March 7, 2026
Uncategorized

ಕೊಯ್ಯೂರು ಭಾರಿ ಮಳೆಗೆ ಹಟ್ಟಿ ಗೊಡೆ ಕುಸಿತ,ಉತ್ಸಾಹಿ ತಂಡದ ಸ್ವಯಂಸೇವಕರಿಂದ ಶ್ರಮದಾನ

ಕೊಯ್ಯೂರು: ರಾತ್ರಿ ವೇಳೆಯಲ್ಲಿ ಸುರಿದ ಭಾರಿ ಗಾಳಿ, ಮಳೆಗೆ ಕೊಯ್ಯೂರು ಗ್ರಾಮದ ಪುಂಡೈದಡಿ (ಕಜೆ) ನಿವಾಸಿ ನಾರಾಯಣ ನಾಯ್ಕ ಅವರ ಮನೆಯ ಹಿಂಭಾಗದಲ್ಲಿ ಹಟ್ಟಿಯ ಗೋಡೆ ಕುಸಿದು ಬಿದ್ದಿದೆ.


ಕೊಯ್ಯೂರು ಆದೂರು ಪೇರಾಲಿನ ಶ್ರೀ ಕೃಷ್ಣ ಭಜನಾ ಮಂಡಳಿಯ ಉತ್ಸಾಹಿ ಸ್ವಯಂ ಸೇವಕರ ತಂಡದ 20 ಕ್ಕೂಹೆಚ್ಚಿನಸದಸ್ಯರು ಶ್ರಮದಾನ ಮೂಲಕ ಮನೆಯ ಪಕ್ಕದಲ್ಲಿದ್ದ ಮಣ್ಣು ತೆರವು ಮಾಡಿದರು. ಮತ್ತೆ ಕುಸಿತ ಆಗುವ ಭೀತಿಯಲ್ಲಿದ್ದ ಗೋಡೆಯನ್ನು ತೆರವುಗೊಳಿಸಿ ಮನೆಯವರಿಗೆ ಸಹಕರಿಸಿದರು.
ಅಪಾಯದಲ್ಲಿರುವ ವಿಷಯ ತಿಳಿದ ತಕ್ಷಣ ಆಗಮಿಸಿ, ಸಹಕಾರ ನೀಡಿದ ಉತ್ಸಾಹಿ ತಂಡದ ಸ್ವಯಂ ಸೇವಕರ ಸೇವೆಗೆ ಶ್ರೀಮತಿ ಮತ್ತು ನಾರಾಯಣ ನಾಯ್ಕ ದಂಪತಿಗಳು ಕೃತಜ್ಞತೆ ಸಲ್ಲಿಸಿದರು.

Related posts

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಅಳದಂಗಡಿ ಶಾಖೆಯಲ್ಲಿ ಉಚಿತ ನೇತ್ರ ತಪಾಸಣೆ, ದಂತ ಚಿಕಿತ್ಸೆ, ಕ್ಯಾನ್ಸರ್ ತಪಾಸಣೆ ಮತ್ತು ಸಾಮಾನ್ಯ ವೈದ್ಯಕೀಯ ತಪಾಸಣಾ ಹಾಗೂ ಆಧಾರ್ ಕಾರ್ಡ್ ನೋಂದಣಿ , ತಿದ್ದುಪಡಿ ಶಿಬಿರ

Suddi Udaya

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ವರ್ಗಾವಣೆ ನೂತನ ಡಿಸಿಯಾಗಿ ದರ್ಶನ್ ಹೆಚ್ ನೇಮಕ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರಾಂತೀಯ ಪಾಲನಾ ಸಮಿತಿಯ ವಾರ್ಷಿಕ ಮಹಾಸಭೆ

Suddi Udaya

ಸುಲ್ಕೇರಿ: ರಸ್ತೆಗೆ ಬೀಳುವ ಹಂತದಲ್ಲಿದ್ದ ಮರವನ್ನು ಕೂಡಲೇ ವೇಣೂರು ಅರಣ್ಯ ಅಧಿಕಾರಿಗಳ ಮುಖಾಂತರ ತೆರವು ಕಾರ್ಯ

Suddi Udaya

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ದುರ್ವಾಸಾತಿಥ್ಯ ತಾಳಮದ್ದಳೆ

Suddi Udaya

ಪಕ್ಷೇತರ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಭಟ್ ನಾಮಪತ್ರ ಸಲ್ಲಿಕೆ

Suddi Udaya
error: Content is protected !!