March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಸಭೆ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೆಜಿಯಿಂದ ಎರಡನೇ ತರಗತಿವರೆಗಿನ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಮನಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಅಶ್ವಿನಿ ಹೆಚ್ ಆಗಮಿಸಿ ಮಕ್ಕಳ ದೈಹಿಕ ಬೆಳವಣಿಗೆಗೆ ಬೇಕಾದ ಆಹಾರ ಕ್ರಮ, ಮಕ್ಕಳ ಮಾನಸಿಕ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳು, ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಎಷ್ಟು ಮುಖ್ಯ ಎಂಬುದರ ಕುರಿತಾಗಿ ಸವಿವರವಾದ ಮಾಹಿತಿಯನ್ನು ಪೋಷಕರಿಗೆ ನೀಡಿದರು.

ಕರಡಿಪಾಥ್ ತರಗತಿಗಳ ತರಬೇತುದಾರ ನಿಖಿಲ್ ಅವರು ಕರಡಿಪಾಥ್ ತರಗತಿಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು,. ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಪರಿಮಳ ಎಂ ವಿ ರವರು ಶಾಲಾ ರೀತಿ ನೀತಿಗಳನ್ನು ವಿವರಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಮಕ್ಕಳನ್ನು ಕಬ್ ಬುಲ್ ಬುಲ್ ದಳಕ್ಕೆ ಸೇರಿಸುವ ಕುರಿತಾಗಿ ಶಾಲೆಯ ಫ್ಲಾಕ್ ಲೀಡರ್ ಸೌಮ್ಯ ಮಾಹಿತಿ ನೀಡಿದರು. ಪುಟಾಣಿ ಮಕ್ಕಳ ಕಾಳಜಿಗಳ ಕುರಿತಾಗಿ ಹಾಗೂ ಬನ್ನಿ ದಳದ ಬಗ್ಗೆ ಶ್ರೀಮತಿ ಪ್ರೀತಿ ತಿಳಿ ಹೇಳಿದರು. ತರಗತಿ ಶಿಕ್ಷಕರುಗಳು ತಮ್ಮ ಪರಿಚಯವನ್ನು ಪೋಷಕರಿಗೆ ಮಾಡಿದರು. ಶಾಲಾ ಶಿಕ್ಷಕಿ ಶ್ರೀಮತಿ ಗೀತಾ ಅವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಶ್ರೀಮತಿ ಪ್ರೀತಿ ವಂದಿಸಿದರು.

Related posts

ಮಡಂತ್ಯಾರು: ಮೂಡಯೂರು ರಸ್ತೆ ಬದಿ ಸ್ವಚ್ಛತಾ ಕಾರ್ಯ

Suddi Udaya

ಜೂ.30 : ಕೊಕ್ಕಡ ಮಿಯಾವಕಿ ಅರಣ್ಯೀಕರಣ ಗಿಡನಾಟಿ ಕಾರ್ಯಕ್ರಮ

Suddi Udaya

ಕೌಟುಂಬಿಕ ಕಲಹ: ಜೀವ ಬೆದರಿಕೆ

Suddi Udaya

ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಆಸ್ಪತ್ರೆ ಮೇಲ್ದರ್ಜೆಗಾಗಿ ಧಾರ್ಮಿಕ ಆಯುಕ್ತರಿಗೆ ಮನವಿ

Suddi Udaya

ಬೆಳ್ತಂಗಡಿ ಛೇಂಬರ್ ಆಫ್ ಕಾಮರ್ಸ್ ಇದರ ಮಾಸಿಕ ಸಭೆ

Suddi Udaya

ಕೊಯ್ಯೂರು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಭಜನೆ

Suddi Udaya
error: Content is protected !!