37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಎಸ್.ಡಿ.ಎಂ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಗಾನವಿ ಡಿ. ರವರಿಗೆ ಪಿಎಚ್.ಡಿ ಪದವಿ

ಉಜಿರೆಯ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಗಾನವಿ ಡಿ. ಅವರು “ಸಿಂಥೆಸಿಸ್ ಅಂಡ್ ಬೈಯೋಲಾಜಿಕಲ್ ಆಕ್ಟಿವಿಟಿ ಸ್ಟಡೀಸ್ ಆಫ್ ಸಮ್ ಸಿಂಪಲ್ ಅಂಡ್ ಫ್ಯೂಸ್‌ಡ್ ನೈಟ್ರೋಜನಸ್ ಹೆಟೆರೋಸೈಕ್ಲಸ್”(Synthesis and Biological Activity Studies of Some Simple and Fused Nitrogenous Heterocycles) ಎಂಬ ಶೀರ್ಷಿಕೆಯಲ್ಲಿ ಮಹಾಪ್ರಬಂಧವನ್ನು ಯಶಸ್ವಿಯಾಗಿ ಮಂಡಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯ ರಸಾಯನಶಾಸ್ತ್ರ ವಿಭಾಗದ ಅಧ್ಯಕ್ಷರು ಹಾಗೂ ಮಾರ್ಗದರ್ಶಕರಾದ ಪ್ರೊ. ಭೋಜ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧ ಮಂಡಿಸಿದ್ದಾರೆ. ಸಮರ್ಥ ಶೋಧನಾ ಕಾರ್ಯಕ್ಕೆ ಬೆಂಗಳೂರು ಸಿಟಿ ಯುನಿವರ್ಸಿಟಿಯ ರಸಾಯನ ಶಾಸ್ತ್ರ ವಿಭಾಗದ ಸೀನಿಯರ್ ಪ್ರೊಪೆಸರ್ ಡಾ. ಹರಿಪ್ರಸಾದ್ ಎಸ್. ಇವರ ಸಮ್ಮುಖದಲ್ಲಿ ಡಾ. ಗಾನವಿ ಡಿ. ಅವರಿಗೆ ಜುಲೈ11 ರಂದು ಪಿಎಚ್.ಡಿ ಪದವಿ ನೀಡಲಾಯಿತು.

ಉಜಿರೆಯ ಲಲಿತನಗರದ ನಿವಾಸಿಯಾಗಿರುವ ಇವರು ಧರ್ಮಸ್ಥಳದ ದೇವಸ್ಥಾನ ಕಚೇರಿಯ ಮುಖ್ಯ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಉದಯ ಜೈನ್ ಅವರ ಪತ್ನಿ.

Related posts

ಬೆಳ್ತಂಗಡಿ ತಾಲೂಕು ಆಡಳಿತ ಸೌಧಕ್ಕೆ ದ.ಕ.ಜಿಲ್ಲಾಧಿಕಾರಿ ಮುಲೈ ಮುಹಿಲನ್ ಧಿಡೀರ್ ಭೇಟಿ

Suddi Udaya

ಕೊಡಗು ವಿಶ್ವವಿದ್ಯಾನಿಲಯ ಉಪಕುಲಪತಿ ಡಾ ಅಶೋಕ್ ಆಲೂರ್ ಸಿರಿ ಸಂಸ್ಥೆಗೆ ಭೇಟಿ

Suddi Udaya

ತೆಕ್ಕಾರು : ಇಸ್ಮಾಯಿಲ್ ಮೇಲವ ನಿಧನ

Suddi Udaya

ಫೆ 16: ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಜಾತ್ರೋತ್ಸವ,ಫೆ 19 ಭೈರವಕಲ್ಲಿನ ಪುರುಷರಾಯ ಜಾತ್ರೆ

Suddi Udaya

ಯುಟ್ಯೂಬರ್ ಸಮೀರ್ ಎಂಡಿ ವಿರುದ್ದ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ‌ ದಾಖಲು

Suddi Udaya

ಉಜಿರೆ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಿಂದ ಬೆಂಕಿ ರಹಿತ ಪೌಷ್ಟಿಕ ಆಹಾರ ತಯಾರಿ ಸ್ಪರ್ಧೆ

Suddi Udaya
error: Content is protected !!