September 6, 2026
ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ ಎಸ್.ಡಿ.ಎಂ. ಪ.ಪೂ. ಕಾಲೇಜು: ಎನ್ಎಸ್ಎಸ್ ಕಾರ್ಯ ಚಟುವಟಿಕೆಗಳ ಉದ್ಘಾಟನೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ನಡೆಯಿತು. ಕಾರ್ಯ ಚಟುವಟಿಕೆಗಳನ್ನು ಉಜಿರೆ ಎಸ್.ಡಿ.ಎಂ. ಕಾಲೇಜು (ಸ್ವಾಯತ್ತ) ಇಲ್ಲಿನ ಅರ್ಥ ಶಾಸ್ತ್ರ ಮತ್ತು ಗ್ರಾಮೀಣಾಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ. ಗಣರಾಜ್ ಕೆ. ರವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು “ಸೇವೆಯೇ ಧ್ಯೇಯವಾಗಿರುವ ರಾಷ್ಟ್ರೀಯ ಸೇವಾ ಯೋಜನೆಯು ದೇಶದ ಅಭಿವೃದ್ಧಿಗೆ ಬಹಳ ಕೊಡುಗೆ ನೀದಿದೆ. ಅಲ್ಲದೆ ಸ್ವಯಂ ಸೇವಕರಿಗೆ ಸಮಾಜದ ಜೊತೆ ಒಡನಾಟವನ್ನು ಬೆಳೆಸಿ ಅವರ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿ. ಆದುದರಿಂದ ತಮ್ಮನ್ನು ಅದರಲ್ಲಿ ತೊಡಗಿಸಿಕೊಂಡು ಉತ್ತಮ ವ್ಯಕ್ತಿತ್ವ ಮೂಡಿಸಿಕೊಳ್ಳಬೇಕು” ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಚಾರ್ಯ ಪ್ರಮೋದ್ ಕುಮಾರ್ ರವರು “ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯು ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ ಯಶಸ್ವಿಯಾಗಿ ಮುನ್ನಡೆದುಕೊಂಡು ಬಂದಿದೆ. ಇಲ್ಲಿನ ಸ್ವಯಂ ಸೇವಕರು ರಾಜ್ಯ,ರಾಷ್ಟ್ರ ಮಟ್ಟದ ಶಿಬಿರದಲ್ಲಿ ಭಾಗವಹಿಸಿದ್ದಾರೆ.

ಮುಂದೆಯೂ ಇಂತಹ ಸಾಧನೆಗಳು ಮರುಕಳಿಸಲಿ “ಎಂದು ಹೇಳಿದರು.ವೇದಿಕೆಯಲ್ಲಿ ಉಪಪ್ರಾಂಶುಪಾಲ ಡಾ. ರಾಜೇಶ್ ಬಿ. ನಿಕಟ ಪೂರ್ವ ಯೋಜನಾಧಿಕಾರಿಗಳಾದ ಡಾ. ಪ್ರಸನ್ನ ಕುಮಾರ್ ಐತಾಳ್, ಯೋಜನಾಧಿಕಾರಿಗಳಾದ ವಿಶ್ವನಾಥ್ ಎಸ್, ಸಹ ಯೋಜನಾಧಿಕಾರಿ ಶ್ರೀಮತಿ ಶೋಭಾ ಪಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಲಹಾ ಸಮಿತಿ ಸದಸ್ಯರಾದ ದಿವ್ಯ ಕುಮಾರಿ ಹಾಗೂ ನಾಗರಾಜ್ ಭಂಡಾರಿರವರು ಉಪಸ್ಥಿತರಿದ್ದರು.ಸ್ವಯಂ ಸೇವಕಿಯರಾದ ಧನ್ಯ ನಿರೂಪಿಸಿ, ಮೇಘ ಸ್ವಾಗತಿಸಿ, ಗ್ರಂಥ ಧನ್ಯವಾದವಿತ್ತರು.

Related posts

ಗುರುವಾಯನಕೆರೆ ಸ. ಹಿ. ಪ್ರಾ. ಶಾಲೆಗೆ ಪುತ್ತೂರು ಸಹಾಯಕ ಆಯುಕ್ತ ಶ್ರವಣ್ ಕುಮಾರ್ ಭೇಟಿ

Suddi Udaya

ಲಾಯಿಲ : ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೇವೆಗೈದ ನಿವೃತ್ತ ಯೋಧ ಗಣೇಶ್ ಬಿ ಎಲ್ ರವರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಅಭಿನಂದನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ದೇವದಾಸ್ ಶೆಟ್ಟಿ ರವರಿಗೆ ಬೆಸ್ಟ್ ಪ್ರೆಸಿಡೆಂಟ್ ಮಲ್ಟಿಪಲ್ ಜಿಲ್ಲಾ ಅವಾರ್ಡ್

Suddi Udaya

ಉಜಿರೆ ಮಹಾಶಕ್ತಿ ಕೇಂದ್ರ ಹಾಗೂ ಯುವಮೋರ್ಚಾ ಬೆಳ್ತಂಗಡಿ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆ 

Suddi Udaya

ಕರ್ನಾಟಕ ಔಷಧಿ ವ್ಯಾಪಾರಿಗಳ ಸಂಘದಿಂದ ಉಜಿರೆಯ ಶ್ರೀಧರ‌ ಕೆ.ವಿ ರವರಿಗೆ ಸನ್ಮಾನ

Suddi Udaya

ಕರು ಕೊಂದ ಚಿರತೆಯ ಸೆರೆ ಕಾರ್ಯ ಆರಂಭಿಸಿದ ಅರಣ್ಯ ಇಲಾಖೆ

Suddi Udaya
error: Content is protected !!