ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಸರ್ಕಾರಿ ಇಲಾಖಾ ಸುದ್ದಿ

ಮರಳಿನ ತಾಯಿನಾಡು ದ.ಕ. ಜಿಲ್ಲೆಯಲ್ಲಿ ಮರಳು ಇಲ್ಲದೆ ಕಾರ್ಮಿಕರು ಬೀದಿಗೆ : ವಸಂತ ನಡ

ಬೆಳ್ತಂಗಡಿ: ದ.ಕ ಜಿಲ್ಲೆಯಲ್ಲಿ ಮರಳು, ಕೆಂಪುಕಲ್ಲು , ಬೋಲ್ಡ್ರಸ್ ಕಲ್ಲು ಗಳಿಗೆ ನಿರ್ಬಂಧ ಹೇರಿರುವ ಕಾರಣ ದುಬಾರಿ ಮೊತ್ತ ಪಾವತಿಸಬೇಕಾಗಿದೆ. ಇದರಿಂದಾಗಿ ಜನ ಸಾಮಾನ್ಯರು, ಮಧ್ಯಮ ವರ್ಗದವರು, ಕಟ್ಟಡ ಅಥವಾ ಯಾವುದೇ ಒಂದು ಮನೆ ಮಾಡಲು ಅಸಾಧ್ಯವಾದ ವಾತವರಣ ದ.ಕ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಅದೇ ರೀತಿ ಇನ್ನಿತರ ಯಾವುದೇ ಕಟ್ಟಡ ಕಾಮಗಾರಿ , ರಸ್ತೆ ಕಾಂಕ್ರೀಟಿಕರಣ ಸೇರಿದಂತೆ ಅಭಿವೃದ್ಧಿ ಕೆಲಸಗಳಿಗೆ ಅಡಚಣೆ ಉಂಟಾಗಿ ಕಟ್ಟಡ ಕಾರ್ಮಿಕರಿಗೆ ಕೆಲಸವೇ ಇಲ್ಲದಂತಾಗಿದೆ. ಕಟ್ಟಡ ನಿರ್ಮಾಣದ ಕೆಲಸವನ್ನೇ ನಂಬಿಕೊಂಡು ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬ ಬದುಕುತ್ತಿದ್ದು , ಇದೀಗ ಅವರ ಬದುಕನ್ನು ರಾಜ್ಯ ಸರಕಾರ ಬೀದಿಗೆ ತಳ್ಳುತ್ತಿದ್ದು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗ ಮಾಡಿದಂತಿದೆ.

ಕಟ್ಟಡ ಕಾರ್ಮಿಕರಿಗೆ ಕೆಲಸ ಸಿಗುವಂತೆ ಮಾಡುವಲ್ಲಿ ರಾಜ್ಯ ಸರಕಾರ ಮತ್ತು ಜಿಲ್ಲಾ ಆಡಳಿತ ಅಸಡ್ಡೆ ತೋರಿಸಿದಲ್ಲಿ ಮುಂದಿನ ದಿನ ಕಾರ್ಮಿಕರು ಬೀದಿಗಿಳಿದು ಸರಕಾರದ ವಿರುದ್ಧ ಹೋರಾಟ ಮಾಡಲು ಸರಕಾರವೇ ದಾರಿ ಮಾಡಿಕೊಟ್ಟಂತಿದೆ ಎಂದು ಸ್ಪಂದನ ದಕ್ಷಿಣ ಕನ್ನಡ ಕಟ್ಟಡ ಮತ್ತು ಇತರ ನಿರ್ಮಾಣ ಸಂಘದ ಜಿಲ್ಲಾಧ್ಯಕ್ಷ ವಸಂತ ನಡ ಎಚ್ಚರಿಕೆ ನೀಡಿದರು.

ಈ ಕೂಡಲೇ ಸಂಬಂಧ ಪಟ್ಟ ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಮಿಕ ಸಚಿವರು, ಜಿಲ್ಲಾಡಳಿತ ಮತ್ತು ಮುಖ್ಯಮಂತ್ರಿಯವರು ಮಧ್ಯಪ್ರವೇಶ ಮಾಡಿ ಪರಿಶೀಲನೆ ಮಾಡಿ ಮರಳು, ಕೆಂಪು ಕಲ್ಲು, ಬೋಲ್ಡ್ರಸ್ ಕಲ್ಲುಗಳು ಕಡಿಮೆ ಶುಲ್ಕದೊಂದಿಗೆ ದೊರೆಯುವಂತೆ ಮಾಡುವ ಜೊತೆಗೆ ಕಾನೂನು ಪ್ರಕಾರ ಎಲ್ಲಾ ರೀತಿಯ ಗಣಿಗಾರಿಕೆ ನಡೆಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರವನ್ನು ಅಗ್ರಹಿಸಿದ್ದಾರೆ.

Related posts

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ದ.ಕ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಸ್ವಚ್ಚತಾ ಆಂದೋಲನ

Suddi Udaya

ಉಜಿರೆ ಎಸ್.ಡಿ.ಎಂ ಪಪೂ ಕಾಲೇಜಿನಲ್ಲಿ 15 ಕ್ಕೂ ಹೆಚ್ಚಿನ ವಿಭಾಗಗಳ ಭಿತ್ತಿ ಪತ್ರಿಕೆ ಅನಾವರಣ

Suddi Udaya

ನ.10 ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ರೆಖ್ಯದಲ್ಲಿ ಮೊಳಗಲಿದೆ ಹಿಂದುತ್ವದ ಘರ್ಜನೆ

Suddi Udaya

ಪುಂಜಾಲಕಟ್ಟೆ: ಹಟ್ಟತ್ತೋಡಿ ನಿವಾಸಿ ಕೃಷಿಕ ಗೋವಿಂದ ಗೌಡ ನಿಧನ

Suddi Udaya

ನಾಟಿ ವೈದ್ಯರಾದ ಬೇಬಿ ಪೂಜಾರಿ ಮತ್ತು ಕರ್ಗಿ ಶೆಟ್ಟಿಯವರಿಗೆ ‘ಕರ್ನಾಟಕ ಜಾನಪದ ಪರಿಷತ್‌ ಪ್ರಶಸ್ತಿ’ ಪ್ರದಾನ

Suddi Udaya

ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಡಿ.ಎ ರಹಿಮಾನ್ ಅವರಿಗೆ ಪತ್ನಿ‌ ವಿಯೋಗ

Suddi Udaya
error: Content is protected !!