September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವಿನೂತನ ‘ಸಿರಿ ಮಿಲ್ಲೆಟ್ ಕೆಫೆ’ ಧಾರವಾಡದಲ್ಲಿ ಶುಭಾರಂಭ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತೀ ವೀ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧಾರವಾಡ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಪ್ರಪ್ರಥಮವಾಗಿ ಆರಂಭಿಸಲಾದ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ‘ನೂತನ ಸಿರಿ ಮಿಲ್ಲೆಟ್ ಕೆಫೆ’ಯು ಜು. 4 ರಂದು ಶುಭಾರಂಭಗೊಂಡಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಮತ್ತು ಸಿರಿ ಸಂಸ್ಥೆಯ ಅಧ್ಯಕ್ಷರು ಡಾ|| ಡಿ ವೀರೇಂದ್ರ ಹೆಗ್ಗಡೆಯವರು ವಿನೂತನವಾದ ಸಿರಿ ಮಿಲ್ಲೆಟ್ ಕೆಫೆಯ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಧಾರವಾಡ ಎಸ್.ಡಿ.ಎಂ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ| ನಿರಂಜನ್ ಕುಮಾರ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀಮತಿ ಪದ್ಮಲತಾ ನಿರಂಜನ್ ದಂಪತಿಗಳು ದೀಪ ಬೆಳಗಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಧಾರವಾಡ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಜೀವಂಧರ್ ಕುಮಾರ್, ಹಣಕಾಸು ನಿರ್ದೇಶಕರಾದ ವಿ.ಜಿ.ಪ್ರಭು, ಧಾರವಾಡ ಎಸ್.ಡಿ.ಎಂ ಡೆಂಟಲ್ ಹಾಸ್ಪಿಟಲ್ ಪಿ.ಆರ್.ಒ ನಾಗ್ ಕುಮಾರ್, ರಾಯಪುರ ಸಿರಿ ಮಿಲ್ಲೆಟ್ ಘಟಕದ ಸಿ.ಸಿ.ಒ ಗಣೇಶ್ ಪ್ರಸಾದ್ ಎಸ್ ಕಾಮತ್, ಧಾರವಾಡ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಧಾರವಾಡ ರಾಯಪುರ ಸಿರಿ ಮಿಲ್ಲೆಟ್ ಘಟಕದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts

ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿನಿಯನ್ನು ಅಪಹರಣಕ್ಕೆ ಯತ್ನಿಸಿದ ಮುಸುಕುಧಾರಿಗಳು: ಚೂರಿಯಿಂದ ಇರಿದು ಹಲ್ಲೆ: ಗಾಯಗೊಂಡ ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲು

Suddi Udaya

ಈದ್ ಹಬ್ಬದ ಪ್ರಯುಕ್ತ ಅಪ್ಸರಾ ಫ್ಯಾಶನ್ ಸೆಂಟರ್ ಹಾಗೂ ಮಿಷ್‌ಮಷ್ ಫ್ಯಾನ್ಸಿ & ಗಿಫ್ಟ್ ಸೆಂಟರಿನಲ್ಲಿ ಶೇ.20 ಡಿಸ್ಕೌಂಟ್ ಸೇಲ್: ಶಾಲಾ ಮಕ್ಕಳ ಬುಕ್ಸ್, ಬ್ಯಾಗ್‌ಗಳು, ಕೊಡೆ, ಸ್ಟೇಷನರಿ ವಸ್ತುಗಳು ರಿಯಾಯಿತಿ ದರದಲ್ಲಿ ಲಭ್ಯ

Suddi Udaya

ಬೆಳ್ತಂಗಡಿ ಟಿವಿಎಸ್ ಲೋಬೊ ಮೋಟರ್ಸ್ನಲ್ಲಿ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ಬುಕ್ಕಿಂಗ್ ಹಾಗೂ ಸರ್ವಿಸ್ ಸೇವೆ ಲಭ್ಯ

Suddi Udaya

ಪುತ್ತಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಡಿ.13: ಪಿಲಿಚಾಮುಂಡಿಕಲ್ಲಿನಲ್ಲಿ ದೊಂಪದ ಬಲಿ ಉತ್ಸವ

Suddi Udaya

ನಾರಾವಿ ವೈಶಾಲಿ ಪರಿಸರದಲ್ಲಿ ಮನೆ ಹಾಗೂ ತೋಟಕ್ಕೆ ಸಿಡಿಲು ಬಡಿತ: ಸಿಡಿಲಿನ ರಭಸಕ್ಕೆ ಸುಟ್ಟು ಕರಕಲಾದ ಮನೆಯ ವಸ್ತುಗಳು, ಅಪಾಯದಿಂದ ಪಾರಾದ ತಾಯಿ- ಮಗಳು

Suddi Udaya
error: Content is protected !!