ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕನ್ಯಾಡಿ 2 ಸ.ಉ.ಹಿ. ಪ್ರಾ. ಶಾಲಾ ಮಂತ್ರಿಮಂಡಲದ ಪ್ರಮಾಣವಚನ ಸ್ವೀಕಾರ ಸಮಾರಂಭ

ಕನ್ಯಾಡಿ 2: ಇಲ್ಲಿಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಮಕ್ಕಳ ಮಂತ್ರಿಮಂಡಲದ ಪ್ರಮಾಣವಚನ ಸ್ವೀಕಾರ ಸಮಾರಂಭವು ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ ಎನ್ ಅವರ ನೇತೃತ್ವದಲ್ಲಿ ನಡೆಯಿತು.

ಹೊಸದಾಗಿ ಆಯ್ಕೆಯಾದ ಶಾಲಾ ವಿದ್ಯಾರ್ಥಿಗಳ ನಾಯಕಿ ಕುಮಾರಿ ಅನನ್ಯ ಮತ್ತು ಉಪ ನಾಯಕ ಕುಮಾರ್ ಸುಹಾಸ್ ಹಾಗೂ ಮಂತ್ರಿಮಂಡಲದ ಸರ್ವ ಸದಸ್ಯರು ಪ್ರಮಾಣವಚನವನ್ನು ಸ್ವೀಕರಿಸಿದರು.

ಶಾಲೆಯ ಕರ್ತವ್ಯ, ಶಿಸ್ತು, ಜವಾಬ್ದಾರಿ ಸರಿಯಾಗಿ ನಿಭಾಯಿಸುವುದಾಗಿ ಪ್ರತಿಜ್ಞೆ ಮಾಡಿದರು. ಈ ಪ್ರತಿಜ್ಞಾವಿಧಿಯನ್ನು ಶಾಲಾ ಸಹ ಶಿಕ್ಷಕಿ ಶ್ರೀಮತಿ ಶಾರದಾ ನಿರ್ವಹಿಸಿದರು. ಶಾಲಾ ಶಿಕ್ಷಕ ವೃಂದದವರು ಪ್ರಮಾಣವಚನ ಕೈಗೊಂಡ ಮಕ್ಕಳಿಗೆ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಉಪಸ್ಥಿತರಿದ್ದರು.

Related posts

ಕಲ್ಮಂಜ : ಗುರಿಪಳ್ಳ ನಿವಾಸಿ ಮೇಸ್ತ್ರಿ ನಾರಾಯಣ ಮೂಲ್ಯ ನಿಧನ

Suddi Udaya

ಶಿರ್ಲಾಲು ಕೆನರಾ ಬ್ಯಾಂಕ್ ಸಹಭಾಗಿತ್ವದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ಹಳ್ಳಿಂಗೇರಿ ಹಾ.ಉ. ಮಹಿಳಾ ಸಹಕಾರ ಸಂಘದ ಕಟ್ಟಡ ರಚನಾ ಸಮಿತಿ ರಚನೆ

Suddi Udaya

ಭಂಡಾರಿ ಯುವ ವೇದಿಕೆ ಬೆಳ್ತಂಗಡಿ ಮತ್ತು ಭಂಡಾರಿ ಸಮಾಜ ಸಂಘದ ಸಹಯೋಗದಲ್ಲಿ ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮ ಉದ್ಘಾಟನೆ

Suddi Udaya

ರಜತ ಸಂಭ್ರಮದಲ್ಲಿರುವ ಉಜಿರೆಯ ಬೆನಕ ಆಸ್ಪತ್ರೆಯ ವತಿಯಿಂದ ಮಹಾಮಂಡಲೇಶ್ವರರಾಗಿ ಪಟ್ಟಾಭಿಶಿಕ್ತರಾದ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಗೌರವಾರ್ಪಣೆ

Suddi Udaya

ನ.22: ಶ್ರೀ ಶಿಶಿಲೇಶ್ವರ ಯಕ್ಷ ಕಲಾ ಕೂಟದಿಂದ ಸಂಪೂರ್ಣ ಶಬರಿಮಲೆ ಅಯ್ಯಪ್ಪ ಯಕ್ಷಗಾನ ಬಯಲಾಟ

Suddi Udaya
error: Content is protected !!