March 7, 2026
ಧಾರ್ಮಿಕ

ಕೂಟ ಮಹಾ ಜಗತ್ತು ಬೆಳ್ತಂಗಡಿ ಅಂಗ ಸಂಸ್ಥೆಯ ವಾರ್ಷಿಕ ಮಹಾಸಭೆ

ಬೆಳ್ತಂಗಡಿ: ಅಂಗಸಂಸ್ಥೆಯ ಚಟುವಟಿಕೆಗಳಲ್ಲಿ ಕೂಟ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ವಿಶೇಷವಾಗಿ ಯುವಕರು ಕೂಟ ಮಹಾಜಗತ್ತಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಗುರು ನರಸಿಂಹದೇವರ ಅನುಗ್ರಹದಿಂದ ಕೂಟ ಬಂಧುಗಳು ತಮ್ಮ ಜೀವನದಲ್ಲಿ ಹೆಚ್ಚಿನ ಯಶಸ್ಸುಗಳಿಸುವಂತಾಗಲಿ ಎಂದು ಶ್ರೀ ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮದ ಆಡಳಿತ ಮಂಡಳಿ ಸದಸ್ಯ ಸದಾಶಿವ ಐತಾಳ್ ಗುರು ಸಂದೇಶ ನೀಡಿದರು.

ಅವರು ಕೂಟ ಮಹಾಜಗತ್ತು ಬೆಳ್ತಂಗಡಿ ಅಂಗ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಬೆಳ್ತಂಗಡಿ ಅಂಗ ಸಂಸ್ಥೆಯ ವಿಶ್ವನಾಥ ಹೊಳ್ಳ ಮಜ್ಜನಿಬೈಲು ಅಧ್ಯಕ್ಷತೆಯನ್ನು ವಹಿಸಿದ್ದರು.

ಅಂಗಸಂಸ್ಥೆಯ ಸ್ಥಾಪಕ ಅಧ್ಯಕ್ಷ ವೆಂಕಟರಾಯ ಅಡೂರು, ಅಂಗಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷ ಬಿ. ವಾಸುದೇವ ಸೋಮಯಾಜಿ ಹಾಗೂ ಮಹಿಳಾ ವೇದಿಕೆಯ ಅಧ್ಯಕ್ಷ ನಳಿನಿ ಎಸ್ ಹೊಳ್ಳ ಉಪಸ್ಥಿತರಿದ್ದರು.

ಕಾರ್ಯದರ್ಶಿ ವಿಷ್ಣು ಪ್ರಕಾಶ್ ಅಂಗಸಂಸ್ಥೆ ನಡೆಸಿದ ವಿವಿಧ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಪ್ರಕಾಶ್ ನಾರಾಯಣ ಲೆಕ್ಕಪತ್ರಗಳನ್ನು ಮಂಡಿಸಿ ಮುಂಗಡ ಪತ್ರಕ್ಕೆ ಸಭೆಯ ಒಪ್ಪಿಗೆ ಪಡೆದರು. ಬಿಲಿಯನ್ ಫೌಂಡೇಶನ್ ಪ್ರತಿನಿಧಿ ಅರವಿಂದ ಕಾರಂತ ಫೌಂಡೇಶನ್ ಚಟುವಟಿಕೆಗಳ ಕುರಿತು ವರದಿಯನ್ನು ಪ್ರಸ್ತುತಪಡಿಸಿದರು. ಮಹಿಳಾ ವೇದಿಕೆಯ ಕಾರ್ಯದರ್ಶಿ ಅಕ್ಷತಾ ಎಸ್ ಅಡೂರು ಮಹಿಳಾ ವೇದಿಕೆಯ ವಾರ್ಷಿಕ ವರದಿಯನ್ನು ಮಂಡಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಉಪಾಧ್ಯಕ್ಷ ರಮೇಶ್ ಹೊಳ್ಳ ಆರಂಬೊಡಿಯವರು ಸ್ವಾಗತಿಸಿದರು. ಕಾರ್ಯದರ್ಶಿ ಶ ವಿಷ್ಣು ಪ್ರಕಾಶ್ ಧನ್ಯವಾದ ನೀಡಿದರು. ಅನುರಾಧ ಕೆ. ರಾವ್ ನಿರೂಪಿಸಿದರು.

Related posts

ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ

Suddi Udaya

ಧರ್ಮಸ್ಥಳಕ್ಕೆ ಆಗಮಿಸುವ ಮುನ್ನ ಜನಾರ್ದನ ರೆಡ್ಡಿ ಅಂಜನಾದ್ರಿ ಬೆಟ್ಟದ ತಪ್ಪಲಿನಲ್ಲಿ ಪೂಜೆ

Suddi Udaya

ಆ.20-22: ಲಾಯಿಲ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ 353ನೇ ಆರಾಧನಾ ಮಹೋತ್ಸವ

Suddi Udaya

ಬೆದ್ರಬೆಟ್ಟು ರಿಫಾಯ್ಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ರಂಜಾನ್ ಆಚರಣೆ

Suddi Udaya

ಮುಂಡೂರು ಪಾವನನಡೆ ಪ್ರತಿಷ್ಠಾನ ಪಾಪಿನಡೆಗುತ್ತುವಿನಲ್ಲಿ ದೈವಗಳಿಗೆ ಪಂಚಪರ್ವ- ಕೋಟಿ ಚೆನ್ನಯರ ದರುಶನ ಸೇವೆ

Suddi Udaya

ಧರ್ಮಸ್ಥಳದಲ್ಲಿ25ನೇ ವರ್ಷದ ಭಜನಾ ತರಬೇತಿ ಕಮ್ಮಟ: ಮಂಡ್ಯ ಜಿಲ್ಲೆಯ ಆರತಿಪುರದ ಸಿದ್ಧಾಂತಕೀರ್ತಿ ಸ್ವಾಮೀಜಿಯವರಿಂದ ಉದ್ಘಾಟನೆ: ಧಮ೯ಸ್ಥಳದ ಧಮಾ೯ಧಿಕಾರಿ ಡಾ.ಹೆಗ್ಗಡೆ, ಮಣಿಲಶ್ರೀ ಉಪಸ್ಥಿತಿ: 115 ಭಜನಾ ಮಂಡಳಿಗಳ 202 ಮಂದಿ ಶಿಬಿರಾಥಿ೯ಗಳು ಭಾಗಿ

Suddi Udaya
error: Content is protected !!