ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಲ್ಮಂಜ ಶ್ರೀ ಸತ್ಯನಾರಾಯಣ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ಕಲ್ಮಂಜ: ಇಲ್ಲಿಯ ಶ್ರೀ ಸತ್ಯನಾರಾಯಣ ಮಕ್ಕಳ ಯಕ್ಷಗಾನ ತರಬೇತಿ ಕೇಂದ್ರದ ಮೂವತ್ತು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮವು ಜೂ.28ರಂದು ಕಲ್ಮಂಜ ಶ್ರೀ ಸತ್ಯನಾರಾಯಣ ಭಜನಾ ಮಂಡಳಿಯಲ್ಲಿ ಜರುಗಿತು.

ಯಕ್ಷಗಾನ ತರಬೇತಿ ಕೇಂದ್ರದ ಸಂಚಾಲಕ ಶೇಖರ್ ಟಿ. ಸಮವಸ್ತ್ರ ವಿತರಿಸಿ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಯಕ್ಷಗಾನ ಕಲಿಕೆಯು ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಪ್ರಜ್ಞೆ ಪುರಾಣೇತಿಹಾಸದ ತಿಳುವಳಿಕೆ, ಕಲಾಸಕ್ತಿ, ನೃತ್ಯ-ನಟನಾ ಕೌಶಲ, ವಾಕ್ಚಾತುರ್ಯ, ರಂಗಾಭಿನಯ ಪಾಂಡಿತ್ಯ, ಸಂಸ್ಕೃತಿ-ಸಂಸ್ಕಾರದ ಅರಿವು, ಸ್ವಯಂಶಿಸ್ತು, ಮನೋಸ್ಥೆರ್ಯ, ಜೊತೆಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಹಾಗೂ ಪರಿಪಕ್ವ ಬೆಳವಣಿಗೆಗೆ ಪೂರಕವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಯಕ್ಷಗಾನ ಗುರುಗಳಾದ ಅರುಣ್ ಕುಮಾರ್ ಧರ್ಮಸ್ಥಳ, ಕೆ. ನಾಗೇಶ್ ಆಚಾರ್ಯ, ಕೃಷ್ಣಪ್ಪ ಟೈಲರ್ ನಿಡಿಗಲ್ ಮಜಲ್, ಚಿದಾನಂದ ಅಕ್ಷಯ ನಗರ, ಮಣಿಲಾ ಮುಖೇಶ್, ವಸಂತ ಟೈಲರ್ ನಿಡಿಗಲ್ ಮಜಲ್ ಹಾಗೂ ಪೋಷಕರು ಉಪಸ್ಥಿತರಿದ್ದರು.

ಕಳೆದ ಮೂರು ವರ್ಷಗಳ ಹಿಂದೆ ಶೇಖರ್ ಟಿ. ರವರ ನೇತೃತ್ವದಲ್ಲಿ ಪ್ರಾರಂಭಗೊಂಡ ಯಕ್ಷಗಾನ ತರಬೇತಿಯು ಉಚಿತವಾಗಿದ್ದು ಪ್ರತೀ ಆದಿತ್ಯವಾರ ಬೆಳಿಗ್ಗೆ 8:30ರಿಂದ 10ರ ತನಕ ನಡೆಯುತ್ತದೆ.

Related posts

80ನೇ ಸ್ವಾತಂತ್ರ್ಯೋತ್ಸವದಲ್ಲಿ ಕಂಗೊಳಿಸಿದ ಬ್ರೈಟ್ ಹೊರೈಝನ್

Suddi Udaya

ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ: ಉಜಿರೆ ಶ್ರೀ ಧ.ಮಂ. ಪದವಿ ಪೂರ್ವ ಕಾಲೇಜು ದ್ವಿತೀಯ ಸ್ಥಾನ

Suddi Udaya

ಅಳದಂಗಡಿ ಗ್ರಾ.ಪಂ. ನ ಹಿಂದೂ ರುದ್ರ ಭೂಮಿ ಅಭಿವೃದ್ಧಿ ಸಮಿತಿ ರಚನೆ

Suddi Udaya

ಗುರುವಾಯನಕೆರೆ ಅಯ್ಯಪ್ಪ ಭಕ್ತರ ಮಹಾಸಂಗಮ ಸಮಾವೇಶದಲ್ಲಿ ಸಂಪತ್ ಬಿ. ಸುವರ್ಣ ರವರಿಂದ 7 ಹಕ್ಕೋತ್ತಾಯಗಳ ಮಂಡನೆ

Suddi Udaya

ಧರ್ಮಸ್ಥಳದಿಂದ ಆನ್‌ಲೈನ್ ಜಾಗೃತಿ ಕಾರ್ಯಕ್ರಮ; ಕುಂಭಶ್ರೀ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವೀಕ್ಷಣೆ

Suddi Udaya

ನ.21 : ವಿದ್ಯುತ್ ನಿಲುಗಡೆ

Suddi Udaya
error: Content is protected !!