಲೆನ್ಸ್ ಸೇವೆಯನ್ನು ಮಾಡಲಾಯಿತು.
1250ಕ್ಕೂ ಹೆಚ್ಚು ಜನರು ಸ್ಪರ್ಧೆಯಲ್ಲಿ ಭಾಗಿಯಾಗಿದ್ದು, ನೊಂದಾವಣೆ ಮಾಡಿದವರಿಗೂ ಅವಕಾಶ ವಿಜೇತರಿಗೆ ನಗದು ಬಹುಮಾನ,ಮೆಡಲ್,ಸರ್ಟಿಫಿಕೇಟ್
ವಿತರಿಸಲಾಯಿತು.

.

Related posts

ಹುಣ್ಸೆಕಟ್ಟೆ: ತೀರ ಹದಗೆಟ್ಟ ರಸ್ತೆ: ಪ.ಪಂ. ಅಧ್ಯಕ್ಷ ಜಯಾನಂದ ರಿಂದ ಕೂಡಲೇ ಸ್ಪಂದನೆ

Suddi Udaya

ಉಜಿರೆ: ರೆಂಜಾಳ ಗೆಳಯರ ಬಳಗ ಹಾಗೂ ರೆಂಜಾಳ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣಾ ಸಮಿತಿ ರಚನೆ

Suddi Udaya

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುತ್ಲೂರು ಸರ್ಕಾರಿ ಶಾಲೆಯ ಮಕ್ಕಳನ್ನು ಭೇಟಿ ಮಾಡಿಸಿದ ರಕ್ಷಿತ್ ಶಿವರಾಂ

Suddi Udaya

ಮುಂಡಾಜೆ ಗ್ರಾ.ಪಂ. ಅಧ್ಯಕ್ಷರಾಗಿ ಗಣೇಶ್ ಬಂಗೇರ, ಉಪಾಧ್ಯಕ್ಷರಾಗಿ ಸುಮಾ ಕೃಷ್ಣಾನಂದ ಆಯ್ಕೆ

Suddi Udaya

ದೀಪಾವಳಿ ಪ್ರಯುಕ್ತ ಆಹಾರ ಸಾಮಾಗ್ರಿ ವಿತರಣೆ

Suddi Udaya

ಅ. 20 ತುಳು ಕೂಟ ಗೋವಾದಲ್ಲಿ ಉದ್ಘಾಟನಾ ಸಮಾರಂಭ

Suddi Udaya
error: Content is protected !!