September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕರಿಮಣೇಲು : ಮರೋಡಿ ಬೆಳ್ಳಿಬೀಡು ಬಸದಿಯ ಅನುವಂಶಿಕ ಆಡಳಿತ ಮೊಕೇಸ್ತರ ಕೆ. ಹೇಮರಾಜ್ ರವರಿಂದ ತಿಮ್ಮಣಬೆಟ್ಟು ಸ.ಉ.ಹಿ.ಪ್ರಾ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

ವೇಣೂರು: ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳು ನಿಜವಾಗಿಯೂ ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಕೇಂದ್ರಗಳಾಗಿವೆ ಇಂತಹ ಶಾಲೆಗಳ ವಿದ್ಯಾರ್ಥಿಗಳನ್ನು ಹಾಗೂ ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಸಮಾಜದ ಸರ್ವರ ಪ್ರೋತ್ಸಾಹ ಅಗತ್ಯವಿದೆ. ಶಾಲಾ ಎಸ್.ಡಿ.ಎಂ.ಸಿ, ಮುಖ್ಯಶಿಕ್ಷಕರು ಮತ್ತು ಶಿಕ್ಷಕ ವೃಂದ ಹಾಗೂ ಪೋಷಕರು ಸಹಕಾರವಿದ್ದಾಗ ಮಾತ್ರ ಗ್ರಾಮೀಣ ಪ್ರದೇಶಗಳ ಶಾಲೆಗಳ ಉನ್ನತಿ ಸಾಧ್ಯ ಎಂದು ಮರೋಡಿ ಬೆಳ್ಳಿಬೀಡು ಬಸದಿಯ ಅನುವಂಶಿಕ ಆಡಳಿತ ಮೊಕೇಸ್ತರ ಹಾಗೂ ಮೂಡುಬಿದಿರೆ ಶ್ರೀ ದಿಗಂಬರ ಜೈನ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಹೇಮರಾಜ್ ಬೆಳ್ಳಿಬೀಡು
ಹೇಳಿದರು.

ಅವರು ಕರಿಮಣೇಲು ಗ್ರಾಮದ ತಿಮ್ಮಣಬೆಟ್ಟು ಸರಕಾರಿ ಉ.ಹಿ.ಪ್ರಾ ಶಾಲಾ ಮಕ್ಕಳಿಗೆ ತಮ್ಮ ವೈಯಕ್ತಿಕ ನಿಧಿಯಿಂದ ಒಂದರಿಂದ ಏಳನೇ ತರಗತಿವರೆಗಿನ ಮಕ್ಕಳಿಗೆ ಇಡೀ ಶೈಕ್ಷಣಿಕ ವರ್ಷಕ್ಕೆ ಅಗತ್ಯವಿರುವ ನೋಟ್ ಪುಸ್ತಕಗಳನ್ನು ಮತ್ತು ಇತರ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು. ಕಾರ್ಯಕ್ರಮವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿದರು.


ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಜೈನ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಭಾಗವಹಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ ಹಾಗೂ ಗ್ರಾಮ ಪಂಚಾಯತ್ ಸದಸ್ಯೆ ಸುಮ, ಮರಾಠಿ ಸೇವಾ ಸಂಘದ ಅಧ್ಯಕ್ಷ ವಿಠಲ ನಾಯ್ಕ, ಮಾಜಿ ಅಧ್ಯಕ್ಷ ಲಕ್ಷ್ಮಣ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.


ಶಾಲಾ ಮುಖ್ಯ ಶಿಕ್ಷಕ ಸಚಿನ್ ಬೇಗೂರ್ ಸ್ವಾಗತಿಸಿ, ಶಾಲಾ ಶಿಕ್ಷಕಿ ಗಾಯತ್ರಿ ಪ್ರಶಾಂತ್ ಅತಿಥಿಗಳಾದ ಕೆ. ಹೇಮರಾಜ್ ರವರನ್ನು ಸಭೆಗೆ ಪರಿಚಯಿಸಿದರು. ಶಿಕ್ಷಕಿ ಕವಿತಾ ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜುನಾಯ್ಕ ವಂದಿಸಿದರು.

Related posts

ಉಜಿರೆ ಗ್ರಾ.ಪಂ. ವ್ಯಾಪ್ತಿಯ ಯುವ ಮತಗಟ್ಟೆ ಸಂಖ್ಯೆ 98ರಲ್ಲಿ ಬಿರುಸಿನ ಮತದಾನ

Suddi Udaya

ಪೆರಾಲ್ಡಕಟ್ಟೆಯಲ್ಲಿ ಶಿವರಾತ್ರಿಯ ದಿನ ಯುವಕರ ತಂಡದಿಂದ ರಸ್ತೆಯಲ್ಲಿ ಕೀಟಲೆ: ಪ್ರಶ್ನಿಸಿದ ಪೊಲೀಸ್ ಮೇಲೆ ಹಲ್ಲೆ ಆರೋಪ; ಮೂವರ ಬಂಧನ

Suddi Udaya

ಬಳಂಜ ಗ್ರಾ.ಪಂ. ನ ಅಭಿವೃದ್ಧಿಯ ಓಟಕ್ಕೆ ಒಲಿದ ಪ್ರತಿಷ್ಠಿತ ಗಾಂಧಿ ಪುರಸ್ಕಾರ: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್,ಸಚಿವ ಪ್ರಿಯಾಂಕ್ ಖರ್ಗೆರವರಿಂದ ಪ್ರಶಸ್ತಿ ಪ್ರದಾನ

Suddi Udaya

ಮುಂಡಾಜೆಯ ರಸ್ತೆ ಬದಿ ಕಾಡಾನೆ ಪ್ರತ್ಯಕ್ಷ

Suddi Udaya

ಮತ್ಸ್ಯತೀರ್ಥ ಪ್ರಖ್ಯಾತ ಶಿಶಿಲ ದೇವಾಲಯದ ಮೀನುಗಳಿಗೆ ಭಕ್ತರು ಅರಳು ಹಾಕುವುದಕ್ಕೆ ನಿಷೇಧ- ದೇವಾಲಯದ ಆಡಳಿತ ನಿಧಾ೯ರ

Suddi Udaya

ಶಿಶಿಲ: ಚಿಕನ್ ಸೆಂಟರ್ ಶುಭಾರಂಭ

Suddi Udaya
error: Content is protected !!