24.6 C
ಪುತ್ತೂರು, ಬೆಳ್ತಂಗಡಿ
March 6, 2026
Uncategorized

ಕುಮಟಾದಲ್ಲಿ ಶ್ರೀ ಮಹಾಮಂಡಲೇಶ್ವರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತಾಚರಣೆ:ಶಾಸಕ ಹರೀಶ್ ಪೂಂಜ ಸಹಿತ ಬೆಳ್ತಂಗಡಿಯಿಂದ ಹಲವು ಗಣ್ಯರು ಭಾಗಿ

ಕುಮಟಾದಲ್ಲಿ ಶ್ರೀ ಮಹಾಮಂಡಲೇಶ್ವರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತಾಚರಣೆಶಾಸಕ ಹರೀಶ್ ಪೂಂಜ ಸಹಿತ ಬೆಳ್ತಂಗಡಿಯಿಂದ ಹಲವು ಗಣ್ಯರು ಭಾಗಿಧರ್ಮಸ್ಥಳ: ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ 1008 ಮಹಾಮಂಡಲೇಶ್ವರ ಸದ್ಗುರು ಬ್ರಹ್ಮಾನಂದ ಸರಸ್ವತಿ ಜೀ ಮಹಾರಾಜ್ ಅವರ 6 ನೇ ವರ್ಷದ ಚಾರ್ತುಮಾಸ್ಯ ವೃತಾಚರಣೆ ಉತ್ತರ ಕನ್ನಡದ ಕುಮಟಾದ ಕೋನಳ್ಳಿ ಶ್ರೀ ವನದುರ್ಗಾ ದೇವಾಲಯದಲ್ಲಿ ಜು.10 ರಿಂದ ಪ್ರಾರಂಭಗೊಂಡು ಆ.20ರವರೆಗೆ ನಡೆಯಲಿದೆ.

ಚಾತುರ್ಮಾಸ್ಯ ಗುರು ಪೂರ್ಣಮೆಯ ದಿನವಾದ ಇಂದು (ಜು.10 ) ಸಚಿವ ಮಂಕಾಳ್ ಎಸ್. ವೈದ್ಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಚಿವ ಮಧು ಬಂಗಾರಪ್ಪ ವಹಿಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ಸಂಸದರು ಹಾಗೂ ಉಪಸ್ಥಿತರಿದ್ದರು. ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಉದ್ಯಮಿ ಕಿರಣ್ ಕುಮಾರ್ ಮಂಜಿಲ, ವೇಣೂರು ಉದ್ಯಮಿ ರಾಜೇಶ್ ಪೂಜಾರಿ ಮೂಡುಕೋಡಿ, ಬಿಜೆಪಿ ಮುಖಂಡರಾದ ಸದಾನಂದ ಪೂಜಾರಿ ಉಂಗಿಲಬೈಲು, ಶಿರ್ಲಾಲು ಸಿ.ಎ ಬ್ಯಾಂಕ್ ಅಧ್ಯಕ್ಷ ಸುಧೀರ್ ಆರ್ ಸುವರ್ಣ, ಕಣಿಯೂರು ಶಕ್ತಿ ಕೇಂದ್ರದ ಅಧ್ಯಕ್ಷ ಮಹೇಶ್ ಕೋಟ್ಯಾನ್, ಅಳದಂಗಡಿ ಗ್ರಾ.ಪಂ ಸದಸ್ಯರಾದ ಹರೀಶ್ ಆಚಾರ್ಯ, ರವಿ ಪೂಜಾರಿ ಸ್ವಾಮೀಜಿಯವರ ಆಶೀರ್ವಾದವನ್ನು ಪಡೆದುಕೊಂಡದರು.

ಬೆಳಿಗ್ಗೆ ವನದುರ್ಗಾ ದೇವಾಲಯದಲ್ಲಿ ಚಾತುರ್ಮಾಸ್ಯ ವ್ರತ ಸಂಕಲ್ಪ ಪ್ರಯುಕ್ತ ರಾಮತಾರಕ ಯಜ್ಞ ಹಾಗೂ ವೈದಿಕ ವಿಧಿ ವಿಧಾನಗಳು ನೆರವೇರಿತು. ಬಳಿಕ ಕುಮಟಾ ನಾಮಧಾರಿ ಸಭಾಭವನ ಆವರಣದಲ್ಲಿ ವೆಂಕಟರಮಣ ದೇವರಿಗೆ ಪೂಜೆ ಸಲ್ಲಿಸಿ, ಶ್ರೀಗಳ ಪುರಪ್ರವೇಶದ ಮೆರವಣಿಗೆ ಆರಂಭಗೊಂಡು, 11 ಗಂಟೆಗೆ ವನದುರ್ಗಾದೇವಿಗೆ ವಿಶೇಷ ಪೂಜೆ ನಡೆಯಿತು. ಬಳಿಕ ಶ್ರೀಗಳವರ ಗುರುಪೂರ್ಣಿಮೆಯ ವ್ಯಾಸ ಪೀಠದ – ಸದ್ಗುರು ಬ್ರಹ್ಮಾನಂದ ಶ್ರೀ ಪೀಠಾರೋಹಣ, ಗುರು ಪಾದುಕಾ ಪೂಜೆ, ಶ್ರೀಗಳ ಆಶೀರ್ವಚನ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

Related posts

ಜೂ.12 ಬೆಳ್ತಂಗಡಿಯಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆ

Suddi Udaya

ಕನ್ಯಾಡಿ ಸರ್ಕಾರಿ ಶಾಲೆಯಲ್ಲಿ ವಿಶ್ವ ಯೋಗ ದಿನ ಆಚರಣೆ

Suddi Udaya

ನಂದಿನಿ ಹಾಲಿನ ದರ 4 ರೂ. ಏರಿಕೆ

Suddi Udaya

ಉಡುಪಿ ಶ್ರೀಕೃಷ್ಣ ಮಾಸೋತ್ಸವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ದಂಪತಿಗಳಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಬೆಳ್ತಂಗಡಿ: ಅಪ್ಸರಾ ಫ್ಯಾಶನ್ ಸೆಂಟರ್ ಹಾಗೂ ಮಿಷ್‌ಮಷ್ ಫ್ಯಾನ್ಸಿ & ಗಿಫ್ಟ್ ಸೆಂಟರಿನಲ್ಲಿ ಕ್ರಿಸ್ ಮಸ್ ಮತ್ತು ಹೊಸ ವರುಷದ ಪ್ರಯುಕ್ತ ಸ್ಪೆಷಲ್ ಆಫರ್: ಪ್ರತಿ ಖರೀದಿಯ ಮೇಲೆ ಶೇ.20 ಡಿಸ್ಕೌಂಟ್

Suddi Udaya
error: Content is protected !!