September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಹೊಸಂಗಡಿ: ವಲಯ ಮಟ್ಟದ ಪದಗ್ರಹಣ ಸಮಾರಂಭ

ಹೊಸಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಗುರುವಾಯನಕೆರೆ ವ್ಯಾಪ್ತಿಯ ಹೊಸಂಗಡಿ ವಲಯದ ಬಡಕೋಡಿ ಒಕ್ಕೂಟದ ಆಶ್ರಯದಲ್ಲಿ ಜರಗುವ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟಗಳ ಪದಗ್ರಹಣ ಸಮಾರಂಭ ಪಾಡ್ಯರಬೆಟ್ಟು ಸಂತೃಪ್ತಿ ಸಭಾಭವನದಲ್ಲಿ ಜರುಗಿತು.

ಪದ್ಮಾ ಕ್ಯಾಷು ಫ್ಯಾಕ್ಟರಿ ಮಾಲಕ ವಿಕಾಸ್ ಜೈನ್ ಕಾರ್ಯಕ್ರಮ ಉದ್ಘಾಟಿಸಿ ಯೋಜನೆಯಿಂದ ಪ್ರತಿ ಮನೆ ಮನೆಯ ಅಭಿವೃದ್ಧಿಯಾಗಿದೆ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆ ದಂಪತಿಗಳ ಆಶಯವಾಗಿದೆ, ಎಂದು ನೂತನ ಒಕ್ಕೂಟಕ್ಕೆ ಶುಭ ಹಾರೈಸಿದರು.

ಕೇಂದ್ರ ಕಚೇರಿಯ ಮಾನವ ಸಂಪನ್ಮೂಲ ಯೋಜನಾಧಿಕಾರಿ ಶ್ರೀನಿವಾಸ್ ಪಿ. ಮಾತನಾಡಿ ನಂಬಿಕೆಯ ಆಧಾರದಲ್ಲಿ ಬೆಳೆದು ಬಂದಿರುವ ಗ್ರಾಮಾಭಿವೃದ್ಧಿ ಯೋಜನೆಯ ಮೂಲ ಪರಿಕಲ್ಪನೆ ಹಾಗೂ ಜನರ ಜೀವನದಲ್ಲಿ ಆಗಿರುವ ಬದಲಾವಣೆ ಬಗ್ಗೆ ಹಾಗೂ ಧಾರ್ಮಿಕವಾಗಿ ಜನರ ಭಾವನೆಗಳ ಬಗ್ಗೆ ಹೇಳುತ್ತಾ ಹುಟ್ಟು ಹಾಕಿರುವ ಮೂಲದೇಯವನ್ನು ನಾವು ಮರೆಯಬಾರದು ಎಂದು ತಿಳಿಸಿದರು.

ಹೊಸಂಗಡಿ ವಲಯ ಅಧ್ಯಕ್ಷ ಸತೀಶ್ ಮಠ ರವರು ೩೦ ವರ್ಷದ ಹಿಂದಿನ ಜೀವನದ ಪರಿಕಲ್ಪನೆ ಹಾಗೂ ಈಗಿನ ಜೀವನದಲ್ಲಿ ಆಗಿರುವ ಬದಲಾವಣೆಗೆ ಪೂಜ್ಯರೇ ಕಾರಣ ಎಂದು ಹೇಳಿದರು.

ವೇದಿಕೆಯಲ್ಲಿ ತಾಲೂಕು ಜನಜಾಗೃತಿ ಸದಸ್ಯರಾದ ವಿದ್ಯಾನಂದ ಜೈನ್, ವಿಠಲ್ ಸಿ ಪೂಜಾರಿ, ಪೂಜಾ ಸಮಿತಿ ಅಧ್ಯಕ್ಷ ಸೀನ ಶೆಟ್ಟಿ ಕಿರಿಂಬಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ವೇಣೂರು: ರಾಜೇಶ್ ಆಚಾರ್ಯ ನೇಣು ಬಿಗಿದು ಆತ್ಮಹತ್ಯೆ

Suddi Udaya

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಕ್ಷೇಮ ನಿಧಿ ಯೋಜನೆಯ‌ ಸಹಾಯಧನ ಹಸ್ತಾಂತರ

Suddi Udaya

ಕನ್ಯಾಡಿ: ಶ್ರೀ ರಾಮ ನಾಮ ಸಪ್ತಾಹ ಮತ್ತು ಪ್ರತಿಷ್ಠಾ ಜಾತ್ರಾ ಮಹೋತ್ಸವ-ನವದುರ್ಗಾ ಹೋಮ

Suddi Udaya

ಸುರ್ಯ ಸ.ಕಿ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮುಳಿಯ ಜುವೆಲ್ಲರ್ಸ್ ವತಿಯಿಂದ ಬ್ಯಾಗ್ ವಿತರಣೆ

Suddi Udaya

ಕವಿ ಸರ್ವಜ್ಞ ಜಯಂತಿ ಆಚರಣೆ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ : 3781 ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ

Suddi Udaya
error: Content is protected !!