September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ನಡ ಸರಕಾರಿ ಪ್ರೌಢ ಶಾಲಾ ಸಂಸತ್ ಚುನಾವಣೆಯ ಪ್ರಮಾಣ ವಚನ ಕಾರ್ಯಕ್ರಮ

ನಡ : ಇಲ್ಲಿಯ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆಯಲ್ಲಿ ಆಯ್ಕೆಯಾದ ಚುನಾಯಿತರ ಪ್ರಮಾಣ ವಚನ ಕಾರ್ಯಕ್ರಮವು ಜು. 12 ರಂದು ಜರುಗಿತು.

ಮುಖ್ಯ‌ ಮಂತ್ರಿಯಾಗಿ ಕು.ರಝ್ಮೀನಾ ಫಾತಿಮಾ, ಉಪ ಮುಖ್ಯ ಮಂತ್ರಿಯಾಗಿ ಆಯ್ಕೆಗೊಂಡ ಅತೀಶ್ ಗೌಡ ಹಾಗೂ ಮೊಹಮ್ಮದ್ ನದೀಂ ಪ್ರಮಾಣ ವಚನ ಸ್ವೀಕರಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಳ್ತಂಗಡಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಪರಿವೀಕ್ಷಕರಾದ ಶ್ರೀಮತಿ ಸುಜಯ ಬಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಶಿಕ್ಷಕರಾದ ಮೋಹನ‌ ಬಾಬು ಡಿ ಪ್ರಾಸ್ತಾವಿಕ ನುಡಿಗಳ ಮೂಲಕ ಸ್ವಾಗತಿಸಿದರು. ಸುರೇಶ್ ಶೆಟ್ಟಿ ನಿರೂಪಿಸಿ, ಶಿವಪುತ್ರ ಸುಣಗಾರ ಕಾರ್ಯಕ್ರಮದ ಆಯೋಜನೆಯನ್ನು ಮಾಡಿದರು. ಶಿಕ್ಷಕಿಯರಾದ ಜಯ ಸ್ಟ್ರೆಲ್ಲಾ, ಸೆಫಿಯಾ, ನಿಶಾ ಕುಮಾರಿ ಹಾಗೂ ಲವೀನಾ ಉಪಸ್ಥಿತರಿದ್ದರು.

Related posts

 ಜು. 4 : ವೇಣೂರಿನಲ್ಲಿ ಯಕ್ಷಗಾನ ತರಗತಿ ಆರಂಭ

Suddi Udaya

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಪೋಷಣಾ ಜಾಗೃತಿ ಕಾರ್ಯಕ್ರಮ

Suddi Udaya

ಎಸ್.ಎಸ್.ಎಲ್.ಸಿ ಮರು ಮೌಲ್ಯ ಮಾಪನ: ಲಾಯಿಲ ವಿದ್ಯಾರ್ಥಿನಿ ತನ್ವಿ ಭಟ್ ಎಂ ಅವರಿಗೆ 624 ಅಂಕ, ರಾಜ್ಯಕ್ಕೆ 2 ನೇ ಸ್ಥಾನ, ಬೆಳ್ತಂಗಡಿ ತಾಲೂಕಿಗೆ ಪ್ರಥಮ

Suddi Udaya

ಜಿಲ್ಲೆಯ ಬಡವರ ಮನೆ ಕಟ್ಟುವ ಮರಳಿನ ಸಮಸ್ಯೆ ಸರಿಪಡಿಸುವಂತೆ ಮೋಹನ್ ಗೌಡ ಕಲ್ಮಂಜ ರವರಿಂದ ಸರಕಾರಕ್ಕೆ ಮನವಿ

Suddi Udaya

ಶಾಲಾ ವಾಹನ ಹಾಗೂ ಕಾರ್ ನಡುವೆ ರಸ್ತೆ ಅಪಘಾತ

Suddi Udaya

ಲಾಯಿಲ: ಶ್ರೀ ಗಾಯತ್ರೀ ವಿಶ್ವಕರ್ಮ ಮಹಿಳಾ ಸಂಘದಿಂದ ಶ್ರೀ ಕಾಳಿಕಾಂಬಾ ಪೂಜೆ ಮತ್ತು ಶ್ರೀ ವರಮಹಾಲಕ್ಷ್ಮೀ ಪೂಜೆ

Suddi Udaya
error: Content is protected !!